ಗ್ರಂಥಾಲಯ ಬಡವರ ಪಾಲಿನ ಜ್ಞಾನದೇಗುಲ -ಜಗದೀಶ.

ಕೂಡ್ಲಿಗಿ.ನ. 20:-ಗ್ರಂಥಾಲಯಗಳು ಬಡವರ ಪಾಲಿಗೆ ಜ್ಞಾನ ಹೆಚ್ಚಿಸುವ ಮಹಾದೇಗುಲಗಳಿದ್ದಂತೆ ಎಂದು ಕೂಡ್ಲಿಗಿ ವಿಎಸ್ ಎಸ್ ಎನ್ ನ ಸಿಬ್ಬಂದಿಗಳಾದ ಜಗದೀಶ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಪಟ್ಟಣದ ಗ್ರಂಥಾಲಯದಲ್ಲಿ ಗುರುವಾರ ಜರುಗಿದ ರಾಷ್ಟ್ರೀಯ ಗ್ರಂಥಾಲಯದಲ್ಲಿ ಭಾಗವಹಿಸಿ ಮಾತನಾಡುತ್ತ ಗ್ರಂಥಾಲಯದಲ್ಲಿ ದಿನಪತ್ರಿಕೆಗಳಿಂದ ದೇಶ ವಿದೇಶದ ಸುದ್ದಿ ತಿಳಿದುಕೊಳ್ಳಬಹುದು ಹಾಗೂ ಅನೇಕರ ದೇಶಕ್ಕಾಗಿ ಬಲಿದಾನಗೈದು ಅವರ ಶ್ರಮ ತ್ಯಾಗಬಲಿದಾನಗೈದ ಅನೇಕ ಹೋರಾಟಗಾರರ, ದಾರ್ಶನಿಕರ ಪುಸ್ತಕ ಬಂಡಾರವನ್ನು ಗ್ರಂಥಾಲಯ ದಲ್ಲಿ ಪಡೆದು ಓದಿದ ಮಕ್ಕಳಲ್ಲಿ ಜ್ಞಾನ ಹೆಚ್ಚಿಸುತ್ತದೆ ಎಂದರು ತಿಳಿಸಿದರು.
ಮತ್ತೋರ್ವ ಕೂಡ್ಲಿಗಿಯ ವಿ ಎಸ್ ಎಸ್ ಎಸ್ ಎನ್ ನ ಶಿವರಾಮ್ ಮಾತನಾಡಿ ಗ್ರಂಥಾಲಯಗಳು ಮಹಾನ್ ನಾಯಕರ ದಾರ್ಶನಿಕರ ಸ್ಯಾತಂತ್ರ್ಯ ಹೋರಾಟಗಾರರು ಹಾಗೂ ಇತರರ ಜೀವನ ಚರಿತ್ರೆ ಕುರಿತ ಅನೇಕ ಪುಸ್ತಕಗಳ ಭಂಡಾರದ ಸಮೂಹವೇ ಗ್ರಂಥಾಲಯ ದಲ್ಲಿದ್ದು ಇದು ಬಡವರ ಪಾಲಿನ ಜ್ಞಾನ ಮಂದಿರವೆಂದು ತಿಳಿಸಿದರು ಮತ್ತು ಪಟ್ಟಣದ ಗ್ರಂಥಾಲಯ ಇಕ್ಕಟ್ಟಾಗಿದ್ದು ಇದಕ್ಕೆ ಒಂದು ಸ್ವಂತಿಕೆಯ ನಿವೇಶನ ಸಿಕ್ಕಲ್ಲಿ ಉತ್ತಮ ಕಟ್ಟಡ ನಿರ್ಮಿಸುವಂತೆ ಎಲ್ಲರಿಗೂ ಉಪಯೋಗಕ್ಕಾಗಿ ಎಂದರು.
ಪ್ರಾಸ್ತಾವಿಕವಾಗಿ ಗ್ರಂಥಪಾಲಕ ಸುರೇಶ ಮಾತನಾಡಿ ಪತ್ರಿಕೆಗಳು, ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವುಗಳನ್ನಿಡಲು ಸ್ಥಳದ ಅಬಾವವಿದ್ದು ಪಟ್ಟಣ ಪಂಚಾಯತಿಯಿಂದ ನಿವೇಶನ ದೊರೆತಲ್ಲಿ ಉತ್ತಮ ಕಟ್ಟಡ ನಿರ್ಮಿಸಿದರೆ ಆ ಕಟ್ಟಡ ಸಾರ್ವಜನಿಕರ ಉಪಯೋಗವಾಗಬಲ್ಲದು ಎಂದು ತಿಳಿಸುತ್ತ ಗುರುವಾರದಂದು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ನವೆಂಬರ್ 14 ರಿಂದ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಮಲ್ಲೇಶ,ರುದ್ರೇಶ, ಚಂದ್ರನಾಯ್ಕ್, ಗಣೇಶ, ವೀರಭದ್ರಪ್ಪ, ಅಕ್ಕಿ ರಾಘವೇಂದ್ರ, ಯಶವಂತಪ್ಪ ವೀರೇಶ ಸೇರಿದಂತೆ ಇತರರಿದ್ದರು.