
ಲಿಂಗಸುಗೂರು,ಮಾ.೦೨- ಕಳೆದ ಕೆಲ ತಿಂಗಳುಗಳಿಂದ ಅಡುಗೆ ಅನಿಲ ದರ ಹೆಚ್ಚಳಗೊಳಿಸುತ್ತಾ, ಜನರಿಗೆ ಬರೆ ಎಳೆಯುತ್ತಲೇ ಬರುತ್ತಿದೆ. ದಿನ ಬಳಕೆ ವಸ್ತುಗಳ ದರ ಗಗನಕ್ಕೆ ಏರುತ್ತಿದೆ ಗ್ಯಾಸ್ ಸಿಲಿಂಡರ್ ದರ ಏರಿಕೆ ಬಡವರು ಮಧ್ಯಮ ವರ್ಗದವರಿಗೆ ಹೊರೆಯಾಗಿದ್ದು. ಬಡವರು ಮಧ್ಯಮ ವರ್ಗದವರು ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ.
ಅಗತ್ಯ ವಸ್ತುಗಳ ದರಗಳೆಲ್ಲ ಹೆಚ್ಚಾಗಿ ಜನರ ಕೈಗೆ ಕೆಲಸವಿಲ್ಲದಂತಾಗಿದೆ. ನಿರುದ್ಯೋಗದಿಂದ ತತ್ತರಿಸಿದ ಜನರಿಗೆ ಬೆಲೆ ಹೆಚ್ಚಳದ ಶೂಲ ಆತಂಕಕ್ಕೆ ತಳ್ಳಿದೆ. ಅಡುಗೆ ಅನಿಲದ ಹೆಚ್ಚಳ ಗೃಹ ಬಳಕೆದಾರರಿಗೆ ತಟ್ಟಿದ್ದು, ವಾಣಿಜ್ಯ ಬಳಕೆಗೆ ಅವೈಜ್ಞಾನಿಕವಾಗಿ ಬೆಲೆ ಏರಿಸಿದ್ದು, ಹೋಟೆಲ್ ದರಗಳು, ತರಕಾರಿ, ಇತರೇ ದಿನ ಬಳಕೆಯ ವಸ್ತುಗಳು ಬಡವರ ಕೈಗೆ ಸುಲಭವಾಗಿ ಎಟಕುವುದಿಲ್ಲವೆಂದು ಕಳವಳ ವ್ಯಕ್ತಪಡಿಸಿದ್ದಾರೆ.
ಜನರ ಹಿತಕಾಯುವ ಕೇಂದ್ರದ ಮೋದಿ ಸರ್ಕಾರ ಬಡವರನ್ನು ಮುಗಿಸಲು ಹೊರಟಂತೆ ಕಾಣುತ್ತಿದೆ. ಜನಸಾಮಾನ್ಯರ ಜೇಬು ಕತ್ತರಿಸಿ, ಸಿರಿವಂತ ಕುಳಗಳಾದ. ಆದಾನಿ, ಅಂಬಾನಿ ಖಜಾನೆ ತುಂಬಿಸಿ, ಬಡವರ ಸುಲಿಗೆ ನಡೆಸಿ, ಬಿಜೆಪಿ, ಜನ ವಿರೋಧಿಯಾಗಿದೆ. ಇದರಿಂದ ಬಡವರ ಸಿರಿವಂತರ ನಡುವಿನ ಅಂತರ ಹೆಚ್ಚಾಗುತ್ತಿದೆ ಮಂದಿನ ದಿನಮಾನಗಳಲ್ಲಿ ಮತದಾರರು ತಕ್ಕ ಪಾಠ ಕಲಿಸುತ್ತಾರೆ.