ಗ್ರಂಥ ಬಿಡುಗಡೆ

(ಸಂಜೆವಾಣಿ ವಾರ್ತೆ)
ಮುನವಳ್ಳಿ,ಜ25: ತೋರಣಗಟ್ಟಿಯ ಜ್ಞಾನಾಮೃತ ಆಶ್ರಮ ಶಾಲೆಯಲ್ಲಿ ಕಗ್ಗಲ್ಲಣ್ಣನ ಕಥಾ ಸಂಕಲನದ ಗ್ರಂಥ ಬೀಡುಗಡೆ ಸಮಾರಂಭ ಜರುಗಿತು.
ಗ್ರಂಥ ಬಿಡುಗಡ ಮಾಡಿದ ಆರ್.ಎಸ್.ಪಾಟೀಲ ಮಾತನಾಡಿದರು.
ಅತಿಥಿಗಳಾದ ಸುರೇಶ ದೇಸಾಯಿ ಮಾತನಾಡಿ ಕಗ್ಗಲ್ಲಣ್ಣ ಕಥಾಸಂಕಲನ ಹೆಚ್ಚಿನ ವಿಷಯವನ್ನು ಹೊಂದಿರುವ ಪುಸ್ತಕವಾಗಿದೆ ಎಂದರು.
ಹಲಗತ್ತಿಯ ವೆಂಕಟೇಶ ಹುಣಶಿಕಟ್ಟಿ ಮಾತನಾಡಿ ಕಗ್ಗಲ್ಲಣ್ಣ ಕಥಾ ಪುಸ್ತಕ ಒಂದು ಅವಿಸ್ಮರಣೀಯ ಪುಸ್ತಕವಾಗಿದೆ ಈ ಪುಸ್ತಕಕ್ಕೆ ನಾನೆ ಮುನ್ಯೂಡಿ ಬರೆದಿದ್ದೇನೆ ಅದನ್ನು ಬರೆಯುವ ಅವಕಾಶ ನನಗೆ ದೊರತಿದ್ದು ನನ್ನ ಬಾಗ್ಯ ಎಂದರು.
ಗ್ರಂಥ ರಚಿಸಿದ ಶಿಕ್ಷಕ ಕೆ.ವಾಯ್ ಹುನಸಿಕಟ್ಟಿ ಮಾತನಾಡಿ ಈ ಪುಸ್ತಕವನ್ನು ಸಮಾಜದಲ್ಲಿ ಶೋಷಣೆಗೋಳಗಾದ ಎಲ್ಲಾ ಹೆಣ್ಣು ಮಕ್ಕಳಿಗೆ ಈ ಕೃತಿ ಅರ್ಪಣೆ ಮಾಡಿದ್ದೆನೆ ಸಮಾಜದ ಕೊಂಕುಗಳನ್ನು ತಿದ್ದುವ ಮತ್ತು ಸಾಮಾಜಿಕವಾದ ಉತ್ತಮ ಮೌಲ್ಯಗಳನ್ನು ಹೆಚ್ಚಿಸುವ ಕಾರ್ಯ ಹೊಂದಿದೆ ಎಂದರು.
ಶಾಲೆಯ ಕಾರ್ಯದರ್ಶಿ ಪ್ರಕಾಶ ಕೊಪ್ಪದ, ಬಿ.ಎಮ್.ಕಟ್ಟಿಮನಿ, ಆಡಳಿತ ಅಧಿಕಾರಿ ಎಸ್.ಎಮ್.ಕಡಬಿ ಮತ್ತು ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ತರು ಉಪಸ್ಥಿತರಿದ್ದರು.
ಕೆ.ಪಿ. ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು, ಸವಿತಾ ಕಡಬಿ ಸ್ವಾಗತಿಸಿ ವಂದಿಸಿದರು.