ಗ್ರಾಪಂಗಳಲ್ಲಿ ಸ್ವಚ್ಚತಾ ಅಭಿಯಾನ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿ ಬಳ್ಳಾರಿ

ಬಳ್ಳಾರಿ ಜೂ 07 : ಸ್ವಚ್ಚಭಾರತ ಮಿಷನ್ ಯೋಜನೆಯನ್ನು ಗ್ರಾಮ ಪಂಚಾಯ್ತಿಗಳಲ್ಲಿ ಅನುಷ್ಟಾನ ಮಾಡುವಲ್ಲಿ ಕೊಡಗು ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಅವಿಭಜಿತ ಬಳ್ಳಾರಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯ್ತಿ ರಾಜ್ ಸಚಿವ ಕೆ.ಎಸ್.ಈರ್ಶವರಪ್ಪ ಹೇಳಿದ್ದಾರೆ.
ಅವರಿಂದು ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲೆಯ 64 ಗ್ರಾಮ ಪಂಚಾಯ್ತಿಗಳಿಗೆ ಘನ ತ್ಯಾಜ್ಯ ಸಂಗ್ರಹಣೆಯ ವಾಹನಗಳನ್ನು ವಿಲೇವಾರಿ ಮಾಡಿ ಮಾತನಾಡುತ್ತಿದ್ದರು.
ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ 237 ಗ್ರಾಮ ಪಂಚಾಯ್ತಿಗಳಿಗೆ, ಈ ಹಿಂದೆ 137 ಗ್ರಾಮ ಪಂಚಾಯ್ತಿಗಳಲ್ಲಿ ಸ್ವಚ್ಚಭಾರತ ಮಿಷನ್ ಯೋಜನೆಯನ್ನು ಜಾರಿಗೆ ತಂದು ಕಸ ಸಂಗ್ರಹ ಕಾರ್ಯ ನಡೆದಿದೆ. ಈಗ 64 ಗ್ರಾಮ ಪಂಚಾಯ್ತಿಗಳಿಗೆ ವಾಹನಗಳನ್ನು ನೀಡುತ್ತಿದೆ. ಇನ್ನುಳಿದ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ಬರುವ ಎಂಟತ್ತು ದಿನದಲ್ಲಿ ವಾಹನಗಳನ್ನು ನೀಡಿ ಸಂಪೂರ್ಣ ಸ್ವಚ್ಚಭಾರತ ಮಿಷನ್ ಯೋಜನೆಯ ಜಿಲ್ಲೆಯನ್ನಾಘಿ ಮಾಡಲಿದೆಂದರು.

ಗ್ರಾಮೀಣ ಪ್ರದೇಶದಲ್ಲಿನ ಕೋವಿಡ್ ಸೋಂಕಿನ ಬಗ್ಗೆ ಮಾತನಾಡುತ್ತ. ಈ ಮೊದಲು ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಕೊರತೆ ಇತ್ತು. ಅಲ್ಲದೆ ಅವರಿಗೆ ಹೋಮ್ ಐಸೊಲೇಷನ್ ಮಾಡಿದ್ದರಿಂದ ಸೋಂಕು ವ್ಯಾಪಕವಾಘಿ ಹರಡುತ್ತಿತ್ತು. ಈಗ ಹೋಮ್ ಐಸೊಲೇಷನ್ ರದ್ದು ಮಾಡಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆದ ಮೇಲೆ ಮತ್ತು ಲಾಕ್‍ಡೌನ್ ಘೋಷಣೆ ಮಾಡಿದ ಮೇಲೆ ಜನರ ಓಡಾಟವೂ ಕಡಿಮೆಯಾದ್ದರಿಂದ ಅಲ್ಲದೆ ಗ್ರಾಮೀಣ ಜನರೇ ಸ್ವಯಂ ಲಾಕ್‍ಡೌನ್ ಮಾಡಿಕೊಳ್ಳುತ್ತಿರುವುದರಿಂದ ಸೋಂಕು ವ್ಯಾಪಿಸುವುದು ಕಡಿಮೆಯಾಗುತ್ತಿದೆಂದರು.

ಅಗತ್ಯವಿಲ್ಲ:
ಮುಖ್ಯ ಮಂತ್ರಿ ಯಡಿಯೂಋಪ್ಪ ಅವರು ಪಕ್ಷ ಬಯಸಿದರೆ ಸಿಎಂ ಸ್ಥಾನ ತ್ಯಜಿಸಲು ಸಿದ್ದ ಎಂದಿರುವ ಬಗ್ಗೆ ಕೇಳಿದ ಪ್ರರ್ಶನೆಗೆ. ಉತ್ತರಿಸಲು ನಿರಾಕರಿಸಿದ ಸಚಿವ ಈಶ್ವರಪ್ಪ, ಬಿಡಿ ಅದು ಮುಗಿದೋಗಿದೆ. ಮತ್ಯಾಕೆ ಎಂದು ನಡೆದರು.