ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್ ನಿಂದ ಆಯೋಜಿಸಿದ್ದ ಕರ್ನಾಟಕ ಕ್ರಿಕೆಟ್ ರಣಜಿಯಲ್ಲಿ ಜಿಲ್ಲೆಯಿಂದ ಆಯ್ಕೆಯಾದ ಆಟಗಾರಿಗೆ ಸನ್ಮಾನ

ಕಲಬುರಗಿ:ಮಾ.8: ನಗರದ ಎನ್‍ವಿ ಬಿಇಡಿ ಉಪನ್ಯಾಸಕರ ಸಭಾಂಗದಲ್ಲಿ ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್ ನಿಂದ ಆಯೋಜಿಸಿದ್ದ ಕರ್ನಾಟಕ ಕ್ರಿಕೆಟ್ ರಣಜಿಯಲ್ಲಿ ಜಿಲ್ಲೆಯಿಂದ ಆಯ್ಕೆಯಾದ ಆಟಗಾರಿಗೆ ಸನ್ಮಾನ ಸಮಾರಂಭ ನಡೆಯಿತು.
ಈ ವೇಳೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಂಬಾರಾಯ ರುದ್ರವಾಡಿ ಮಾತನಾಡಿ, ವಿದ್ಯಾರ್ಥಿ ಜೀವನವೆಂದರೆ ಬಂಗಾರದ ಜೀವನವಿದ್ದಂತೆ. ನಿರಂತರ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಾಧಕ ಆಟಗಾರರಾದ ಶಶಿಕುಮಾರ ಕಾಂಬಳೆ, ಪುನೀತ್ ಕುಮಾರ ಗುತ್ತೇದಾರ, ದಿಶಾ ಜೈಭೀಮ ದರ್ಗಿ, ಸನ್ಮಯ ರುದ್ರವಾಡಿ, ಮನೋಜ ಮೋಹರೆ, ಸಂತೋಷ ಹಟ್ಟಿ, ಅಭಿಷೇಕ ಎಸ್.ಕೆ.ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಲಿಂಗಣ್ಣ ಕಣ್ಣೂರ್, ಡಾ.ಜಗನ್ನಾಥ ಪಟ್ಟಣಕರ್, ಆದಿತ್ಯ ಮುಕಟೆ, ಅನಿಲಕುಮಾರ ಕಟಗೆ, ಪ್ರಕಾಶ ಆಯ್ಯಾಳಕರ, ನಾರಾಯಣ ದೇಸಾಯಿ, ಶರಣಗೌಡ ಪಾಟೀಲ್, ಜೈಭೀಮ ದರ್ಗಿ ಅನಿಲ ದಾಸ, ಪ್ರಲ್ಟಾದ್ ಚವ್ಹಾಣ, ವೆಂಕಟೇಶ ಪಾಟೀಲ್ ಮಳಖೇಡ, ರವಿ ಲಾತೂರಕರ್, ಸತೀಶ ದೇಶಮುಖ, ಸಿದ್ದಣ್ಣ ಕಣ್ಣೂರ, ವಿಜಯಕುಮಾರ ರಾಠೋಡ, ಜೈಭೀಮ ದರ್ಗಿ, ಬಸವರಾಜ, ಕೃಷ್ಣಾ ರಾವತ್ ಹಾಗೂ ಎನ್‍ವಿ ಜಮಖಾನ್‍ಕ್ಲಬ್, ಕೆಸಿಸಿ ಕ್ಲಬ್, ಎಸ್‍ವಿ ಸಂಸ್ಥೆಯ ಕ್ಲಬ್‍ನ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.