ಗ್ರಂಥಾಲಯಗಳಲ್ಲಿ ಹೆಚ್ಚಾಗಿ ಸ್ಪರ್ಧಾತ್ಮಕ ಪುಸ್ತಕಗಳನ್ನು ಸಂಗ್ರಹಿಸಿ:ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಬೀದರ, ಜೂ.7: ಇತ್ತೀಚಿಗೆ ಮಕ್ಕಳು ಹೆಚ್ಚಾಗಿ ಸ್ಪಧಾತ್ಮಕ ಪರೀಕ್ಷೆಗಳಿಗೆ ತೈಯ್ಯಾರಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪುಸ್ತಕಗಳನ್ನು ಸಂಗ್ರಹಿಸಿ, ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ 2023-24ನೇ ಸಾಲಿನ ಆಯ-ವ್ಯಯದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಂಥಾಲಯಗಳಲ್ಲಿ ಐತಿಹಾಸಿಕ ಪುಸ್ತಕಗಳನ್ನು ಸಂರಕ್ಷಿಸಿಡಬೇಕು ಹಳೆ ವಸ್ತುಗಳ ವಿಲೇವಾರಿ ಮಾಡುವಾಗ ಮೌಲ್ಯಯುತ ಪುಸ್ತಕಗಳನ್ನು ನೋಡಿಕೊಂಡು ವಿಲೇವಾರಿ ಮಾಡಬೇಕು. ನಗರಸಭೆಯಿಂದ ನಡೆಯುವ ಸಭೆಗೆ ಗ್ರಂಥಾಲಯ ಅಧಿಕಾರಿಗಳು ಬರಬೇಕು ಅಂದಾಗ ಮಾತ್ರ ತೆರಿಗೆಯ ಖರ್ಚು ವೆಚ್ಚಗಳ ಮಾಹಿತಿ ಪಡೆಯಲು ತಮಗೆ ಅನುಕೂಲವಾಗುತ್ತದೆ. ಸಾರ್ವಜನಿಕರಿಗೆ ಕಾಣುವ ಹಾಗೆ ಗ್ರಂಥಾಲಯಗಳ ಕಚೇರಿಯ ಬೋರ್ಡಗಳನ್ನು ದೊಡ್ಡ ಅಕ್ಷರದಲ್ಲಿ ಬರೆಸಿ ಹಾಕಬೇಕು. ಅನುಪಯುಕ್ತ ಪಿಠೋಪಕರಣಗಳು ಮತ್ತು ಇತರೆ ವಸ್ತುಗಳನ್ನು ಹರಾಜು ಮಾಡುವ ಮುಂಚೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ದರ ನಿಗದಿಪಡಿಸಿ ಹರಾಜು ಹಾಕಬೇಕೆಂದರು.

ತಾಲೂಕು ಕೇಂದ್ರಗಳಲ್ಲಿ ಗ್ರಂಥಾಲಯಗಳನ್ನು ಕಟ್ಟಿದ ಮೇಲೆ ತಮ್ಮ ಇಲಾಖೆಯಿಂದಲೇ ಸಿಬ್ಬಂದಿಗಳು ಕಾರ್ಯನಿರ್ವಹಿಸುವಂತಾಗಬೇಕು. ಹುಮನಾಬಾದ ಮತ್ತು ಬಸವಕಲ್ಯಾಣದಲ್ಲಿ ಗ್ರಂಥಾಲಯಕ್ಕೆ ಜಾಗವಿದ್ದು ಇಲ್ಲಿ ಆದಷ್ಟು ಬೇಗ ಗ್ರಂಥಾಲಯ ಕಟ್ಟಡ ನಿರ್ಮಿಸಬೇಕಿದೆ. ಹೋದ ವರ್ಷ ಗ್ರಂಥಾಲಯ ಖರ್ಚು ವೆಚ್ಚಗಳಿಗೆ ಅನುಮತಿ ನೀಡಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮುಖ್ಯ ಗ್ರಂಥಾಲಯ ಅಧಿಕಾರಿ ಸಿದ್ದಾರ್ಥ ಎ.ಭಾವಿಕಟ್ಟಿ ಅವರು ತ.ರಾ.ಸು. ಅವರು ಬರೆದ ದುರ್ಗಾಸ್ತಮಾನ ಪುಸ್ತಕವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.

ಈ ಸಭೆಯಲ್ಲಿ ಮುಖ್ಯ ಗ್ರಂಥಾಲಯ ಅಧಿಕಾರಿ ಸಿದ್ದಾರ್ಥ ಎ.ಭಾವಿಕಟ್ಟಿ,s ಬೀದರ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ಪ್ರವೀಣ್ ಮಿರಾಗಂಜ್ಕರ್, ಶಿವದೇವ ಮಠಪತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಸುರೇಶ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಗ್ರಂಥಾಲಯ ಇಲಾಖೆಯ ಸಿಬ್ಬಂದಿಗಳಾದ ಮಹಾದೇವ ಮಾನೆ, ರಘು, ವೀರಣ್ಣ, ಕುಮಾರಿ ಭವಾನಿ ಹಾಗೂ ಸುಭಾಷ ಸೇರಿದಂತೆ ಇತರರು ಉಪಸ್ಥಿತರಿದ್ದರು.