ಗ್ರಂಥ ಸಂಪಾದನೆ ವಿಶೇಷ ಉಪನ್ಯಾಸ

ಕಲಬುರಗಿ: ಮಾ,29: ಕಮಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕನ್ನಡ ಸಂಘದ ಉದ್ಘಾಟನೆ ಹಾಗೂ ಹಸ್ತಪ್ರತಿ ಹಾಗೂ ಗ್ರಂಥ ಸಂಪಾದನೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಅಯೋಡಿಸಲಾಗಿತ್ತು.
ಗ್ರಂಥವನ್ನು ಸ್ಪಷ್ಟ ಹಾಗೂ ಪರಿಣಾಮಕಾರಿಯಾಗಿಸುವುದು ಸಂಪಾದಕನ ಆದ್ಯ ಕರ್ತವ್ಯವಾಗಿದೆ ಎಂದು ಸಾಹಿತಿ, ಉಪನ್ಯಾಸಕ ಮಲ್ಲಿನಾಥ ತಳವಾರ ಹೇಳಿದರು. ಕಮಲಾಪುರ ಸರಕಾರಿ ಪ್ರಥಮ ದರ್ಜೆ, ಸ್ನಾತಕ, ಸ್ನಾತಕೋತ್ತರ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡ ಕನ್ನಡ ಸಾಹಿತ್ಯ ಸಂಘದ ಉದ್ಘಾಟನೆ ಹಾಗೂ ಹಸ್ತಪ್ರತಿ ಮತ್ತು ಗ್ರಂಥ ಸಂಪಾದನೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ವ್ಯಾಕರಣ ಮತ್ತು ಮುದ್ರಣ ದೋಷ ಸರಿಪಡಿಸುವ ಜವಾಬ್ದಾರಿ ಸಂಪಾದಕರ ಮೇಲಿರುತ್ತದೆ, ಸಂಶೋಧನೆಯಲ್ಲಿ ವಾಸ್ತವಿಕತೆ ನೆಲೆಗೊಂಡಿರಬೇಕು, ಕವಿ, ಲೇಖಕ, ಕಾದಂಬರಿಕಾರರ ಮೂಲ ಆಶಯಕ್ಕೆ ಧಕ್ಕೆ ಬರದಂತೆ ತಿದ್ದುಪಡಿ ಮಾಡುವ ಕಲೆ ಕರಗತ ಮಾಡಿಕೊಂಡಿರಬೇಕು ಎಂದರು.
ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು, ಅಂತೆ ಕಂತೆಗಳಿಗೆ ಅವಕಾಶ ಇರಬಾರದು ಎಂದರು. ಕಾಲೇಜಿನ ಪ್ರಾಚಾರ್ಯ ಡಾ ಅಮೃತಾ ಕಟಕೆ ಮಾತನಾಡಿ
ಕನ್ನಡ ಭಾಷೆ ನಮ್ಮ ತಾಯಿ ಭಾಷೆ, ಕನ್ನಡ ಸಾಹಿತ್ಯ ಅಪಾರವಾದ ವೈಶಿಷ್ಟ್ಯಗಳನ್ನು ಹೊಂದಿದ್ದು ಸಾಮಾಜಿಕ ಕಳಕಳಿ, ವೈಜ್ಞಾನಿಕ ಮನೋಭಾವ, ಸಹೋದರತ್ವ ಬೆಳೆಸಿ ಪರಿಪೂರ್ಣ ವ್ಯಕ್ತಿತ್ವ ರೂಪಿಸಲು ಸಹಕಾರಿಸುತ್ಯದೆ ಎಂದರು.ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಈ ಸಂದರ್ಭದಲ್ಲಿ ಡಾ.ಮಹಮ್ಮದ್ ಯೂನಿಸ್, ಡಾ.ರವೀಂದ್ರ ಕುಂಬಾರ, ಡಾ.ರಮೇಶ ಪೆÇತೆ, ಡಾ.ನೀತಾ ಭೋಸ್ಲೆ, ಶಿವಪ್ಪ ಚಿಂಚೋಳಿ, ಡಾ.ಜಗದೇವಪ್ಪ ಧರಣಿ, ಗೌರಮ್ಮ, ಜಗಪ್ಪ ತಳವಾರ ಇತರರು ಇದ್ದರು.
ವಿದ್ಯಾರ್ಥಿನಿಯರಾದ ಸಾರಿಕಾ , ಶೃತಿ ಸ್ವಾಗತಿಸಿದರು,

,ಡಾ.ಶಿವಲಿಂಗಪ್ಪ ನಿರೂಪಿಸಿದರು, ಡಾ.ಮಾರುತಿ ಮರ್ಪಳ್ಳಿ ವಂದಿಸಿದರು.

ಕನ್ನಡ ಸಾಹಿತ್ಯಕ್ಕೆ ಕಲ್ಯಾಣ ಕರ್ನಾಟಕದ ಕೊಡುಗೆ ಅಪಾರ, ಪ್ರತಿಯೊಬ್ಬರು ಕನ್ನಡ ಉಳಿಸಿ ಬೆಳೆಸಲು ಶ್ರಮಿಸೋಣ, ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಕನ್ನಡ ಸಂಘಗಳು ರಚನೆಗೊಳ್ಳಬೇಕು, ಈ ಮೂಲಕ ಕನ್ನಡದ ಝೆಂಕಾರ ಮೊಳಗಿಸಬೆಕು.
ಸುರೇಶ ಲೇಂಗಟಿ ಅಧ್ಯಕ್ಷ ಕಸಾಪ ಕಮಲಾಪುರ.