ಗ್ರಂಥಾಲಯ ಸಪ್ತಾಹ ಸಮಾರೋಪ

ಕೊಟ್ಟೂರು ನ 16 :ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ರಾಷ್ಷೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭ ನೆರವೇರಿತು.

ಸಾಹಿತಿಕುಂ.ವೀರಭದ್ರಪ್ಪ ಮಾತನಾಡಿ

ಬಾಲ್ಯದಲ್ಲಿಯೇ ಗ್ರಂಥಾಲಯದ ಸಂಬಂಧ ಹೊಂದಿದರೆ ಜೀವನದುದ್ದಕ್ಕೂ ನೆಮ್ಮದಿ ಇರಬಹುದುˌ ವೈಚಾರಿಕ ಗ್ರಂಥಗಳನ್ನ ಹೆಚ್ಚಾಗಿ ಓದಬೇಕು.

ಪುಸ್ತಕ ಮತ್ತು ಪತ್ರಿಕೆಗಳು ಕೊಡುವ ಧೈರ್ಯ ಬೇರೆ ಯಾವುದರಿಂದಲೂ ಸಿಗಲಾರದು. ತಪ್ಪು ಮಾಡದಂತೆ ತಡೆಯುವ ಶಕ್ತಿ ಸಾಹಿತ್ಯಕ್ಕಿದೆ ಬರಹಕ್ಕೆ ಹೆಚ್ಚು ಶಕ್ತಿ ಇದೆ ಎಂದರು. ಪ್ರಚಾರ್ಯ ನಿರ್ಮಲಶಿವನಗುತ್ತಿ , ಎಲ್.ಡಿ. ಈರಗಾರ, ಮಲ್ಲಪ್ಪ ಸೇರಿದಂತೆ ಇತರರುಇದ್ದರು.