ಗ್ರಂಥಪಾಲಕರ ದಿನಾಚರಣೆ

ಮಾದಹಿಪ್ಪರಗಿ:ಆ.13: ಸ್ಥಳೀಯ ಗ್ರಾಮ ಪಂಚಾಯತ ಗ್ರಂಥಾಲಯದಲ್ಲಿ ಇಂದು ಗ್ರಂಥಪಾಲಕರ ದಿನಾಚರಣೆ ಆಚರಿಸಲಾಯಿತು.

ಗ್ರಂಥಾಲಯದ ಪಿತಾಮಹ ಎಂದೆನಿಸಿಕೊಂಡ ಎಸ್.ಆರ್.ರಂಗನಾಥ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಮೇಲ್ವಿಚಾರಕ ಬಲಭೀಮ ಮದ್ರೆ ಪ್ರಸ್ತುತದಿನಗಳಲ್ಲಿ ಓದುಗರ ಸಂಖ್ಯೆ ಬಹಳ ಕಡಿಮೆಯಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಓದು ಬಹಳ ಮುಖ್ಯ. ಜ್ಞಾನದ ದೇಗುಲ ಈ ಗ್ರಂಥಾಲಯವಾಗಿರುತ್ತದೆ. ಜ್ಞಾನಿಗಳೆನಿಸಿಕೊಂಡವರು ಓದಿನಿಂದಲೇ ವಿಶ್ವಮಾನವರಾಗಿದ್ದಾರೆ. ಇದು ನಿಮ್ಮ ಗ್ರಂಥಾಲಯ ಬನ್ನಿ ಓದಿರಿ. ಸರಕಾರ ಈ ಕೂಡಲೆ ನಮ್ಮ ಗ್ರಾಮ ಪಂಚಾಯತ ಗ್ರಂಥಾಲಯಕ್ಕೆ ಈ ಕೂಡಲೆ ಕಟ್ಟಡ ನಿರ್ಮಿಸಿಕೊಟ್ಟರೆ ಓದುಗರಿಗೆ ಕೂಡಲು ಬಹಳ ಅನುಕೂಲವಾಗುತ್ತದೆ. ಇಕ್ಕಟ್ಟಾದ ಈ ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ಇಡಲು ಜಾಗವಿಲ್ಲದೆ ಮೂಲೆಯಲ್ಲಿ ಕುಳಿತಿವೆ. ಸಾರ್ವಜನಿಕರ ಸಹಕಾರದಿಂದ ಜನಪ್ರತಿನಿಧಿಗಳು ಇದರತ್ತ ಗಮನ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಂತರ ಸರಕಾರಿ ಕನ್ಯಾ ಪ್ರಾಥಮಿಕ ಶಾಲೆ ಮತ್ತು ಸರಕಾರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಿಹಿ ಹಂಚಲಾಯಿತು. ಮುಖ್ಯ ಗುರುಗಳಾದ ನಾಗಪ್ಪ ಇಕ್ಕಳಕಿ, ಶಂಕರ ಮೋಟಗಿ, ಹಡಲಗಿ ಗ್ರಂಥಾಲಯದ ಮೇಲ್ವಿಚಾರಕ ಮಹಾಂತಪ್ಪ ಹಾದಿಮನಿ ಇತರ ಗ್ರಂಥಾಲಯದ ಸದಸ್ಯರುಗಳು, ಓದುಗರು ಹಾಜರಿದ್ದರು.