ಗ್ರಂಥಾಲಯವು ವಿದ್ಯಾರ್ಥಿ ಜೀವನದ ಪ್ರಗತಿಯ ಮೆಟ್ಟಿಲು : ಅಮೃತಗೌಡ ಮಾವನೂರ

ಜೇವರ್ಗಿ:ನ. 21 : ಗ್ರಂಥಾಲಯವು ವಿದ್ಯಾರ್ಥಿಗಳ ಜೀವನದ ಮುಂದಿನ ಪ್ರಗತಿಯ ಮೆಟ್ಟಿಲು. ಗ್ರಂಥಾಲಯದಲ್ಲಿ ದಿನಕ್ಕೆ 2 ಗಂಟೆಯಾದರು ಸಮಯ ಕಳೆದರೆ ಸಾದನೆಯ ಮೆಟ್ಟಿಲೆರಬಹುದು ಎಂದು ಅಮೃತಗೌಡ ಮಾವನೂರ ಅಭಿಪ್ರಾಯಪಟ್ಟರು.

ಪಟ್ಟಣದ ಹಳೆ ತಹಸೀಲ್ ಆವರಣದಲ್ಲಿನ ಜೇವರ್ಗಿ ಶಾಖಾ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಗ್ರಂಥಾಲಯದ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮುಲಕ ಆಚರಿಸಲಾಯಿತು.

ಕಾರ್ಯಕ್ರಮದ ಜೋತಿ ಬೆಳಗಿಸಿ ಹಿರಿಯರಾದ ಶ್ರೀ ಅಮೃತಗೌಡ ಮಾವನೂರ ಮಾತನಾಡಿ ಗ್ರಂಥಾಲಯದಲ್ಲಿ ನಮಗೆ ಒದಲು ಹಲವು ಪತ್ರಿಕೆಗಳು ಸಿಗುತ್ತವೆ. ಕನ್ನಡ, ಇಂಗ್ಲೀಷ್ ಪತ್ರಿಕೆಗಳು ಒದಬಹುದು. ಪ್ರತಿದಿನದ ಮಾಹಿತಿಯನ್ನು ತಿಳಿಯಬಹುದು. ಗ್ರಂಥಾಲಯದಲ್ಲಿ ನಮ್ಮ ವಿದ್ಯಾರ್ಥಿಗಳು ಪ್ರತಿದಿನದಲ್ಲಿ 2 ಗಂಟೆ ತಮ್ಮ ಸಮಯವನ್ನು ಗ್ರಂಥಾಲಯಗಳಲ್ಲಿ ಕಳೆದರೆ ಅವರು ಸಾದನೆಯ ಮೆಟ್ಟಿಲು ಹತ್ತುವುದರಲ್ಲಿ ಸಂದೆಹವಿಲ್ಲ. ಗ್ರಂಥಾಲಯವು ನಮ್ಮ ವಿದ್ಯಾರ್ಥಿಗಳ ಜೀವನದ ಪ್ರಗತಿಯ ಮೆಟ್ಟಿಲು ಎಂದು ಹೆಳಿದರು.

ನಂತರ ಗ್ರಂಥಾಲಯದ ಸಿಬ್ಬಂದಿ ವಿರಭದ್ರ ಮಾತನಾಡಿ ಗ್ರಂಥಾಲಯವು ಜ್ಞಾನದ ಸಾಗರ, ಇಲ್ಲಿ ಹಲವು ವಿಷಯಗಳ ಬಗ್ಗೆ ಅದ್ಯಾಯನ ಮಾಡಲು ಅವಕಾಶಗಳಿರುತ್ತವೆ. ತಮ್ಮ ಪ್ರತಿದಿನದ ಸಮಯದಲ್ಲಿ ಕನಿಷ್ಟ ಪಕ್ಷ ಒಂದು ಗಂಟೆಯಾದರು ಗ್ರಂಥಾಲಯದಲ್ಲಿ ಕುಳಿತುಕೊಳಿ. ನಿಮಗೆ ಒದಲು ಹಲವು ಪತ್ರಿಕೆಗಳು, ಪುಸ್ತಕಗಳು ಸಿಗುತ್ತವೆ. ಕತೆ ಕಾದಂಬರಿ, ಮನರಂಜನೆ, ಕವನ, ದಿನ ಪತ್ರಿಕೆ, ಪರಿಕ್ಷೆ ತಯಾರಿಯ ಪುಸ್ತಕ ಸಿಗುತ್ತವೆ. ಗ್ರಂಥಾಲಯದ ಅನುಕಲವನ್ನು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪಡೆದುಕೊಳಬೇಕು ಎಂದರು

ಈ ಸಂದರ್ಭದಲ್ಲಿ ಸಂಜೆವಾಣಿ ವರದಿಗಾರ ಮರೆಪ್ಪ ಬೇಗಾರ, ಗಂಗಾಧರ ವಡಗೆರಿ, ಶರಣಬಸಪ್ಪ ಲಖಣಾಪೂರ ಸಿದ್ರಾಮ ಕಟ್ಟಿ ಕೊಳಕೂರ, ಮಹೇಶ ಕೋಕಿಲೆ, ಸಂಗಣ್ಣ ಕಟ್ಟಿಸಂಗಾವಿ, ಸಿದ್ದು ಜನಿವಾರ, ರಾಜಕೂಮರ ಸುಂಬುಡ, ಶಿವಾನಂದ ಸರ್, ಹಾಜಿ ಸರ್, ಮಹ್ಮದ ನರಿಬೊಳ ಬಾಬು ಮ್ಯಾಗೆರಿ ಉಪಸ್ಥಿತರಿದ್ದರು.