ಗ್ರಾಪಂ ಅಭ್ಯರ್ಥಿಗಳ ಹಣೆ ಬರಹ ಬರೆದ ಮತದಾರ ಪ್ರಭು, ಅಭ್ಯರ್ಥಿಗಳ ಭವಿಷ್ಯ ಭದ್ರ, 30ಕ್ಕೆ ಫಲಿತಾಂಶ

ಬಸವಕಲ್ಯಾಣ:ಡಿ.23:ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಜರುಗಿದ 31 ಗ್ರಾಮ ಪಂಚಾಯತನಲ್ಲಿನ 544 ಅಭ್ಯರ್ಥಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 1671 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಹೀಗಾಗಿ ಮತದಾರರು ಸೂಕ್ತ ಅಭ್ಯರ್ಥಿಗೆ ಮತ ಹಾಕುವ ಮೂಲಕ ತನ್ನ ಕರ್ತವ್ಯ ಮುಗಿಸಿದ್ದಾರೆ.

ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನದ ಪ್ರಕ್ರಿಯೆ ಸಾಯಂಕಾಲ 5 ಗಂಟೆಯವರೆಗೂ ಜರುಗಿತು. ಹೀಗಾಗಿ ಅಭ್ಯರ್ಥಿಗಳ ಹಣೆ ಬರಹವನ್ನು ಇವಿಎಮ್ ಮಷೀನ್‍ನಲ್ಲಿ ಭದ್ರವಾಗಿದ್ದು, ಮತದಾರ ಪ್ರಭು ಮಾತ್ರ ಯಾರಿಗೆ ಬೇವು ಯಾರಿಗೆ ಬೆಲ್ಲ ನೀಡಿದ್ದಾರೆ ಎಂಬುದು ತಿಳಿಯಬೇಕಿದ್ದರೆ ಡಿ-30ರ ವರೆಗೂ ಕಾಯಬೇಕಿದೆ.

ಗ್ರಾಮೀಣ ಪ್ರದೇಶದಲ್ಲಿನ ಜನರು ಬೆಳಿಗ್ಗೆ ಮತದಾನ ಕೇಂದ್ರದ ಕಡೆ ಹೆಚ್ಚು ಮುಖ ಮಾಡಲಿಲ್ಲ ಆದರೆ ಸೂರ್ಯನ ಕಾವು ಹೆಚ್ಚಾದಂತೆ ಜನರು ಮತದಾನದ ಕೇಂದ್ರದ ಕಡೆ ಬರಲಾರಂಭಿಸಿದರು. ಮತದಾನ ಕೇಂದ್ರದ ಹೊರಗಡೆ ಅಭ್ಯರ್ಥಿಗಳ ಪರ ಇರುವ ಜನರು ಮತದಾರರಿಗೆ ಕೈ ಮುಗಿದು ನಮಗೇ ಮತ ನೀಡುವಂತೆ ಕೇಳಿಕೊಳ್ಳುವ ದೃಷ್ಯಗಳು ಬಹುತೇಕ ಗ್ರಾಮಗಳಲ್ಲಿ ಕಂಡು ಬಂದವು.

ತಾಲೂಕಿನಲ್ಲಿ ಒಟ್ಟು 31 ಗ್ರಾಪಂಗಳಿದ್ದು 578 ಸ್ಥಾನಗಳಿಗೆವೆ. ಈಗಾಗಲೇ 33 ಗ್ರಾಪಂ ಸದಸ್ಯ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕಿನ ಹಣಮಂತವಾಡಿ ಗ್ರಾಮದಲ್ಲಿ ಯಾರೂ ನಾಮಪತ್ರ ಸಲ್ಲಿಸಿದ ಕಾರಣ ಉಳಿದ 544 ಸ್ಥಾನಗಳಿಗೆ ಮಂಗಳವಾರ ಮತದಾನ ಪ್ರಕ್ರಿಯೆ ಜರುಗಿತು. ಹೀಗಾಗಿ ಒಟ್ಟಾರೆ ಶೇ- ( )ಇಷ್ಟು ಮತದಾನ ವಾಗಿದೆ.

ಬಹುತೇಕ ಗ್ರಾಮಗಳಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮತದಾನಕ್ಕೆ ಆಗಮಿಸುವ ಮತದಾರರು ಶಾಂತ ರೀತಿಯಿಂದ ಸರದಿ ಸಾಲಿನಲ್ಲಿ ನಿಂತು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಮಹಿಳೆಯರು, ಯುವ ಸಮೂಹದ ಯುವಕರು, ಯುವತಿಯರು ಹಾಗೂ ವೃದ್ದರು ಪಾಲ್ಗೊಂಡಿದ್ದರು. ಅಲ್ಲದೆ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಚುನಾವಣೆ ಜರುಗಿತು. ಅಲ್ಲದೆ ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗಿಲ್ಲ ಎಲ್ಲವೂ ಶಾಂತ ರೀತಿಯಿಂದ ಗ್ರಾಪಂ ಚುನಾವಣೆಯ ಮತದಾನದ ಪ್ರಕ್ರಿಯೆ ನಡೆಯಿತು.