ಗ್ರಂಥಾಲಯ ಜ್ಞಾನದ ಹಸಿವು ನೀಗಿಸುವ ಕೇಂದ್ರ

ಲಿಂಗಸುಗೂರು,ಆ.೧೩-
ಲಿಂಗಸುಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಮಾನಂದ ಮಾತನಾಡಿ ಆಧುನಿಕ ಯುಗದಲ್ಲಿ ಗ್ರಂಥಾಲಯ ಕೇಂದ್ರಗಳು ಇಂದು ಜ್ಞಾನದ ದೇಗುಲವಾಗಿದೆ ಹಾಗೂ ದಲಿತ ಬಡ ರೈತರ ಮಕ್ಕಳು ಇಂದಿನ ದಿನಗಳಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಇದ್ದರೆ ಅದಕ್ಕೆ ಯುವ ಜನಾಂಗ ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವು ನೀಗಿಸುವ ಕೇಂದ್ರವಾಗಿದೆ ಎಂದು ಪರಮಾನಂದ ಅಭಿಪ್ರಾಯ ಪಟ್ಟರು.
ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಸಾಧಿಸಬೇಕಾದರೆ ಅದು ಗ್ರಂಥಾಲಯ ಜ್ಞಾನದ ಮೂಲಕ ಸಾಧಿಸಬಹುದು ಎನ್ನುವುದಕ್ಕೆ ಇಂದಿನ ಗ್ರಂಥಾಲಯ ದಿನಾಚರಣೆ ಸಾಕ್ಷಿಯಾಗಿದೆ. ಪ್ರತಿಯೊಬ್ಬ ನಾಗರಿಕನು ಆಧುನಿಕ ತಂತ್ರಜ್ಞಾನದಲ್ಲಿ ಜ್ಞಾನ ಸಂಪಾದನೆ ಮಾಡಬೇಕಾದರೆ ಅದು ಗ್ರಂಥಾಲಯ ಕೇಂದ್ರ ಏಕೆಂದರೆ ಪ್ರತಿಯೊಂದು ಹಂತದಲ್ಲೂ ಮನುಷ್ಯನ ವ್ಯಕ್ತಿತ್ವವನ್ನೇ ಬದಲಾಯಿಸುವ ಶಕ್ತಿ ಇದ್ದರೆ ಅದು ಗ್ರಂಥಾಲಯ ಯುವಕರಿಗೆ ವಿದ್ಯಾರ್ಥಿಗಳಿಗೆ ಜ್ಞಾನದ ಬಗ್ಗೆ ಅರಿವನ್ನು ಅರಿತಿರಬೇಕು ಮತ್ತು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರ ಎಂದರೆ ಗ್ರಂಥಾಲಯ ಯುವಕರು ವಿದ್ಯಾರ್ಥಿಗಳು ನಾಗರಿಕರು ಪ್ರಸಕ್ತ ದಿನಗಳಲ್ಲಿ ಗ್ರಂಥಾಲಯ ಕೇಂದ್ರಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಸೇವೆ ಮಾಡಲಿಕ್ಕೆ ಅನುಕೂಲವಾಗುತ್ತದೆ.
ಇಂದಿನ ದಿನಗಳಲ್ಲಿ ಮನುಷ್ಯನಿಗೆ ಅತ್ಯಂತ ಅವಶ್ಯಕ ಇರುವುದು ಎಂದರೆ ಜ್ಞಾನದ ದೇಗುಲವಾಗಿದೆ. ಆದರೆ ಆಧುನಿಕ ಭರಾಟೆಯಲ್ಲಿ ಗ್ರಾಮೀಣ ಪ್ರದೇಶದ ಯುವಕರು ವಿದ್ಯಾರ್ಥಿಗಳು ನಾಗರಿಕರು ಜ್ಞಾನದ ಕೇಂದ್ರದಗಳಲ್ಲಿ ಜ್ಞಾನದ ಹಸಿವು ನೀಗಿಸುವ ಕೇಂದ್ರಗಳಲ್ಲಿ ಓದುಗರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತದೆ ವಿಷಾದನೀಯ ಎಂದರು.
ಗ್ರಂಥವಿಲ್ಲದ ಕೋಣೆ ಆತ್ಮವಿಲ್ಲದ ಶರೀರದಂತೆ ಗ್ರಂಥಾಲಯವಿಲ್ಲದ ಶಿಕ್ಷಣ ಹೃದಯವಿಲ್ಲದ ಮಾನವನಂತೆ ಎಂದು ಪರಮಾನಂದ ರವರು ಮಾರ್ಮಿಕವಾಗಿ ನುಡಿದರು.
ಡಾಕ್ಟರ್ ಪರಮಾನಂದ, ಪ್ರಾಂಶುಪಾಲರು ಹಾಗೂ ಗ್ರಂಥಪಾಲಕರಾದ ಅವರು. ಗ್ರಂಥಾಲಯಗಳು ಎಂದರೆ ಜ್ಞಾನದ ಸಾಗರ, ವಿದ್ದಂತೆ.
ಪ್ರತಿವರ್ಷ ಆಗಸ್ಟ್ ೧೨ರಂದು ಗ್ರಂಥಪಾಲಕರ ದಿನಾಚರಣೆ ಮಾಡುತ್ತಾ ಬಂದಿದ್ದೇವೆ. ಇಂದಿನ ಡಿಜಿಟಲ್ ಯುಗದಲ್ಲಿಯೂ ಗ್ರಂಥಾಲಯ ವಿಜ್ಞಾನದ ಪಿತಾಮಹರಾದ ಡಾ. ಎಸ್‌ಆರ್. ರಂಗನಾಥನ್ ಅವರನ್ನು ನಾವು ಸ್ಮರಿಸಲೇಬೇಕು.
ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆಯುವುದಕ್ಕೆ ಡಾ. ಎಸ್. ಆರ್. ರಂಗನಾಥನ್ ಪ್ರಮುಖ ಕಾರಣ. ಗ್ರಂಥಾಲಯ ಸೇವೆಯಲ್ಲಿರುವವರಿಗೆ ರಂಗನಾಥನ್ ಅವರ ಸಂದೇಶಗಳು ಮಾರ್ಗದರ್ಶಕವಾಗಿ ನೆಲೆ ನಿಂತಿವೆ. ಅವರು ನೀಡಿದ ಗ್ರಂಥಾಲಯ ಪಂಚ ಸೂತ್ರಗಳು ಜಗನ್ಮಾನ್ಯತೆ ಗಳಿಸಿವೆ. ಒಂದು ಮಾತಂತೂ ಸತ್ಯ. ದೇಶದಲ್ಲಿ ಡಾ.ಎಸ್.ಆರ್.ರಂಗನಾಥನ್ ಅವರಷ್ಟು ಗ್ರಂಥಾಲಯದಲ್ಲಿ ಕೃಷಿ ಮಾಡಿದವರು ಮತ್ತೊಬ್ಬರಿಲ್ಲ.
ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಗ್ರಂಥಾಲಯ ಮತ್ತು ಅಂತರ್ಜಾಲದ ಮೂಲಕ ಜ್ಞಾನವನ್ನು ಗಳಿಸಿಕೊಳ್ಳುತ್ತಿದ್ಧೇವೆ. ಎಂದರೆ ಅದು ಗ್ರಂಥಾಲಯದ ಸೇವೆಯಿಂದ. ಪ್ರತಿಯೊಂದು ಜೀವಿಗೂ ಬದುಕಲು ನೀರು, ಗಾಳಿ ಬೆಳಕು ಮತ್ತು ಆಹಾರ ಹೇಗೆ ಮುಖ್ಯವೊ ಹಾಗೆಯೇ ಮನುಷ್ಯ ಮನುಷತ್ವದಿಂದ ನಡೆದುಕೊಳ್ಳಲು, ಮಾನವೀಯ ಮೌಲ್ಯಗಳನ್ನು ಬೆಳೆಸಬೇಕೆಂದರೆ, ಮನುಷ್ಯನ ವ್ಯಕ್ತಿತ್ವವನ್ನೇ ಬದಲಿಸಬೇಕೆಂದರೆ, ಮನುಷ್ಯನ ಸರ್ವತೋಮುಖ ಬೆಳವಣಿಗೆ ಆಗಬೇಕು ಎಂದರೆ ಪುಸ್ತಕಗಳಿಂದ ಮಾತ್ರ ಸಾಧ್ಯ. ಪುಸ್ತಕದ ಮೌಲ್ಯ ಮತ್ತು ಸಾರ್ಥಕ್ಯ ಪಡೆಯಬೇಕಾದರೆ ಗ್ರಂಥಾಲಯಗಳು ಅವಶ್ಯ ಹಾಗೂ ಗ್ರಂಥಪಾಲಕನ ಪಾತ್ರ ಅತೀ ಮಹತ್ವದ್ದಾಗಿದೆ.
ಗ್ರಂಥಾಲಯಗಳು ಎಂದರೆ ಜ್ಞಾನದ ಸಾಗರ, ಪುರಾಣ, ಇತಿಹಾಸ ಕಾಲದಿಂದಲೂ ಇಂದಿನ ಡಿಜಿಟಲ್ ಯುಗದವರೆಗೂ ಅನೇಕ ಪಂಡಿತರು, ಸಂಶೋಧಕರು, ಅನುಭಾವಿಗಳು ತಮ್ಮ ಶ್ರಮ, ಸಮಯ, ಜ್ಞಾನ ಉಪಯೋಗಿಸಿ ಮುಂದಿನ ಪೀಳಿಗೆಗೆ ಗ್ರಂಥಸ್ಥವಾಗಿ ಬರೆದಿಟ್ಟಿದ್ದಾರೆ.
ಇಂತಹ ಜ್ಞಾನದೇಗುಲವೇ ಗ್ರಂಥಾಲಯ. ಗ್ರಂಥಾಲಯಕ್ಕೆ ಜ್ಞಾನದ ಕಣಜ ಎಂದು ಕರೆಯಲಾಗುತ್ತದೆ. ಇದರಲ್ಲಿ ಗ್ರಂಥಪಾಲಕರ ಶ್ರಮ ಬಹಳವಿದೆ. ಓದುಗನಿಗೆ ಜ್ಞಾನದ ಊಟವನ್ನು ಉಣಬಡಿಸಲು ಸದಾ ಸಿದ್ದನಾಗಿರುತ್ತಾನೆ. ಇಂತಹ ಮಹತ್ವದ ಕಾರ್ಯಕ್ರಮವನ್ನು ಪ್ರತಿಯೊಬ್ಬ ಗ್ರಂಥಪಾಲಕರು ಮಾಡುತ್ತಾರೆ.
ಈ ಸಂದರ್ಭದಲ್ಲಿ ಲಿಂಗಸುಗೂರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ರಾದ ಡಾ.ಮಹಾದೇವಪ್ಪ, ಗಣೇಶ ದರ್ಭಿ, ಸಿದ್ರಾಮ ರೆಡ್ಡಿ, ಪಿ.ಕೆ.ಲಮಾಣಿ, ಮೀನಾಕ್ಷಿ, ಡಾ.ರುಬಿನಾ, ಶಾಮಲಿ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.