ಗ್ರಾಪಂ ಉಪಚುನಾವಣೆ-ನೀತಿ ಸಂಹಿತೆ ತಂಡ ರಚನೆ

ಕೋಲಾರ.ಜು೮:ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ರಾಜ್ಯದಲ್ಲಿನ ಗ್ರಾಪಂಗಳಿಗೆ ಉಪ ಚುನಾವಣೆ ನಡೆಸಲು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿ ಆದೇಶ ಹೊರಡಿಸಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, ೧೯೯೩ರ ಪ್ರಕರಣ ೩೦೮ ಎಸಿ ರಂತೆ ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಪಂ ವ್ಯಾಪ್ತಿಯಲ್ಲಿ ಜೂ.೬ರಿಂದ ಜೂ.೨೬ ರವರೆಗೆ ಜಾರಿಯಲ್ಲಿರುತ್ತದೆ.
ನೀತಿ ಸಂಹಿತೆಯು ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು ನಗರಸಭೆ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ. ನೀತಿ ಸಂಹಿತೆಯು ಯಾವುದೇ ರೀತಿಯಲ್ಲೂ ಉಲ್ಲಂಘನೆಯಾಗದಂತೆ ನಿಗಾ ವಹಿಸಲು ಹಾಗೂ ರಾಜ್ಯ ಚುನಾವಣಾ ಆಯೋಗವು ಕಾಲಕಾಲಕ್ಕೆ ನಿರ್ದೇಶಿಸಲಾಗುವ ಮಾರ್ಗಸೂಚಿಗಳನ್ನು, ಸದಾಚಾರ ಸಂಹಿತೆಯ ಅಂಶಗಳನ್ನು ಕರಾರುವಕ್ಕಾಗಿ ಜಾರಿ ಮಾಡುವುದರ ಜೊತೆಗೆ ಉಲ್ಲಂಘನೆಯಾಗದಂತೆ ನಿಗಾ ವಹಿಸುವ ಬಗ್ಗೆ ಎಚ್ಚರ ವಹಿಸಲು ಮೇಲ್ವಿಚಾರಣೆ ಕೈಗೊಳ್ಳಲು ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕುಗಳ ಚುನಾವಣೆ ನಡೆಯುವ ಗ್ರಾಪಂಗಳ (ಕ್ಷೇತ್ರಗಳ) ಮಟ್ಟದಲ್ಲಿ ಮಾದರಿ ನೀತಿ ಸಂಹಿತೆಯ ತಂಡಗಳನ್ನು ರಚಿಸಲು ಉದ್ದೇಶಿಸಿದ್ದು ಅದರಂತೆ, ಜೂ.೬ರಿಂದ ಜಾರಿಗೆ ಬರುವಂತೆ ಮತ್ತು ಚುನಾವಣೆ ಪ್ರಕ್ರಿಯೆಯು ಮುಕ್ತಾಯಗೊಳ್ಳುವವರೆಗೆ ಅಂದರೆ ಜೂ.೨೬ರವರೆಗೆ ಜಾರಿಯಲ್ಲಿರುವಂತೆ ಈ ಕೆಳಕಂಡಂತೆ ಸದಾಚಾರ ಸಂಹಿತೆಯ ತಂಡಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಚಿಸಲಾಗಿದೆ.
ಈ ರೀತಿ ರಚಿಸಲಾಗಿರುವ ತಂಡಗಳು ಮುಕ್ತ ಮತ್ತು ನ್ಯಾಯಯುತ ಹಾಗೂ ಶಾಂತಿಯುತವಾಗಿ ಚುನಾವಣೆಗಳನ್ನು ನಿರ್ವಹಿಸಲು ರಾಜ್ಯ ಚುನಾವಣಾ ಆಯೋಗವು ನಿಗಧಿಪಡಿಸಿರುವ ಸದಾಚಾರ ಸಂಹಿತೆ ಎಲ್ಲಾ ರಾಜಕೀಯ ಪಕ್ಷಗಳು, ಸ್ಪರ್ಧಿಸುವ ಅಭ್ಯರ್ಥಿಗಳು, ಸಚಿವರು, ಸರ್ಕಾರಿ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ಸಾರ್ವಜನಿಕ ಸೇವೆಯಲ್ಲಿರುವ ಎಲ್ಲರಿಗೂ ಅನ್ವಯವಾಗುತ್ತದೆ.
ಮಾದರಿ ನೀತಿ ಸಂಹಿತೆ ತಂಡದಲ್ಲಿರುವ ಅಧಿಕಾರಿ/ಸಿಬ್ಬಂದಿ ವಿವರ:
ಶ್ರೀನಿವಾಸಪುರ ತಾಲ್ಲೂಕಿನ ೨೨-ಮಾಸ್ತೇನಹಳ್ಳಿ ಗ್ರಾಪಂಗೆ ಶ್ರೀನಿವಾಸಪುರ ತಾಲ್ಲೂಕಿನ ಗ್ರೇಡ್-೨ ತಹಶೀಲ್ದಾರ್ ಕೆ.ಎಲ್. ಜಯರಾಂ-೯೪೪೯೪೭೨೭೩೫, ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕ ಬಿ.ವಿ.ಮುನಿರೆಡ್ಡಿ-೯೯೦೦೬೪೨೯೯೨, ಗ್ರಾಮ ಆಡಳಿತ ಅಧಿಕಾರಿ ಭೀಮ್ ರಾವ್-೭೨೫೯೮೨೩೭೬೪, ಪಿ.ಸಿ. ೬೮೪ ಗಣೇಶ್-೯೯೭೨೯೦೭೯೮೩ ಹಾಗೂ ಅಬಕಾರಿ ಸಿಬ್ಬಂದಿ ತಂಡದಲ್ಲಿರುತ್ತಾರೆ.
ಮುಳಬಾಗಿಲು ತಾಲ್ಲೂಕಿನ ೧೩-ನಂಗಲಿ ಗ್ರಾಪಂ ಮುಳಬಾಗಿಲು ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ರವಿಕುಮಾರ್-೯೯೧೬೭೮೪೭೬೭, ಬೈರಕೂರು ಹೋಬಳಿಯ ರಾಜಸ್ವ ನಿರೀಕ್ಷಕ ಉಮೇಶ್-೯೮೪೫೧೫೫೦೬೩, ಕಂ.ವೃ. ನಂಗಲಿಯ ಗ್ರಾಮ ಆಡಳಿತ ಅಧಿಕಾರಿ ಅಶ್ವಥ್-೯೯೮೦೩೩೬೪೬೨, ಪಿ ಸಿ ೫೪೨ ಆರುಣ್ ಕುಮಾರ್-೮೯೦೪೩೩೮೮೩೧ ಹಾಗೂ ಅಬಕಾರಿ ಸಿಬ್ಬಂದಿ ತಂಡದಲ್ಲಿರುತ್ತಾರೆ.
ಮುಳಬಾಗಿಲು ತಾಲ್ಲೂಕಿನ ೨೧-ಬಲ್ಲ ಗ್ರಾಪಂಯ ಮುಳಬಾಗಿಲು ತಾಪಂ ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕ ರವಿಚಂದ್ರ-೯೯೦೦೯೯೪೦೫೦, ಆವಣಿ ಹೋಬಳಿಯ ರಾಜಸ್ವ ನಿರೀಕ್ಷಕ ಸುಬ್ರಮಣಿ-೯೪೪೮೨೩೧೫೦೫, ರೆಡ್ಡಿಹಳ್ಳಿ ಕಂ.ವೃ. ಗ್ರಾಮ ಆಡಳಿತ ಅಧಿಕಾರಿ ಶೇಖರ್-೯೯೦೨೫೬೫೭೮೧, ಪಿ ಸಿ ನಂ ೧೪೩ ಅಣಯ್ಯ-೭೭೬೦೮೩೪೬೭೧ ಹಾಗೂ ಅಬಕಾರಿ ಸಿಬ್ಬಂದಿ ತಂಡದಲ್ಲಿರುತ್ತಾರೆ.
ಮುಳಬಾಗಿಲು ತಾಲ್ಲೂಕಿನ ೨೭-ದೂಲಪಲ್ಲಿ ಗ್ರಾಪಂ ಮುಳಬಾಗಿಲು ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆನಂದ್-೯೦೦೮೦೮೭೮೦೧, ತಾಯಲೂರು ಹೋಬಳಿಯ ರಾಜಸ್ವ ನಿರೀಕ್ಷಕ ಸತೀಶ್ವರ್-೯೯೮೦೧೩೩೭೭೬, ದೂಲಪಲ್ಲಿ ಕಂ.ವ್ಯ. ಗ್ರಾಮ ಆಡಳಿತ ಅಧಿಕಾರಿ ದೇವರಾಜ್-೮೮೮೪೧೪೧೨೫೪, ಪಿ.ಸಿ. ನಂ. ೧೨೭ ಮಂಜುನಾಥ್ ರೆಡ್ಡಿ-೯೯೧೬೭೩೦೧೯೦ ಹಾಗೂ ಅಬಕಾರಿ ಸಿಬ್ಬಂದಿ ತಂಡದಲ್ಲಿರುತ್ತಾರೆ.