ಗ್ರಂಥಾಲಯಗಳ ಸದ್ಬಳಕೆ ಮಾಡಿಕೊಳ್ಳಿ: ಇಂದುಮತಿ

ಅಫಜಲಪುರ:ಆ.14: ಅಮೂಲ್ಯವಾದ ವಿದ್ಯಾರ್ಥಿ ದೆಸೆಯನ್ನು ಹಾಳು ಮಾಡಿಕೊಳ್ಳದೆ ಸಮಯದ ಸದ್ಬಳಕೆ ಮಾಡಿಕೊಂಡು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ ಎಂದು ಫರಹತಾಬಾದ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಇಂದುಮತಿ ಪಾಟೀಲ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ವಿಭಾಗ, ಭಾರತೀಯ ಗ್ರಂಥ ಪಾಲಕರ ಸಂಘ ದೆಹಲಿ, ಸಾಂಚಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಶ್ರೀ ಹರ್ಷವರ್ಧನ ಡಿಗ್ರಿ ಕಾಲೇಜು ಮಲ್ಲಾಬಾದ ಇವರ ಸಯುಂಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಹಿಂದೆ ಗ್ರಂಥಾಲಯಗಳಲ್ಲಿ ಹೆಚ್ಚಿನ ಸೌಕರ್ಯಗಳಿಲ್ಲದ ಕಾರಣ ಹೆಚ್ಚಿನ ವಿಷಯಗಳು ತಿಳಿದುಕೊಳ್ಳಲು ಕಷ್ಟವಾಗಿತ್ತು. ಈಗ ಎಲ್ಲವೂ ಅತ್ಯಾಧುನಿಕವಾಗಿದೆ. ಹೀಗಾಗಿ ಎಲ್ಲರೂ ಗ್ರಂಥಾಲಯಗಳನ್ನು ಹೆಚ್ಚು ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಾಂಚಿ ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ ಸಿಂಗೆ ಹಾಗೂ ಹರ್ಷವರ್ಧನ ಡಿಗ್ರಿ ಕಾಲೇಜಿನ ಕನ್ನಡ ಉಪನ್ಯಾಸಕ ಗೌತಮ ಸಕ್ಕರಗಿ ಮಾತನಾಡುತ್ತಾ ಓದುವ ಹವ್ಯಾಸ ರೂಢಿಸಿಕೊಳ್ಳಿ ಆಗ ನಿಮ್ಮನ್ನು ಗ್ರಂಥಾಲಯ ತನ್ನತ್ತ ಸೆಳೆದುಕೊಳ್ಳುತ್ತದೆ. ಬರುವ ದಿನಗಳಲ್ಲಿ ಪಟ್ಟಣದ ಸರ್ಕಾರಿ ಪದವಿ ಕಾಲೇಜು ಗ್ರಂಥಾಲಯಗಳ ಸದ್ಬಳಕೆ ಕುರಿತಾಗಿ ಜಾಥಾ ರೀತಿಯಲ್ಲಿ ಅಭಿಯಾನ ಹಮ್ಮಿಕೊಳ್ಳಲಿ. ಅದಕ್ಕೆ ಎಲ್ಲರೂ ಸಹಕಾರ ನೀಡೋಣ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಮಾಣಿಕರಾವ್ ಕುಲಕರ್ಣಿ ಮಾತನಾಡಿದರು. ಗ್ರಂಥಪಾಲಕಿ ಡಾ. ಸಾವಿತ್ರಿ ಕೃಷ್ಣ ಪ್ರಾಸ್ತಾವಿಕ ಮಾತನಾಡಿದರು.

ಈ ಸಂದರ್ಭದಲ್ಲಿ ಸಿಬ್ಬಂದಿ ಕಾರ್ಯದರ್ಶಿ ಎಂ.ಎಸ್ ರಾಜೇಶ್ವರಿ, ಐಕ್ಯೂಎಸ್‍ಸಿ ಸಂಯೋಜಕ ಡಾ. ಸಂತೋಷ ಹುಗ್ಗಿ, ಡಾ. ದತ್ತಾತ್ರೇಯ ಸಿ.ಎಚ್, ಡಾ. ರಾಮಕೃಷ್ಣ ಹೆಚ್, ಡಾ. ವಿನಾಯಕ ಕುಲಕರ್ಣಿ, ಡಾ. ಸಂಗಣ್ಣ ಎಂ. ಸಿಂಗೆ, ವೈಜನಾಥ ಭಾವಿ, ಡಾ. ಗಿರಿಜಾ, ಮಡಿವಾಳಪ್ಪ ಮುಗಳಿ, ಮಹಾಂತೇಶ ವಠಾರ, ಚನ್ನಬಸು ದೊಡ್ಮನಿ, ಸುರೇಶ ಮುಗಳಿ, ಗೌರಿಶಂಕರ ಬೂರೆ, ಶರಣಬಸವೇಶ್ವರ, ಡಾ. ಸುರೇಖಾ ಕರೂಟಿ, ರಾಜೇಶ್ವರಿ ಸರಸಂಬಿ, ಕವಿತಾ ರಾಠೋಡ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ಡಾ. ಸೂಗುರೇಶ್ವರ ಆರ್.ಎಂ ಸ್ವಾಗತಿಸಿದರು, ಶ್ರೀದೇವಿ ರಾಠೋಡ ನಿರೂಪಿಸಿದರು, ಡಾ. ಮಹಮದ್ ಯೂನೂಸ್ ವಂದಿಸಿದರು.