ಗ್ರಂಥಾಲಯಗಳಿಂದ ಬಹುದೊಡ್ಡ ಕ್ರಾಂತಿ: ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ್

ಕಲಬುರಗಿ,ಸೆ.7: ಗ್ರಂಥಾಲಯದಲ್ಲಿ ಕ್ರಾಂತಿಯಾಗಿದೆ. ಪ್ರಕಟಿತ ಪುಸ್ತಕಗಳಿಂದ ಡಿಜಿಟಲ್ ಪುಸ್ತಕಗಳವರೆಗಿನ ಪ್ರಯಣ ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಮಾಡಿದೆ. ಮನೆಯಲ್ಲಿ ಕುಳಿತುಕೊಂಡು ಯಾವುದೇ ಅಂತಾರಾಷ್ಟ್ರೀಯ ಜರ್ನಲ್ ಓದಲು ಈಗ ಸಾಧ್ಯವಾಗಿದೆ. ಈ ಕಾರಣಕ್ಕಾಗಿಯೇ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಇ ಜರ್ನಲ್ ಮತ್ತು ಆನ್‍ಲೈನ್ ಜರ್ನಲ್‍ಗಳಿಗೆ ಸಬ್‍ಸ್ಕೈಬ್ ಮಾಡುತ್ತಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ ಬಟ್ಟು ಸತ್ಯನಾರಾಯಣ್ ಅವರು ಹೇಳಿದರು.
ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಭಾರತೀಯ ಗ್ರಂಥಪಾಲಕರ ಸಂಘ ಜಂಟಿಯಾಗಿ ರಾಷ್ಟ್ರೀಯ ಗ್ರಂಥ ಪಾಲಕರ ದಿನದ ನಿಮಿತ್ಯ ಆಯೋಜಿಸಿದ್ದ ಶೈಕ್ಷಣಿಕ ಉತ್ಕøಷ್ಟತೆಗಾಗಿ ಪಾಂಡಿತ್ಯಪೂರ್ಣ ಇ-ಸಂಪನ್ಮೂಲಗಳ ರಚನೆ” ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಶಿಕ್ಷಕ ನಿರಂತರ ಓದುಗ. ವಿದ್ಯಾರ್ಥಿಗಳು ಪರೀಕ್ಷೆ ಬರೆದು ಮುಗಿಸಿದಾಗ ಅವರ ಓದು ಕೊನೆಯಾಗುತ್ತದೆ. ಆದರೆ ಶಿಕ್ಷಕರು ಪ್ರತಿನಿತ್ಯ ಪರೀಕ್ಷೆ ಎದುರಿಸಬೇಕಾಗುತ್ತದೆ. ಹೀಗಾಗಿ ಶಿಕ್ಷಕರು ಒದುವ, ಬರೆಯುವ, ಸಂಶೋಧನೆಯ ಕೆಲಸ ನಿಲ್ಲಿಸಬಾರದು ಎಂದರು.
ನಳಂದಾ ವಿಶ್ವವಿದ್ಯಾಲಯ ಅಕ್ಷರಲೋಕಕ್ಕೆ ನೀಡಿದ ಕೊಡುಗೆ ಆಪಾರ. ಆದರೆ ನಳಂದಾ ವಿಶ್ವವಿದ್ಯಾಲಯ ಶೇಖರಿಸಿಟ್ಟಿದ್ದ ಜ್ಞಾನ ಭಂಡಾರವನ್ನು ಧ್ವಂಸಪಡಿಸಲಾಯಿತು. ನಳಂದಾ ವಿಶ್ವವಿದ್ಯಾಲಯಕ್ಕೆ ಬೆಂಕಿ ಇಟ್ಟಾಗ ಅದು ಆರು ತಿಂಗಳ ಉರಿಯಿತು ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಹೈದ್ರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ. ಎನ್. ವರದರಾಜನ್ ಅವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗ್ರಂಥಾಲಯ ಪಿತಾಮಹ ಎಂದು ಖ್ಯಾತರಾದ ಎಸ್.ಆರ್. ರಂಗನಾಥನ್ ಅವರ ಕುರಿತು ವಿಶೇಷ ಉಪನ್ಯಾಸ ನೀಡಿ, ಎಸ್.ಆರ್. ರಂಗನಾಥನ್ ಅವರು ಮದ್ರಾಸ್ ವಿಶ್ವವಿದ್ಯಾಲಯ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಒಳಗೊಂಡಂತೆ ದೇಶದ ಅನೇಕ ವಿವಿಗಳಲ್ಲಿ ಗ್ರಂಥಪಾಲಕರಾಗಿ, ಗ್ರಂಥಾಲಯ ಶಿಕ್ಷಣದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಭಾರತೀಯ ಗ್ರಂಥಾಲಯಕ್ಕೆ ಅವರು ಶ್ರೇಷ್ಠ ಕೊಡುಗೆ ನೀಡಿದ್ದಾರೆ ಎಂದರು.
ಗ್ರಂಥಾಲಯದ ಅಭಿವೃದ್ಧಿಗಾಗಿ ಅವರು ನೀಡಿದ ಸೂತ್ರರೂಪದ ಸಲಹೆಗಳನ್ನು ದೇಶದ ಗ್ರಂಥಪಾಲಕರು ಗೌರವದಿಂದ ಕಾಣುತ್ತಾರೆ ಎಂದು ವರದರಾಜನ್ ಅವರು ಹೇಳಿದರು. ಪ್ರಕಾಶಕರು ಪುಸ್ತಕಗಳನ್ನು ಪ್ರಕಟಿಸಲು ಮುಂದೆ ಬರುತ್ತಿಲ್ಲ. ಬೇಡಿಕೆ ಇದ್ದರೆ ಮಾತ್ರ ಪ್ರಕಾಶಕರು ಪುಸ್ತಕಗಳನ್ನು ಪ್ರಕಟಿಸುತ್ತಾರೆ. ಓದುಗರು ಗ್ರಂಥಾಲಯ ಹುಡುಕಿಕೊಂಡು ಬರುವ ಕಾಲ ಒಂದಿತ್ತು. ಆದರೆ ಈಗ ಗ್ರಂಥಾಲಯಗಳು ಓದುಗರನ್ನು ಹುಡುಕಿಕೊಂಡು ಹೋಗುತ್ತಿವೆ. ಪ್ರಕಟಿತ ಪ್ರತಿಯೊಂದು ಪುಸ್ತಕ ಡಿಜಿಟಲ್ ರೂಪದಲ್ಲಿ ಲಭ್ಯವಿದೆ ಎಂದು ಅವರು ಹೇಳಿದರು.
ಕುಲಸಚಿವ ಪ್ರೊ. ಬಸವರಾಜ್ ಡೋಣೂರ್ ಅವರು ಮಾತನಾಡಿ, ಹೊಸದನ್ನು ಹೇಳದ, ಹೊಸ ಹೆಜ್ಜೆಇಡದ ಸಂಶೋಧನಗೆ ಮಹತ್ವ ಇಲ್ಲ. ಮಹಾ ಪ್ರಬಂಧ ರಚನೆಯಲ್ಲಿ ಭಾμÉ, ಶೈಲಿಗೆ ಮಹತ್ವ ಇದೆ. ಆದರೆ ಅದμÉ್ಟೀ ಸಾಲದು. ಸಂಶೋಧನೆಯ ಉದ್ದೇಶ, ಸಂಶೋಧನಾ ಫಲಿತಗಳು ಮತ್ತು ಸಮಕಾಲೀನ ಪ್ರಸ್ತುತತೆ ಸಂಶೋಧನೆಯಲ್ಲಿ ಮಹತ್ವದ ಪಾತ್ರ ವಹಿಸಬೇಕು. ಶೈಕ್ಷಣಿಕ ನೈತಿಕತೆ ಮತ್ತು ಸಂಶೋಧನಾತ್ಮಕ ಬದ್ಧತೆ ಇರದಿದ್ದರೆ ಒಳ್ಳೆಯ ಸಂಶೋಧನೆ ಸಾಧ್ಯವಿಲ್ಲ ಎಂದರು.
ಗ್ರಂಥಪಾಲಕ ಡಾ. ಪರಶುರಾಮ್ ಕಟ್ಟೀಮನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಯದೇವಿ ಜಂಗಮಶೆಟ್ಟಿ ಮತ್ತು ಡಾ. ರವಿಕಿರಣ್ ನಾಕೋಡ್ ಅವರು ರಾಷ್ಟ್ರೀಯ ಗೀತೆ ಹಾಡಿದರು, ಡಾ. ಕಿರಣ್ ಗಾಜನೂರ್ ಅವರು ಕಾರ್ಯಕ್ರಮ ನಿರೂಪಿಸಿದರು. ಶೈಕ್ಷಣಿಕ ವರ್ಷದಲ್ಲಿ ಅತೀ ಹೆಚ್ಚು ಲೈಬ್ರೇರಿ ಉಪಯೋಗಕರಿಗೆ ಸನ್ಮಾನ ಮಾಡಲಾಯಿತು.