ಗ್ಯಾಸ ಸಿಲಿಂಡರ ಬೆಲೆ ಹೆಚ್ಚಳಕ್ಕೆ ಓಂಕಾರ ಖಂಡನೆ

ಕಲಬುರಗಿ:ಮಾ.2: ದೇಶ ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಹ ಸಾಮಾನ್ಯ ಜನರ ಬಗ್ಗೆ ಕಿಂಚಿತ್ ಅನುಕಂಪ ಇಲ್ಲದ ಬಿಜೆಪಿ ಸರಕಾರ ಮತ್ತೆ ಗ್ಯಾಸ್ ದರವನ್ನು ಏರಿಸಿರುವುದು ಖಂಡನೀಯ ಎಂದು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಕಾರ ವಠಾರ(ಕೆರಿಬೋಸಗಾ) ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಈಗಾಗಲೇ ಹಲವಾರು ಬಾರಿ ಪೆಟ್ರೋಲ್, ಡಿಸೇಲ್ ಸೇರಿದಂತೆ ಗ್ಯಾಸ್ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಕಂಡಿದ್ದು ಮತ್ತೆ ಪುನಃ ದಿನಬಳಕೆ ಅಡುಗೆ ಅನಿಲದ ಬೆಲೆ ರೂ 50 ಏರಿಸಿರುವುದು ಎಷ್ಟೊಂದು ನ್ಯಾಯ.ದೇಶದಲ್ಲಿ ನಿರೋದ್ಯೋಗ ಸಮಸ್ಯೆ ದೇಶವನ್ನು ಗಂಭಿರವಾಗಿ ಕಾಡುತ್ತಿದ್ದು ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ಸೂಕ್ತ ಉದ್ಯೋಗ ಲಭಿಸದೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಲವಾರು ಕಾರ್ಖಾನೆಗಳು ನಷ್ಟದಿಂದಾಗಿ ಬಾಗಿಲು ಮುಚ್ಚುತ್ತಿದ್ದು, ಜನರು ಊಟಕ್ಕಾಗಿ ಪರದಾಡುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತ ಸರಕಾರ ಈ ಹೊರೆಯನ್ನು ಹೊರುವುದನ್ನು ಬಿಟ್ಟು ಜನರ ಮೇಲೆ ಮತ್ತಷ್ಟು ಬೆಲೆ ಏರಿಕೆಯ ಹೊರೆಯನ್ನು ಹಾಕುತ್ತಿದೆ ಎಂದರು.ಕಳೆದ ಬಾರಿಯಷ್ಠೆ 50 ರೂ ಹೆಚ್ಚಳ ಮಾಡಿದ್ದು ಮತ್ತೆ ಅನಿಲ ಬೆಲೆ ರೂ 3.50 ಹೆಚ್ಚಿಸಿದ್ದು ಒಂದು ಸಿಲಿಂಡರ್ ಬೆಲೆ ಈಗಾಗಲೇ 1000 ರೂಪಾಯಿ ದಾಟಿದೆ. ಜನರ ಸಮಸ್ಯೆಯ ಬಗ್ಗೆ ಸರಕಾರ ಗಮನಹರಿಸದಿದ್ದರೆ ಇನ್ಯಾರೂ ಚಿಂತಿಸಬೇಕು? ಜನರ ಸಮಸ್ಯೆಗೆ ಸ್ಪಂದನೆ ನೀಡದ ಸರಕಾರ ಜನಪರ ಸರಕಾರವಾಗಲು ಹೇಗೆ ಸಾಧ್ಯ? ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರಕಾರ ಸಾಮಾನ್ಯ ಜನರ ಕಷ್ಟಗಳಿಗೆ ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲ ಬದಲಾಗಿ ಇನ್ನಷ್ಟು ಸಮಸ್ಯೆಗಳು ಜನರಿಗೆ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ದಿನಬಳಕೆಯ ವಸ್ತುಗಳ ಬೆಲೆಯನ್ನು ಇಳಿಸುವುದರ ಮೂಲಕ ಜನರು ನೆಮ್ಮದಿಯಿಂದ ಬದಕಲು ಅವಕಾಶ ಮಾಡಿಕೊಡುವಂತೆ ಅಲ್ಲದೆ ಜನರು ಕೂಡ ಇಂತಹ ಜನವಿರೋಧಿ ಸರಕಾರದ ಧೋರಣೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಆವರು ಆಗ್ರಹಿಸಿದ್ದಾರೆ.