ಗ್ರಾಪಂ: ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಬಿಜೆಪಿ ಮಡಿಲಿಗೆ

ಚನ್ನಮ್ಮನ ಕಿತ್ತೂರ,ಜು31: ತಾಲೂಕಿನ ನಿಚ್ಚಣಕಿ ಗ್ರಾ.ಪÀಂ.ಗೆ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆಯಿತು. ಹಣಾಹಣಿಯಲ್ಲಿ ಗೆದ್ದು ಸತತವಾಗಿ ಕಾಂಗ್ರೇಸ್ ತೆಕ್ಕೆಯಲ್ಲಿ ಉಳಿಸಿಕೊಳ್ಳುವ ಗ್ರಾ.ಪಂ. ಈಗ ಬಿಜೆಪಿ ತೆಕ್ಕೆಗೆ ಬಿದ್ದಿದೆ.
18 ಸದಸ್ಯರನ್ನೊಳಗೊಂಡ ಪಂಚಾಯತಿ ಸಾಮಾನ್ಯ ಮಹಿಳಾ ಶ್ರೀಮತಿ ಕಾವ್ಯಾ ಮುರಗೋಡಮಠ 11 ಮತ ಪಡೆದು ಅಧ್ಯಕ್ಷರಾಗಿ , ಉಪಾಧ್ಯಕ್ಷರಾಗಿ 10 ಮತಗಳನ್ನು ಪಡೆದು ಉಮೇಶಸಿಂಗ ರಾವುತನವರ ಆಯ್ಕೆಯಾಗಿದ್ದಾರೆ.
ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ, ಉದ್ಯಮಿ ಮಹಾಂತೇಶ ದೊಡ್ಡಗೌಡರ, ಸಂಸದ ಅನಂತಕುಮಾರ ಹೆಗಡೆ, ಮಾಜಿ ವಿಧಾನಪರಿಷತ್ತ ಸದಸ್ಯ ಮಹಾಂತೇಶ ಕೌಟಗಿಮಠ, ಬೆಂಬಲಿಗರಾದ ಬಸವರಾಜ ಮಾತನವರ, ಉಮೇಶ ವರಗನ್ನವರ, ಅಭಿಷೇಕ ವರಗನ್ನವರ, ದುಂಡಯ್ಯ ಕಾಂತಿಮಠ, ಕುತುಬುದ್ದೀನ್ ಖಾನಬಾಯಿ, ಈರಣ್ಣಾ ದ್ಯಾಮಣ್ಣವರ, ಶಂಕರ ಹಳೇಮನಿ, ದೇವಪ್ಪ ಪಾಗಾದ, ಸೇರಿದಂತೆ ಗ್ರಾಮಸ್ಥರಿದ್ದರು.