ಗ್ರಂಥಗಳ ಬಿಡುಗಡೆ

ಧಾರವಾಡ,ಏ5 : ವೃತ್ತಿಯಿಂದ ನ್ಯಾಯಾಧೀಶರಾಗಿದ್ದಡಾ. ಜಿನದತ್ತದೇಸಾಯಿಯವರು ವೃತ್ತಿಯಲ್ಲಿ ಬದ್ಧತೆ ಬದುಕಿನಲ್ಲಿ ಶುದ್ಧತೆ ಉಳ್ಳವರಾಗಿದ್ದರು. ಅವರೊಬ್ಬ ಮಾನವೀಯ ಕಾಳಜಿವುಳ್ಳ ಕವಿಗಳು ಎಂದು ಮೈಸೂರಿನ ಸಾಹಿತಿಗಳಾದ ಎಂ.ಜೆ.ಆರ್.ಅರಸಅವರುಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಕವಿ ಡಾ.ಜಿನದತ್ತದೇಸಾಯಿದತ್ತಿ ಅಂಗವಾಗಿ ಆಯೋಜಿಸಿದ್ದ ‘ಜಿನದತ್ತರಕಾವ್ಯದಲ್ಲಿ ನಿಸರ್ಗ' ಮತ್ತುಅಂಜಲಿ ಮೆ ಉಜಾಲಾ’ (ಬೊಗಸೆಯಲ್ಲಿ ಬೆಳಕು : ಹಿಂದಿ ಭಾಷಾಂತರ) ಗ್ರಂಥಗಳ ಬಿಡುಗಡೆ ಹಾಗೂ ಉಪನ್ಯಾಸನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಚುಟುಕು ಸಾಹಿತ್ಯಆಲಕ್ಷಕ್ಕೆ ಒಳಗಾದ ಸಂದರ್ಭದಲ್ಲಿಡಾ.ಜಿನದತ್ತದೇಸಾಯಿಯವರ 200 ಚುಟುಕುಗಳನ್ನು ಸಂಗ್ರಹಿಸಿ ಕೃತಿರಚನೆ ಮಾಡುವ ಭಾಗ್ಯ ನನಗೆ ಸಿಕ್ಕಿದ್ದು ಸುದೈವ. ಈ ಕೃತಿಯುಎಲ್ಲರ ಹೃದಯಗೆಲ್ಲಬಲ್ಲ ಶಕ್ತಿ ಇದೆ. ಎಲ್ಲರ ಮನೆ-ಮನದಲ್ಲೂ ಶಾಶ್ವತವಾಗಿಇರಬಲ್ಲ ಅಪರೂಪದಕೃತಿಎಂದು ಹೇಳಿದರು.
ಬೆಳಗಾವಿಯ ಹಿರಿಯ ಪತ್ರಕರ್ತರಾದಎಲ್.ಎಸ್. ಶಾಸ್ತ್ರಿ “ಜಿನದತ್ತದೇಸಾಯಿಅವರಕಾವ್ಯದಲ್ಲಿ ನಿಸರ್ಗ” ಕೃತಿ ಪರಿಚಯಿಸಿ, ಈ ಕೃತಿ ಈಗಿನ ತಲೆಮಾರಿನಯುವ ಕವಿಗಳಿಗೊಂದು ಮಾದರಿ.ಕಾವ್ಯಎಂದರೇನು ?ಅದುಏನನ್ನು ಒಳಗೊಂಡಿರಬೇಕು ಎಂಬುದನ್ನು ತಿಳಿಸುವ ಮಾರ್ಗದರ್ಶಿಕೆಯಾಗಿದೆ.ಈ ಕೃತಿಯಲ್ಲಿಡಾ.ಜಿನದತ್ತದೇಸಾಯಿಅವರು ನಿಸರ್ಗದ ಸೂರ್ಯ, ಚಂದ್ರ ಹಾಗೂ ನಕ್ಷತ್ರಗಳ ಬಗ್ಗೆ ಪ್ರಾಕೃತಿಕ ಸನ್ನಿವೇಶಗಳ ಬಗ್ಗೆ ವರ್ಣಮಯವಾಗಿ ಬರೆದಿದ್ದಾರೆ. ಅವರು ಬದುಕು-ಬರಹದ ನಡುವೆ ಸಮನ್ವಯತೆ ಸಾಧಿಸಿದಂತವರು ಎಂದು ಹೇಳಿದರು.
ಡಾ. ಪಾಶ್ರ್ವನಾಥಕೆಂಪಣ್ಣವರ್‍ಡಾ.ಜಿನದತ್ತದೇಸಾಯಿಯವರ ಬೊಗಸೆಯಲ್ಲಿ ಬೆಳಕು ಹಿಂದಿ ಭಾಷಾಂತರಕೃತಿ ‘ಅಂಜಲಿ ಮೆ ಉಜಾಲಾ’ ಕೃತಿಕುರಿತು ಮಾತನಾಡಿ, ಈ ಕೃತಿಯನ್ನು ಕುಸುಮ ಗೀತಅವರು ಶ್ರಮ ವಹಿಸಿ ರಚಿಸಿದ್ದಾರೆ. ಅವರ ಶ್ರಮ ಸಾರ್ಥಕಜೊತೆಗೆಇತರ ಭಾಷೆಯಲ್ಲೂ 12 ಕೃತಿ ಭಾಷಾಂತರವೂದೊಡ್ಡ ಸಾಧನೆಎಂದು ಹೇಳಿದರು.
ಬೆಳಗಾವಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಎ.ಎಂ.ಜಯಶ್ರೀ, ಡಾ.ಜಿನದತ್ತದೇಸಾಯಿಅವರಕಾವ್ಯದ ವೈಶಿಷ್ಟ್ಯಗಳು ಕುರಿತುಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವಿ. ಕನ್ನಡಅಧ್ಯಯನ ಪೀಠದ ಮುಖ್ಯಸ್ಥಡಾ.ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿ, ಡಾ.ಜಿನದತ್ತದೇಸಾಯಿಅವರುಕಾವ್ಯ ರಚನೆಗಳ ಮೇರು ಶಿಖರ. ಭವಿಷ್ಯದಯುವ ಕವಿಗಳಿಗೆ ಇವರಆಧಾರಸ್ತಂಭ, ದಾರಿದೀಪವಾದವುಎಂದು ಹೇಳಿದರು.
ವೇದಿಕೆಯಲ್ಲಿದತ್ತಿದಾನಿ ವರ್ಧಮಾನದೇಸಾಯಿ, ಡಾ.ರತ್ನಾ ಹಾಲಪ್ಪಗೌಡಇದ್ದರು. 90 ವರ್ಷತುಂಬಿದಡಾ.ಜಿನದತ್ತದೇಸಾಯಿಅವರನ್ನು ಅಭಿಮಾನಿಗಳು ಸನ್ಮಾನಿಸಿದರು.
ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಸಿದರು. ವೀರಣ್ಣಒಡ್ಡೀನ ನಿರೂಪಿಸಿದರು.ಎಂ.ಎಸ್. ನರೇಗಲ್ ವಂದಿಸಿದರು.
ಕಾರ್ಯಕ್ರಮದಲ್ಲಿಚಂದ್ರಕಾಂತ ಬೆಲ್ಲದ, ಬಸವಪ್ರಭು ಹೊಸಕೇರಿ, ಡಾ.ಬಾಳಣ್ಣಾ ಶೀಗೀಹಳ್ಳಿ, ಡಾ.ಡಿ.ಎಂ. ಹಿರೇಮಠ, ಪಾರ್ವತಿ ಹಾಲಭಾವಿ, ಸುಜಾತಾ ಹಡಗಲಿ ಸೇರಿದಂತೆಜಿನದತ್ತದೇಸಾಯಿ ಅಭಿಮಾನಿಗಳು ಭಾಗವಹಿಸಿದ್ದರು.