ಗ್ರಂಥಾಲಯ ಸೇರಿದಂತೆ ನಗರ ಸ್ವಚ್ಛತೆಗೆ ಆದ್ಯತೆ ನೀಡಿ;  ಶಾಸಕ ಬಿಪಿ ಹರೀಶ್

 ಹರಿಹರ.ಜೂ.18 ; ನಗರದ ಗ್ರಂಥಾಲಯಕ್ಕೆ ನೂರಾರು ಜನ ವಿದ್ಯಾರ್ಥಿಗಳು ಸಾರ್ವಜನಿಕರು ಓದಲಿಕ್ಕೆ ಬರುತ್ತಾರೆ ಆದರೆ ಗ್ರಂಥಾಲಯ ಪಕ್ಕದ ಆವರಣದಲ್ಲಿ ಸ್ವಚ್ಛತೆ ಕಾಣದೆ ಕಸದ ರಾಶಿಗಳು ಗಬ್ಬುನಾಥ ಬರುತ್ತಿರುವ ಚರಂಡಿಗಳು ಇವೆಲ್ಲ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೆಂದು ನಗರಸಭೆಯ ಆರೋಗ್ಯ ನಿರೀಕ್ಷಕರುಗಳಿಗೆ  ಶಾಸಕ ಬಿಪಿ ಹರೀಶ್ ತರಾಟೆಗೆ  ತೆಗೆದುಕೊಂಡ ಘಟನೆ ನಗರದ ಗ್ರಂಥಾಲಯ ಕೇಂದ್ರದ ಆವರಣದಲ್ಲಿ ನಡೆಯಿತು. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಶಾಸಕರು ದಿಢೀರನೆ  ನಗರಸಭಾ ಕಚೇರಿಗೆ ಭೇಟಿ ನೀಡಿ ಅಲ್ಲಿನ ನ್ಯೂನ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಾ ಈ ಸಂದರ್ಭದಲ್ಲಿ ಕಚೇರಿಗೆ ಬಂದ ಸಾರ್ವಜನಿಕರು ಖಾತೆ ಬದಲಾವಣೆ ರಸ್ತೆ ಕುಡಿಯುವ ನೀರು ವಿದ್ಯುತ್ ದೀಪದ ಸಮಸ್ಯೆಗಳ ಬಗ್ಗೆ ದೂರುಗಳ ಸುರಿಮಳೆ ಸುರಿಸಿದರು ಸಾರ್ವಜನಿಕರ ನಾನಾ ಸಮಸ್ಯೆಗಳನ್ನು ಆಲಿಸಿದ ನಂತರ ನಗರಸಭೆಯ ವಿವಿಧ ವಿಭಾಗದ ಅಧಿಕಾರಿಗಳಿಗೆ  ಸಾರ್ವಜನಿಕರ ಕೆಲಸ ಕಾರ್ಯಗಳನ್ನು ತೊಂದರೆಯಾಗದ ರೀತಿಯಲ್ಲಿ ಸಕಾಲಕ್ಕೆ ಸರಿಯಾಗಿ ಖಾತೆ ಬದಲಾವಣೆ ವಿದ್ಯುತ್ ದೀಪಾ ರಸ್ತೆ ಚರಂಡಿ ಸ್ವಚ್ಛತೆ ಕಾರ್ಯಗಳನ್ನು ಮಾಡುವುದಕ್ಕೆ ಆದ್ಯತೆ ನೀಡಬೇಕು ಕೂಡಲೇ ಇಲ್ಲಿರುವ ಖಾತೆ ಬದಲಾವಣೆಗೆ ನೀಡಿರುವ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಬೇಕೆಂದು ಸೂಚನೆ ನೀಡಿದರುನಂತರ ಗ್ರಂಥಾಲಯ ಆವರಣಕ್ಕೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ  ಪರಿಶೀಲಿಸಿ ಆರೋಗ್ಯ ನಿರೀಕ್ಷಕರಗಳಾದ ರವಿಪ್ರಕಾಶ್. ಸಂತೋಷ್ ನಾಯ್ಕ್. ಆರೋಗ್ಯ ನಿರೀಕ್ಷಕರಗಳಾದ ನೀವುಗಳು ನಗರ ಪ್ರದರ್ಶನ ಮಾಡಿ ಎಲ್ಲೇ ಸ್ವಚ್ಛತೆ ಕಾಣದೇ ಇರುವ  ಬಡಾವಣೆಗಳನ್ನು  ಸ್ವಚ್ಛತೆ ಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ನೀಡಿದರು. ನಂತರ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಹವಾಲುಗಳನ್ನು ಸ್ವೀಕರಿಸಿದರುನಗರಸಭಾ ಸದಸ್ಯರಾದ ಆಟೋ ಹನುಮಂತಪ್ಪ. ಸುನಿಲ್. ನಗರಸಭಾ ಅಧಿಕಾರಿಗಳು ಸಾರ್ವಜನಿಕರು ಕಾರ್ಯಕರ್ತರು ಇದ್ದರು.