ಗ್ರಂಥಗಳ ಲೋಕಾರ್ಪಣೆ :ರಾಷ್ಟ್ರೀಯ ವಿಚಾರ ಸಂಕಿರಣ


ಧಾರವಾಡ,ಫೆ.26:ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿಕನ್ನಡ ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಪೂರಕವಾಗಿ ಹಲವಾರು ಮಹತ್ವದಕನ್ನಡಆಕರ ಗ್ರಂಥಗಳ ಕರ್ತೃಆಗಿರುವ ಹಿರಿಯ ವಿದ್ವಾಂಸರಾದ ಪ್ರೊ. ಸಂಗಮೇಶ ಸವದತ್ತಿಮಠಅವರುಕನ್ನಡವಾಙ್ಮಯ ವಿಹಾರದಲ್ಲಿ ಭಾಷಾ ವಿಜ್ಞಾನ, ಸಂಶೋಧನೆ ಸೇರಿ 135ಕ್ಕೂ ಹೆಚ್ಚು ಕೃತಿಗಳನ್ನು ಹೊರತರುವಲ್ಲಿ ನಿರಂತರವಾಗಿ ಶ್ರಮಿಸಿದ್ದಾರೆ ಎಂದು ಹಂಪಿಯಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎ. ಮುರಿಗೆಪ್ಪ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘ, ಕ.ವಿ.ವಿ. ಡಾ. ಆರ್.ಸಿ. ಹಿರೇಮಠಕನ್ನಡಅಧ್ಯಯನ ಪೀಠಹಾಗೂ ನಗರದಚಿನ್ಮಯಿ ಪ್ರಕಾಶನಗಳ ಸಂಯುಕ್ತಾಶ್ರಯದಲ್ಲಿಪ್ರೊ.ಸಂಗಮೇಶ ಸವದತ್ತಿಮಠಅವರ 80ನೇ ವರ್ಷದ ಹುಟ್ಟಹಬ್ಬದ ನಿಮಿತ್ತಮೂರುಗ್ರಂಥಗಳ ಲೋಕಾರ್ಪಣೆ ಹಾಗೂ ಬದುಕು, ಸಾಹಿತ್ಯಕುರಿತಒಂದು ದಿನದರಾಷ್ಟ್ರೀಯ ವಿಚಾರ ಸಂಕಿರಣವನ್ನುಉದ್ಘಾಟಿಸಿ ಮಾತನಾಡುತ್ತಿದ್ದರು.
ವಿಶೇಷವಾಗಿ ಕನ್ನಡ ಭಾಷಾ ವಿಜ್ಞಾನ ಮತ್ತು ಸಂಶೋಧನಾಕ್ಷೇತ್ರದಲ್ಲಿಯೋಗಿಯಂತೆಕಾರ್ಯತತ್ಪರಾದಡಾ.ಸವದತ್ತಿಮಠಅವರು,ಕನ್ನಡಕ್ಕಿರುವಐತಿಹಾಸಿಕ ಆಯಾಮ, ಸಾಮಾಜಿಕಆಯಾಮ ಹಾಗೂ ಪ್ರಾದೇಶಿಕ ಆಯಾಮಗಳನ್ನುಪರಿಗಣಿಸಿ, ಹಲವಾರು ಮೌಲಿಕ ಕೃತಿಗಳ ಮೂಲಕ ಕನ್ನಡವನ್ನು ಲೋಕಕ್ಕೆ ಪರಿಚಯಿಸಿದ್ದಾರೆ.ದ್ರಾವಿಡ ಭಾಷೆಗಳ ಕುರಿತುತೌಲನಿಕ ಅಧ್ಯಯನ ಮಾಡಿದ್ದಾರೆ. ಭಾಷಾ ವಿಜ್ಞಾನ, ದ್ರಾವಿಡ ಭಾಷಾ ವಿಜ್ಞಾನಕುರಿತಂತೆತುಂಬಾ ಸರಳವಾಗಿ ವಿದ್ಯಾರ್ಥಿಗಳಿಗೆಸುಲಭವಾಗಿ ತಿಳಿಯುವ ಭಾಷೆಯಲ್ಲಿಬರವಣಿಗೆಯನ್ನು ರೂಢಿಸಿಕೊಂಡಿರುವ ಇವರ ಕೃತಿಗಳು ರಾಜ್ಯದಎಲ್ಲ ವಿಶ್ವವಿದ್ಯಾಲಯಗಳಲ್ಲೂ ಪಠ್ಯವಾಗಿ ಪರಿಗಣನೆಆಗಿರುವುದುಅವರ ಬರವಣಿಗೆಯ ಮೌಲಿಕ ಹಿರಿಮೆಯನ್ನು ಸಾಕ್ಷೀಕರಿಸುತ್ತದೆಎಂದರು.
ವಚನ ಪದಕೋಶ: ವಿಸ್ತøತವಾಗಿರುವ ವಚನ ಸಾಹಿತ್ಯದ ಆಳವಾದ ಅವಲೋಕನದಲ್ಲಿ ಬಸವ ಪೂರ್ವ ಹಾಗೂ ಬಸವಾದಿ ಶರಣರ ವಚನಗಳಲ್ಲಿ ಬಳಕೆಯಾದ ಶಬ್ದಗಳ ಅರ್ಥವಿಶ್ಲೇಷಣೆಗೆ ಪೂರಕವಾಗಿಡಾ. ಸವದತ್ತಿಮಠಅವರು ರಚಿಸಿರುವ ‘ವರ್ಣನಾತ್ಮಕ ವಚನ ಪದಕೋಶ’ ಗಮನಸೆಳೆಯುತ್ತದೆ.ಓದಿನ ವಿಸ್ತಾರ, ತೌಲನಿಕ ಅಧ್ಯಯನ, ಭಾಷಾ ವಿಜ್ಞಾನದ ಬೆಳವಣಿಗೆಗಳ ನೆಲೆಯಲ್ಲಿ ಹಲವಾರು ಮಹತ್ವದ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟ ಹಿರಿಮೆಡಾ.ಸಂಗಮೇಶ ಸವದತ್ತಿಮಠಅವರಿಗೆ ಸಲ್ಲುತ್ತದೆಎಂದರು.
ತಮಗೆ ನೀಡಿದಗೌರವವನ್ನು ಸ್ವೀಕರಿಸಿ ಮಾತನಾಡಿದ ಪ್ರೊ.ಸಂಗಮೇಶ ಸವದತ್ತಿಮಠಅವರು ಮುಕ್ತವಾಗಿ ಮತ್ತು ಸತ್ಯ ನಿಷ್ಠೆಯ ನೆಲೆಯಲ್ಲಿಯಾವ ಫಲಾಪೇಕ್ಷೆಯನ್ನು ಬಯಸದೇ ರೂಢಿಸಿಕೊಂಡ ಬರವಣಿಗೆಇವತ್ತುಉನ್ನತ ಸಾಧನೆಯಗೌರವವನ್ನುತಂದುಕೊಟ್ಟ ಸಂತೃಪ್ತಿತಮಗಿದೆ.ಕಥೆ, ಕವನ, ವಿಮರ್ಶೆ, ಲಲಿತ ಪ್ರಬಂಧ, ಭಾಷಾ ವಿಜ್ಞಾನ, ಸಂಶೋಧನೆ, ಸಂಪಾದನೆ ಸೇರಿದಂತೆ ಹತ್ತು ಹಲವುಕನ್ನಡಸಾಹಿತ್ಯ ಕ್ಷೇತ್ರಗಳತ್ತ ಗಮನಹರಿಸಿ ಹೊಸತುಅವಲೋಕನದಕೃತಿರಚಿಸುವಲ್ಲಿ ಯಶಸ್ವಿಯಾದೆ.ಕನ್ನಡಸಾಹಿತ್ಯಚಿಂತನೆಯ ಮುಕ್ತ ಚರ್ಚೆಗೆ ವೇದಿಕೆಯಾಗಿ ‘ಸಂಶೋಧನಾ ವ್ಯಾಸಂಗ’ ದ್ವೈಮಾಸಿಕ ಪತ್ರಿಕೆಯನ್ನುಮೂವತ್ತು ವರ್ಷಗಳ ಕಾಲ ನಡೆಸಿದ್ದು ತಮಗೆತೃಪ್ತಿತಂದಿದೆಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದಉಪಾಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿಉದ್ಘಾಟನಾ ಸಮಾರಂಭದಅಧ್ಯಕ್ಷತೆ ವಹಿಸಿದ್ದರು.ಉನ್ನತ ಶಿಕ್ಷಣ ಅಕ್ಯಾಡೆಮಿಯ ನಿರ್ದೇಶಕಡಾ.ಎಸ್.ಎಂ.ಶಿವಪ್ರಸಾದ ‘ಸಮಯದ ವಚನಗಳು’ ‘ವಚನ ಡಿಕ್ಷನರಿ’ ಹಾಗೂ ‘ಮುನ್ನುಡಿತೋರಣ’ ಕೃತಿಗಳನ್ನು ಬಿಡುಗಡೆ ಮಾಡಿದರು.ಮುನ್ನುಡಿತೋರಣ ಸಂಪಾದಕಡಾ.ಬಾಳಪ್ಪ ಚಿನಗುಡಿ ಹಾಗೂ ಹಿರಿಯ ವರ್ತಕ ಬಸವರಾಜ ವಸ್ತ್ರದಇದ್ದರು.ಕ.ವಿ.ವ. ಸಂಘದಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿದರು. ಕ.ವಿ.ವಿ. ಕನ್ನಡಅಧ್ಯಯನ ಪೀಠದ ನಿವೃತ್ತ ಪ್ರಾಧ್ಯಾಪಕ ಪ್ರೊ.ಧನವಂತ ಹಾಜವಗೋಳ ಆಶಯ ನುಡಿ ಹಂಚಿಕೊಂಡರು. ಕ.ವಿ.ವ. ಸಂಘದಕಾರ್ಯಕಾರಿ ಸಮಿತಿ ಸದಸ್ಯಡಾ.ಜಿನದತ್ತ ಹಡಗಲಿ ನಿರೂಪಿಸಿದರು. ಸಂಘದ ಸಹ ಕಾರ್ಯದರ್ಶಿ ಶಂಕರ ಕುಂಬಿ ವಂದಿಸಿದರು.ಪ್ರೊ.ಮಲ್ಲಿಕಾರ್ಜುನ ಹಿರೇಮಠ,ನಿಂಗಣ್ಣಕುಂಟಿ, ವಿಶ್ವೇಶ್ವರಿ ಬ. ಹಿರೇಮಠ, ಹನುಮಾಕ್ಷಿ ಗೋಗಿ, ಜಿ.ಬಿ. ಹೊಂಬಳ, ಮಲ್ಲಿಕಾರ್ಜುನಚಿಕ್ಕಮಠ, ಬಳ್ಳಾರಿಯ ಡಾ. ಸಿ.ಎಂ.ವೀರಭದ್ರಯ್ಯ, ಡಾ. ಮಹಾಂತಸ್ವಾಮಿ ಹಿರೇಮಠ, ಸುಜಾತಾ ಹಡಗಲಿ, ಶಿವಾನಂದ ಹೂಗಾರ,
ಮೊದಲ ಗೋಷ್ಠಿ: ಪುಣೆಯ ಮಹಾರಾಷ್ಟ್ರರಾಜ್ಯ ಸರಕಾರದ ಪಠ್ಯ ಪುಸ್ತಕ ನಿರ್ದೇಶನಾಲಯದಕನ್ನಡ ವಿಭಾಗದ ಮುಖ್ಯಸ್ಥಡಾ. ಸಂದಾನಂದ ಬಿಳ್ಳೂರ ಅವರಅಧ್ಯಕ್ಷತೆಯಲ್ಲಿನಡೆದ ಮೊದಲ ಗೋಷ್ಠಿಯಲ್ಲಿ ‘ಪ್ರೊ. ಸಂಗಮೇಶ ಸವದತ್ತಿಮಠಅವರ ಬದುಕು ಮತ್ತು ಸಾಧನೆ’ ಕುರಿತು ಲೇಖಕ ಡಾ ಬಾಳಪ್ಪ ಚಿನಗುಡಿ, ‘ವಿಷಯ ವಚನ ಸಂಪುಟಗಳು’ ಕುರಿತು ಬೆಂಗಳೂರಿನ ಸಾಹಿತಿ ಪ್ರೊ. ಸಿ. ಶಿವಕುಮಾರಸ್ವಾಮಿ, ‘ವಚನ ನಿಘಂಟುಗಳು’ ಕುರಿತು ಕ.ವಿ.ವಿ. ಕನ್ನಡಅಧ್ಯಯನ ಪೀಠದ ನಿವೃತ್ತ ಪ್ರಾಧ್ಯಾಪಕಿ ಪ್ರೊ. ಶಾಂತಾಇಮ್ರಾಪೂರ ಹಾಗೂ ‘ಸಮಯದ ವಚನಗಳು, ಅಂಕಣ ಬರಹ ಮತ್ತುಇತರೆ ಲೇಖನ ಸಾಹಿತ್ಯ’ ಕುರಿತುಕ.ವಿ.ವಿ. ಕನ್ನಡಅಧ್ಯಯನ ಪೀಠದ ಪ್ರಾಧ್ಯಾಪಕಡಾ.ಮಲ್ಲಪ್ಪ ಬಂಡಿಉಪನ್ಯಾಸ ನೀಡಿದರು.ಲೇಖಕ ಡಾ.ಗುರುಮೂರ್ತಿ ಯರಗಂಬಳಿಮಠ ನಿರೂಪಿಸಿ ವಂದಿಸಿದರು.
ಎರಡನೆ ಗೋಷ್ಠಿ: ಕಲಬುರ್ಗಿಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜಡೋಣೂರಅಧ್ಯಕ್ಷತೆಯಲ್ಲಿ ನಡೆದಎರಡನೇ ಗೋಷ್ಠಿಯಲ್ಲಿ ‘ಸೃಜನ, ವಿಮರ್ಶೆ ಮತ್ತು ಸಂಪಾದನೆ’ ಕುರಿತುಕ.ವಿ.ವಿ. ಕನ್ನಡಅಧ್ಯಯನ ಪೀಠದ ನಿವೃತ್ತ ಪ್ರಾಧ್ಯಾಪಕ ಪ್ರೊ.ಧನವಂತ ಹಾಜವಗೋಳ ಹಾಗೂ ‘ಸಂಶೋಧನೆ ಮತ್ತು ಭಾಷಾ ವಿಜ್ಞಾನ’ ಕುರಿತು ಕಲಬುರ್ಗಿ ವಿಶ್ವವಿದ್ಯಾಲಯದಕನ್ನಡಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಪ್ರೊ. ವಿ.ಜಿ. ಪೂಜಾರಉಪನ್ಯಾಸ ನೀಡಿದರು.ಕರ್ನಾಟಕಕಾಲೇಜಿನಉಪನ್ಯಾಸಕಿಡಾ.ಪಿ.ಕೆ.ಧಾರವಾಡ ನಿರೂಪಿಸಿ ವಂದಿಸಿದರು.