ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಿ: ಕಟ್ಟಿಮನಿ

ವಾಡಿ:ಡಿ.30: ಮಕ್ಕಳು ತಮ್ಮ ಪಠ್ಯದ ಜೊತೆ ಜೊತೆಗೆ ಗ್ರಂಥಾಲಯದಲ್ಲಿನ ಪುಸ್ತಕಗಳ ಸದುಪಯೋಗವನ್ನು ಪಡೆದು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದು ಚಿತ್ತಪೂರ ತಾಲ್ಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನಪ್ಪ ಎಂ ಕಟ್ಟಿಮನಿ ಹೇಳಿದರು.

ರಾವೂರ ಗ್ರಾಮ ಪ0ಚಾಯತಿಯಲ್ಲಿ ಜಿ.ಪಂ ಕಲಬುರಗಿ, ತಾ.ಪಂ ಚಿತ್ತಾಪೂರ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಓದುವ ಪುಸ್ತಕ ಅಭಿಯಾನ ಅಡಿಯಲ್ಲಿ ಪುಸ್ತಕ ಜೋಳಿಗೆ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶಾಲಾ ಮಕ್ಕಳು ಮತ್ತು ಗ್ರಾಮೀಣ ಸಾರ್ವಜನಿಕ ಗ್ರಂಥಾಲಯಗಳಿಗೆ ಸಂಪರ್ಕವೇ ಇಲ್ಲದಂತಾಗಿತ್ತು. ಎಷ್ಟೋ ಮಕ್ಕಳಿಗೆ ತಮ್ಮ ಊರಿನಲ್ಲಿ ಗ್ರಂಥಾಲಯಗಳಿವೆ ಎಂಬುವುದೆ ಗೊತ್ತಿರುವುದಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಜಾಗತಿಕ ಸ್ಪರ್ಧೆಗಳನ್ನು ಎದುರಿಸಲು ಮಕ್ಕಳು ಸಜ್ಜಾಗಬೇಕಿz.É ಆ ನಿಟ್ಟಿನಲ್ಲಿ ತಮ್ಮ ಜ್ಞಾನದ ಹರಿವನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿದ್ಧವೀರಯ್ಯ ರುದ್ನೂರ ಪುಸ್ತಕ ಜೋಳಿಗೆ ಜಾಥಾಗೆ ಚಾಲನೆ ನೀಡಿ ಗ್ರಾಮದ ಮನೆಮನೆಗೆ ತೆರಳಿ ಅವರು ಕೊಟ್ಟ ಪುಸ್ತಕಗಳನ್ನು ಸಂಗ್ರಹಿಸಿ ತಮ್ಮ ಊರಿನ ಗ್ರಂಥಾಲಯಕ್ಕೆ ನೀಡಿ ಆ ಪುಸ್ತಕಗಳನ್ನು ತಾವೆ ಬಳಸಿಕೊಳ್ಳಬಹುದಾಗಿದೆ. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಲು ಹಾಗೂ ಮಕ್ಕಳು ಸ್ಥಳಿಯ ಗ್ರಂಥಾಲಯಗಳ ಸದುಪಯೋಗ ಪಡೆಯಲು ಇಂತಹ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಮಕ್ಕಳ ಜೊತೆ ಗ್ರಾಮದಲ್ಲಿ ಪುಸ್ತಕ ಜೊಳಿಗೆಯ ಜಾಥಾಸಂಚರಿಸುತ್ತ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ ಗ್ರಂಥಾಲಯಕ್ಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ, ಪಿಡಿಒ ಕಾವೇರಿ ರಾಠೋಡ, ಸರಕಾರಿ ಪ್ರೌಢಶಾಲೆ ಮುಖ್ಯಗುರು ಸಿದ್ದಲಿಂಗ ಬೆಣ್ಣೂರ, ಶಿಕ್ಷಕರಾದ ಸಿದ್ದಲಿಂಗ ಬಾಳಿ, ಮಹಿಬೂಬ ಪಾಷಾ, ಅನ್ನಪೂರ್ಣ ಕೆರಳ್ಳಿ, ಕಾವೇರಿ, ಲಕ್ಷ್ಮಿ, ಭುವನೇಶ್ವರಿ, ಲರ್ನಿಂಗ್ ಲಿಂಕ ಫೌಂಡೆಷನನ ಭಾರತಿ, ಭವಾನಿ ಕರ ವಸೂಲಿಗಾರ ದೇವಿಂದ್ರ, ಚನ್ನಬಸಪ್ಪ ಬಂಡೆರ, ಶಿವಾನಂದ ಡೋಮನಾಳ ಸೇರಿದಂತೆ ಶಿಕ್ಷಕರು ಮಕ್ಕಳು ಉಪಸ್ಥಿತರಿದ್ದರು.

ಗ್ರಾಮದ ಮುಖಂಡರಾದ ಶಿವಲಿಂಗಪ್ಪ ವಾಡೆದ, ಚೆನ್ನಣ್ಣ ಬಾಳಿ, ಗುಂಡು ಹೂಗಾರ, ಶಾಂತು ಬಾಳಿ, ಮಹೇಶ ಬಾಳಿ, ಬಸಮ್ಮ ಹಾವೇರಿ, ರಾಚಣ್ಣ ದಂಡೋತಿ ಸೇರಿದಂತೆ ಗ್ರಾಮಸ್ಥರು ಪುಸ್ತಕ ಜೋಳಿಗೆಗೆ ಪುಸ್ತಕಗಳನ್ನು ನೀಡಿದರು.