ಗ್ರಂಥಾಲಯಗಳು ಮಾಹಿತಿ ಭಂಡಾರ

ಮಾಲೂರು.ಆ೧೪:ಗ್ರಾಮೀಣ ಗ್ರಂಥಾಲಯಗಳು ಮಕ್ಕಳ ಮತ್ತು ಸಾರ್ವಜನಿಕರ ಮಾಹಿತಿ ಭಂಡಾರಗಳಾಗಿ ಮಾರ್ಪಾಡಾಗುತ್ತಿವೆ ಅವುಗಳನ್ನು ಗ್ರಾಮೀಣ ಜನತೆ ಸದುಪಯೋಗ ಪಡಿಸಿ ಕೊಳ್ಳಬೇಕು ಎಂದು ಪಿಡಿಒ ಎ.ಭಾರತಮ್ಮ ತಿಳಿಸಿದರು.
ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಗ್ರಂಥಾಲಯದಲ್ಲಿ ಗ್ರಂಥಾಲಯದ ಪಿತಾಮಹ ಎಸ್. ಆರ್ ರಂಗರಾವ್ ರವರ ಜಯಂತಿಯಅಂಗವಾಗಿ ಹಮ್ಮಿ ಕೊಂಡಿದ್ದ ವಿಶ್ವ ಗ್ರಂಥಪಾಲಕರ ದಿನಾಚರಣೆಯಲ್ಲಿ ಬಾಗವಹಿಸಿ ಮಾತನಾಡಿದರು.
ವಿಶ್ವ ಗ್ರಂಥಪಾಲಕರ ದಿನಾಚರಣೆಯನ್ನು ಗ್ರಾಮೀಣ ಗ್ರಂಥಾಲಯದಲ್ಲಿ ಶಾಲಾ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡುತ್ತಿರುವುದು ಗ್ರಂಥಾಲಯದ ಅಭಿವೃದ್ಧಿ ಮತ್ತು ಇದರ ಬಗ್ಗೆ ಹಿಂದೆಗಿಂತ ಈಗ ಎಷ್ಟು ಜನರ ಗಮನ ಸೆಳೆದಿದೆ ಎಂಬುದು ತಿಳಿಸುತದೆ ಎಂದರು. ಗ್ರಾಮೀಣ ಭಾಗದ ಜನತೆಗೆ ಅನುಕೂಲಕರವಾಗುವ ರೀತಿಯಲ್ಲಿ ಮಾಹಿತಿ ಕೇಂದ್ರಗಳನ್ನಾಗಿ ಸರ್ಕಾರಗಳು ಮಾಡಿವೆ ಮೊದಲಿಗೆ ಯಾವುದಾದರೂ ಒಂದು ಪುಸ್ತಕ ಬೇಕಿದ್ದರೆ ಪಟ್ಟಣದಲ್ಲಿರುವ ಗ್ರಂಥಾಲಯಗಳಲ್ಲಿ ಹುಡಿಕಿಕೊಂಡು ಹೋಗಬೇಕಿತ್ತು ಇಲ್ಲಾಂದ್ರೆ ಅಂಗಡಿಯಲ್ಲಿ ಕೊಂಡು ಓದಬೇಕಿತ್ತು .
ಆದರೆ ಈಗ ಪಂಚಾಯತಿಗೊಂದು ಲೈಬ್ರರಿ ತೆಗೆದು ಕಂಪ್ಯೂಟರ್ ನೀಡಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳಾಗಿ ಮಾರ್ಪಪಡಿಸಿ ಸಾರ್ವಜನಿಕರು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದು ಇದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳ ಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಕಾರ್ಯದರ್ಶಿ ತುಳಿಸಿ ರಾಮ, ಗ್ರಂಥಾಲಯ ಮೇಲ್ವಿಚಾರಕಿ ಮುನಿರತ್ನಮ್ಮ ,ಶಾಲಾ ಶಿಕ್ಷಕರು ಶಾಲಾಮಕ್ಕಳು ಗ್ರಾಮದ ಮುಖಂಡರಾದ ಓದುಗರು ಇತರರು ಉಪಸ್ಥಿತರಿದ್ದರು.