ಗ್ರಹಲಕ್ಷ್ಮಿ ಯೋಜನೆಗೆ ಎಂಎಲ್ಸಿ ಭೀಮರಾವ್ ಪಾಟೀಲ್ ಚಾಲನೆ

(ಸಂಜೆವಾಣಿ ವಾರ್ತೆ)
ಹುಮನಾಬಾದ್: ಆ.31:ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರದ ರಾಜ್ಯ ಮಹಿಳಾ ಯೋಜನೆ ಗೃಹಲಕ್ಷ್ಮಿ ಯೋಜನೆ ಅನುಷ್ಟಾನದ ಅಧಿಕೃತ ಚಾಲನೆ ನೀಡಲಾಯಿತು ಎಂದು ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಬುದುವಾರ ಗೃಹಲಕ್ಷ್ಮಿ ಯೋಜನೆ ಚಾಲನೆ ನೀಡಿ
ಮಾತನಾಡಿ ಸರಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಮೂಲಕ ಮನೆ ಯಜಮಾನಿಗೆ 2000ರೂ.ಹಣವನ್ನು ಖಾತೆಗೆ ಜಮ ಮಾಡಲಾಗುತ್ತಿದೆ. ಈ ಯೋಜನೆಯಿಂದ ಅರ್ಹ ಫಲಾನುಭವಿಗಳು ವಚಿತರಾಗಬಾರದೆಂದು. ಸರ್ಕಾರದ ಯೋಜನೆ ಮನೆ ಮನೆಗ ತಲುಪಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು. ಸಲಹೆ ನೀಡಿದರು
ಇದೇ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಅಫ್ಸರ್‍ಮಿಯ್ಯಾ, ಗ್ರಾಮೀಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಓಂಕಾರ ತುಂಬಾ, ಯುವ ಕಾಂಗ್ರೇಸ್ ಅಧ್ಯಕ್ಷರಾದ ಉಮೇಶ ಜಮಗಿ, ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಲಕ್ಷ್ಮಣ್ ರಾವ್ ಬುಳ್ಳಾ, ಬಾಬುರಾವ ಟೈಗರ್, ಸುರೇಶ ಘಾಂಗ್ರೆ, ದತ್ತಕುಮಾರ ಚಿದ್ರ, ಪ್ರಭು ತಾಳಮಡಗಿ, ಜಾಫರ್, ಮಹೆಶ ಅಗಡಿ, ಮಹಿಳಾ ಓಬಿಸಿ ಘಟಕ ಅಧ್ಯಕ್ಷರಾದ ಸುಮಿತ್ರಾ, ಗುಂಡುರೆಡ್ಡಿ ಪುಟಕಲ್, ಶಿವರಾಜ ಸಿಂಧನಕೇರಾ,ವೀರಣ್ಣ ದರ್ಗೆ, ಖುರಸಿದ್ ಖಾನ್, ರಹಿಂ ಮೇಡಿಕಲ್ ಇದ್ದರು.