ಗ್ರಂಥಾಲಯ ಅಭಿವೃದ್ಧಿಗೆ ಎಸ್.ಆರ್.ರಂಗನಾಥನ್ ಅವರ ಕೊಡುಗೆ ಅನನ್ಯ-ಡಾ.ಬಸವರಾಜ ಗದುಗಿನ


ಸಂಜೆವಾಣಿ ವಾರ್ತೆ
ಬಳ್ಳಾರಿ ಆ.14. ಭಾರತದ ದೇಶದ ಗ್ರಂಥಾಲಯ ಪಿತಾಮಹರೆಂದು ಪ್ರಸಿದ್ಧರಾದ ಎಸ್.ಆರ್.ರಂಗನಾಥನ್ ಅವರು ಗ್ರಂಥಾಲಯ ವಿಜ್ಞಾನಕ್ಕೆ ಅದ್ವಿತೀಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ವೀರಶೈವ ಕಾಲೇಜಿನ ನಿವೃತ್ತ ಗ್ರಂಥಪಾಲಕರಾದ ಡಾ.ಬಸವರಾಜ ಗದುಗಿನ ಅವರು ತಿಳಿಸಿದರು.
ಅವರು ಸ್ಥಳೀಯ ಸರಳಾದೇವಿ ಕಾಲೇಜಿನಲ್ಲಿ ಗ್ರಂಥಾಲಯ ವಿಭಾಗದಿಂದ ಹಮ್ಮಿಕೊಂಡಿದ್ದ ಎಸ್.ಆರ್.ರಂಗನಾಥನ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಂಥಾಲಯವನ್ನು ದೇಶದಲ್ಲಿ ಅಭಿವೃದ್ಧಿ ಪಡಿಸುವಲ್ಲಿ ರಂಗನಾಥನ್ ಅವರ ಕೊಡುಗೆ ಅಪಾರವಾಗಿದೆ. ಅವರು ಗ್ರಂಥಾಲಯವನ್ನು ದೇಶದಲ್ಲಿ ತೆರೆಯುವಂತೆ ಶಿಫಾರಸ್ಸುಗಳನ್ನು ಮಾಡಿದರು. ಅವರ ಕೊಡುಗೆಯನ್ನು ಸ್ಮರಿಸುವುದು ಎಲ್ಲರ ಕರ್ತವ್ಯು ಎಂದು ತಿಳಿಸಿದರು.
ಮತ್ತೋರ್ವ ಅತಿಥಿ ವಿ.ಎಸ್.ಕೆ. ವಿ.ವಿ.ಯ ಪ್ರಸಾರಾಂಗ ನಿರ್ದೇಶಕರಾದ ಡಾ.ಬಿ.ಜಿ.ಕನಕೇಶಮೂರ್ತಿ ಅವರು ಮಾತನಾಡಿ, ಮೈಸೂರು ವಿಶ್ವವಿದ್ಯಾಲಯದ ಗ್ರಂಥಾಲಯವನ್ನು ಉದಾಹರಿಸಿ ಹಲವು ನಿದರ್ಶನಗಳನ್ನು ನೀಡಿದರಲ್ಲದೆ, ಗ್ರಂಥಗಳನ್ನು ಓದುವುದರಿಂದ ಅನೇಕ ರೀತಿಯ ಜ್ಞಾನ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಗ್ರಂಥಗಳ ಸದುಪಯೋಗಪಡಿಸಿಕೊಂಡು ಉನ್ನತ ಸ್ಥಾನಕ್ಕೆ ಬೆಳೆಯಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥರೆಡ್ಡಿ ಹೆಚ್.ಕೆ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗೀರ್‍ಸಾಬ್ ದಿನ್ನಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೊನ್ನೂರಾಲಿ ಐ, ಡಾ.ಬಸಪ್ಪ, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಣೇಶ್ ಪ್ರಾರ್ಥಿಸಿದರೆ ಗ್ರಂಥಪಾಲಕ ಪ್ರಶಾಂತ್ ಕೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ನುಡಿದರು. ಗಿರಿರಾಜ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಡಾ.ಕುಂಚಂನರಸಿಂಹಲು ಮುಂತಾದವರು ಹಾಜರಿದ್ದರು.