ಗ್ರಂಥಾಲಯವೇ ನನಗೆ ಪ್ರಥಮ ಮನೆ : ಜಿ.ಬಿ.ನಾಗನಗೌಡ.

ಸಂಜೆವಾಣಿ ವಾರ್ತೆ

ಹರಪನಹಳ್ಳಿ.ಜೂ.೨: ನಾನು ಬಾಲ್ಯದಿಂದಲೂ ಸಾಹಿತ್ಯವನ್ನು ಉಸಿರಾಗಿಸಿಕೊಂಡು ಬಂದವನು. ಅಂದಿನ ಕಾಲದಲ್ಲಿ ಗ್ರಂಥಾಲಯವೇ ನನಗೆ ಪ್ರಥಮ ಮನೆಯಾಗಿತ್ತು ಎಂದು ಲೇಖಕ ಜಿ.ಬಿ.ನಾಗನಗೌಡ  ಹೇಳಿದರು.ಪಟ್ಟಣದ ಅಂಬ್ಲಿ ದೊಡ್ಡ ಭರ್ಮಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರೊಫೆಸರ್ ಜಿ.ಬಿ.ನಾಗನಗೌಡ ವಿರಚಿತ ಉತ್ಖನನ ನಾಟಕ ಸಂಕಲನ ಲೋಕಾರ್ಪಣೆ ಹಾಗೂ ತಮ್ಮ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಕುರಿತು ಮಾತನಾಡಿದ ಅವರು ನನ್ನ ನಿವೃತ್ತಿ ಬದುಕನ್ನು ನಾನು ಸಾಹಿತ್ಯ ಕ್ಷೇತ್ರಕ್ಕೆ ಮೀಸಲಿಡುತ್ತೇನೆ ಎಂದರು.ನಾನು ಪಿಯುಸಿ ಓದುತ್ತಿರುವಾಗಲೇ ಉಪನ್ಯಾಸಕನಾಗಬೇಕೆಂದು ಅಂದುಕೊಂಡಿದ್ದೆ ಉಪನ್ಯಾಸಕ ವೃತ್ತಿಯನ್ನು ನಾನು ತುಂಬಾ ಪ್ರೀತಿಸುತ್ತಿದ್ದೆ ಹಾಗಾಗಿ ನಾನು ಉಪನ್ಯಾಸಕ ವೃತ್ತಿಯನ್ನು ಆರಿಸಿಕೊಂಡೆ ನೀವು ಒಂದು ಅಚಲವಾದ ಗುರಿ ಇಟ್ಟುಕೊಂಡು ನಿರಂತರ ಅಭ್ಯಾಸ ಮಾಡಿದ್ದೇ ಆದರೆ ಖಂಡಿತವಾಗಿಯೂ ನೀವು ಆ ಗುರಿ ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಡಿದರು.ಈ ಸಮಾರಂಭದಲ್ಲಿ ಪ್ರಾಂಶುಪಾಲರಾದ ಡಾ.ಸಿದ್ದಲಿಂಗಮೂರ್ತಿ, ಸಾಹಿತಿ ತೆಲಿಗಿ ವೀರಭದ್ರಪ್ಪ, ಕೋರಿ ವಿರೂಪಾಕ್ಷಪ್ಪ, ಐಗೊಳ ಚಿದಾನಂದ, ಅಕ್ಕಿ ಶಿವಕುಮಾರ, ಮೋಹನ್ ರೆಡ್ಡಿ, ಮಲ್ಲಿಕಾರ್ಜುನಗೌಡ್ರು, ಜಯಲಕ್ಷ್ಮೀ ನಾಗನಗೌಡ, ಸುವರ್ಣ ಆರುಂಡಿ ನಾಗರಾಜ್, ಸಿ.ನವಾಜ್ ಬಾಷಾ, ರಾಜಶೇಖರಯ್ಯ, ಮಂಜುನಾಥ, ರಾಮಚಂದ್ರ ಶಾಸ್ತಿç, ಮಧುಸೂದನ್, ಹಾಲಪ್ಪ, ಗಂಗಪ್ಪ, ರವಿ ನಾಯ್ಕ್, ಎಂ.ಪಿ.ಎಂ.ಸಿದ್ದೇಶ್ವರ, ತಳವಾರ ಚಂದ್ರಪ್ಪ, ಹಡೇಗಾರ ರಮೇಶ್, ಮಂಜ್ಯಾನಾಯ್ಕ್, ಪ್ರದೀಪ್, ವಿದ್ಯಾರ್ಥಿ ಕಾರ್ಯದರ್ಶಿ ರೇಣುಕಪ್ರಸಾದ ಕಲ್ಮಠ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು, ವಿದ್ಯಾರ್ಥಿ ಪ್ರತಿನಿಧಿಗಳು, ಹಳೇ ವಿದ್ಯಾರ್ಥಿ ಬಳಗದರು ಇದ್ದರು.