
ಸಿಂಧನೂರು,ಏ.೧೫- ಗ್ಯಾಸ್ ಲೀಕ್ ಆಗಿ ಸ್ಫೋಟಗೊಂಡು ೫ ಜನರಿಗೆ ಗಂಭೀರ ಗಾಯ ಗೊಂಡಿರುವ ಘಟನೆ ನಗರದಲ್ಲಿ ಇಂದು ೧೨ ಗಂಟೆ ಸುಮಾರಿಗೆ ನಡೆದಿದೆ.
ನಗರದ ಜನತಾ ಬಜಾರ ಹತ್ತಿರ ಇರುವ ಪಾನಿಪುರಿ ಮಾರುವ ಕಾರ್ಮಿಕರ ಮನೆಯಲ್ಲಿ ಗ್ಯಾಸ್ ಸ್ಫೋಟಗೊಂಡು ನಾರಾಯಣ, ದೊರೇಬ, ದುಷ್ಯತ, ಲಖನಗೆ ಕೈ, ಕಾಲು, ಮುಖಕ್ಕೆ ತೀರ್ವ ಗಾಯಗೊಂಡಿದ್ದು ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಮಧ್ಯಾಹ್ನ ೧೨ ಗಂಟೆಗೆ ಮನೆಯಲ್ಲಿ ಗ್ಯಾಸ್ ಲೀಕ್ ಆಗುವ ಬಗ್ಗೆ ಗ್ಯಾಸ್ ಏಜೆನ್ಸಿ ಗೆ ಪೋನ್ ಮಾಡಿ ವಿಷಯ ತಿಳಿಸಿದಾಗ ಗ್ಯಾಸ್ ಏಜೆನ್ಸಿ ಶಾಮೀದ ಮನೆಗೆ ಬಂದು ಗ್ಯಾಸ ರಿಪೇರಿ ಮಾಡುವಾಗ ಬೆಂಕಿ ತಗುಲಿ ಗ್ಯಾಸ್ ಸ್ಫೋಟಗೊಂಡು ೫ ಜನರಲ್ಲಿ ೩ ಜನರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಬಳ್ಳಾರಿ ವಿಮ್ಸ್‌ಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಲಾಗಿದೆ ಉಳಿದ ಇಬ್ಬರಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಷಯ ತಿಳಿದು ಜೆಡಿಎಸ್ ತಾಲೂಕಾಧ್ಯಕ್ಷರಾದ ಬಸವರಾಜ ನಾಡಗೌಡ, ಪಕ್ಷದ ಮುಖಂಡರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಕೊಡುವಂತೆ ವೈದಾದಿಕಾರಿಗಳಿಗೆ ಮನವಿ ಮಾಡಿಕೊಂಡರು ಗಾಯ ಗೊಂಡ ಗಾಯಾಳುಗಳ ರೋದನೆ ಕಂಡು ಬಂದಿತು.