ಗ್ರಂಥಾಲಯ ಮಕ್ಕಳಿಗೆ ಮಾಹಿತಿ ಕೇಂದ್ರವಾಗಲಿದೆ : ಇಓ ಬಿರೇಂದ್ರಸಿಂಗ

(ಸಂಜೆವಾಣಿ ವಾರ್ತೆ)
ಔರಾದ :ಜು.21: ಪ್ರತಿ ಒಂದು ಗ್ರಾಮ ಪಂಚಾಯ್ತಿಯಲ್ಲಿ ಮಕ್ಕಳ ಸ್ನೇಹಿ ಗ್ರಾಮೀಣ ಗ್ರಂಥಾಲಯ ಮಕ್ಕಳ ಓದಿಗೆ ಇನ್ನು ಆಕರ್ಷಣೆ ಆಗಬೇಕು ಆದರ ಜೋತೆ ಭವಿಷ್ಯದಲ್ಲಿ ಗ್ರಂಥಾಲಯ ಗ್ರಾಮದ ಪ್ರಮುಖ ಮಾಹಿತಿ ಕೇಂದ್ರವಾಗಿ ಪರಿವರ್ತನೆ ಆಗಿದ್ದರೆ ಗ್ರಾಮ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಬಿರೇಂದ್ರಸಿಂಗ್ ಠಾಕೂರ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ದಿ ಮತ್ತು ತಾಲ್ಲೂಕು ಪಂಚಾಯತ ಸಹಯೋಗದಲ್ಲಿ ನಡೆದ ಗ್ರಾಮ ಪಂಚಾಯಿತ ಗ್ರಂಥಾಲಯ ಮೇಲ್ವಿಚಾರಕರಿಗೆ “ಮಕ್ಕಳ ಸ್ನೇಹಿ ಗ್ರಾಮೀಣ ಗ್ರಂಥಾಲಯ” ಕುರಿತು ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವೈಜ್ಞಾನಿಕ ಗ್ರಂಥಾಲಯ, ಪರಿಸರ, ಮುಲಭೂತ ಸೌಕರ್ಯ , ಅಂತರ್ಜಾಲ ವ್ಯವಸ್ಥೆ , ಉಧ್ಯಾನ , ಮಕ್ಕಳಿಗೆ ಆಟದ ಸಲಕರಣೆಗಳು ವ್ಯವಸ್ಥೆ , ಶಾಂತತೆ, ಅನುಕೂಲತೆ , ವ್ಯವಸ್ಥಾಪನ ಹೇಗೆ ಇರಬೇಕು ಎಂಬ ಮಾಹಿತಿ ನೀಡಿದರು.
ಬರುವ ದಿನಗಳಲ್ಲಿ ಗ್ರಂಥಾಲಯ ಗ್ರಾಮದ ಪ್ರಮುಖ ಮಾಹಿತಿ ಕೇಂದ್ರ ಆಗಬೇಕು ಅಂದ್ರೆ ಎಂಥಾ ಮಾಹಿತಿ ಸಂಗ್ರಹಿಸುವ ಅವಶ್ಯಕತೆ ಇದೆ ಎಂಬುದನ್ನು ತಾ.ಪಂ. ವಿಕೇಂದ್ರೀಕರಣ ಸಂಯೋಜಕರು ಮತ್ತು ಸಂಪನ್ಮೂಲ ವ್ಯಕ್ತಿ ರಾಜೆಂದ್ರ ಮಾಳಿ, ಝರೆಪ್ಪಾ ಶಿಂದೆ ಇವರು ಮಾರ್ಗದರ್ಶನ ನೀಡಿದರು.
ಮಕ್ಕಳು ಗ್ರಂಥಾಲಯಕಡೆ ಆಕರ್ಷಿತರಾಗಿ ಪುಸ್ತಕ ಓದುವ ಮೂಲಕ ಮೊಬೈಲ್ಯಿಂದ ಹವ್ಯಾಸ ಕಡಿಮೆ ಮಾಡಲು ಪ್ರಯತ್ನಿಸಿದಾಗ ಮಕ್ಕಳ ಬೌದ್ಧಿಕ ವಿಕಾಸವಾಗುತ್ತದೆ, ಮಕ್ಕಳ ಸ್ನೆ?ಹಿ ಗ್ರಂಥಾಲಯದ ಪರಿಕಲ್ಪನೆ ಮತ್ತು ಮಹತ್ವ, ಮಾನವ ಸಂಪನ್ಮೂಲ, ಓದುವ ಸಂಪನ್ಮೂಲ ಸಂಗ್ರಹ, ಚಟುವಟಿಕೆಗಳು, ಪತ್ರ ಬರೆಯುವುದು, ಗಟ್ಟಿ ಓದು, ಕಟ್ಟು ಕಟ್ಟು ಕಥೆ ಕಟ್ಟು, ಪುಸ್ತಕ ಜೊ?ಡಣೆ ಮತ್ತು ಪ್ರದರ್ಶನ ಮಕ್ಕಳ ಹಕ್ಕುಗಳು, ಕಾಯ್ದೆಗಳು ಮೊದಲಾದ ವಿಷಯಗಳ ಬಗ್ಗೆ ಸಾಹಿತಿ ಬಾಲಾಜಿ ಆಮರವಾಡೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ. ಸಹಾಯ ನಿರ್ದೇಶಕ ಸುದೇಶಕುಮಾರ, ತಾ.ಪಂ.ವ್ಯವಸ್ಥಾಪಕ ಸಂಜೀವಕುಮಾರ, ಸಂತೋಷ ಭಾಲ್ಕೆ, ವಿಜಯಕುಮಾರ ಸೇರಿದಂತೆ ಕಮಲನಗರ ಮತ್ತು ಔರಾದ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಮೆಲ್ವಿಚಾರಕರು ಉಪಸ್ಥಿತರಿದ್ದರು