ಗ್ರಂಥಾಲಯ ಕಟ್ಟಡ ನಿಮಾಣಕ್ಕೆ ಭೂಮಿ ಪೂಜೆ


ಚನ್ನಮ್ಮನ ಕಿತ್ತೂರ,ಫೆ. 10, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ಓದುವವರಿಗಾಗಿ ಗ್ರಂಥಾಲಯ ಎಂಬುದು ಬಹಳ ಅವಶ್ಯವೆಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಸಮೀಪದ ಖಾನಾಪೂರ ತಾಲೂಕಿನ ಲಿಂಗನಮಠ ಗ್ರಾಪಂ ವ್ಯಾಪ್ತಿಗೆ ಒಳಪಡುವ ಜಾಗೆಯಲ್ಲಿ ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಲು ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು. ಈ ಆಧುನಿಕ ಯುಗದಲ್ಲಿ ಡಿಜಿಟಲ್ ಗ್ರಂಥಾಲಯದ ಅವಶ್ಯಕತೆಯಿದೆ. 2023-24ನೇ ಸಾಲಿನ ತಾಲೂಕು ಪಂಚಾಯತಿ ಅನುದಾನದಡಿಯಲ್ಲಿ ಮಂಜೂರಾತಿಯಾಗಿರುತ್ತದೆ.
ಅಂಗನವಾಡಿ ಹಾಗೂ ಸರ್ಕಾರಿ ಆರೋಗ್ಯ ಉಪ ಕೇಂದ್ರ ಇವುಗಳ ಪಕ್ಕದಲ್ಲಿಯೇ ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣವಾಗುತ್ತಿರುವುದು ಹರ್ಷ ತಂದಿದೆ. ಎಂದ ಅವರು ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ತಮ್ಮ ಮಕ್ಕಳನ್ನು ಬಿಟ್ಟು ಪುಸ್ತಕ ಓದುವ ಹವ್ಯಾಸ ಇಟ್ಟುಕೊಳಬಹುದು. ಅದೇ ರೀತಿ ಆಸ್ಪತ್ರೆಗೂ ಬರುವ ಸಾರ್ವಜನಿಕರು ಪುಸ್ತಕಗಳನ್ನು ಓದಿ ತಮ್ಮ ಬುದ್ದಿಶಕ್ತಿಯನ್ನು ಹೆಚ್ಚಿಸುವ ಹಾಗೂ ಮಾಹಿತಿ ಕಲೆಹಾಕುವ ವ್ಯವಸ್ಥೆ ಒಂದೇ ಕಡೆ ಇರುವುದರಿಂದ ಈ ಗ್ರಂಥಾಲಯವು ಸಾರ್ವಜನಿಕರಿಗೆ ಬಹಳ ಅವಶ್ಯವಿದೆ ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷ ಕಾಶೀಮ ಹಟ್ಟಿಹೊಳಿ, ಎಇಇ ಬನ್ನೂರ, ಗ್ರಾಪಂ ಉಪಾಧ್ಯಕ್ಷೆ ಸರೋಜಾ ನಾಯಕ, ಪಿಡಿಓ ಕಾವೇರಿ ಹಿಮಕರ, ಸದಸ್ಯರುಗಳಾದ ಶೋಭಾ ಮಾಟೋ|ಳ್ಳಿ, ಶಿವಾನಂದ ಬಾಗೇವಾಡಿ, ರತ್ನವ್ವಾ ಮಾಟ್ಟೋಳ್ಳಿ, ಮಾರುತಿ ಹರಿಜನ, ಗುತ್ತಿಗೆದಾರ ಮಾರುತಿ ಬೀಡಿಕರ, ಲೈಲಾ ಶುಗರ್ಸ್ ಎಂ.ಡಿ. ಸದಾನಂದ ಪಾಟೀಲ, ಕುಶಾಲ ಮಿಟ್ಗಾರ, ಪಾಡುರಂಗ ಮಿಟ್ಗಾರ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸರ್ವ ಸದಸ್ಯರು, ಗ್ರಾಪಂ ಸಿಬ್ಬಂದಿ, ಕ್ಲರ್ಕ ನಾರಾಯಣ ತೊಲಗಿ ಹಾಗೂ ಸಾರ್ವಜನಿಕರಿದ್ದರು.