ಗ್ಯಾರೆಂಟಿ ಸೌಲಭ್ಯಕ್ಕಾಗಿ ಬಿ.ಪಿ.ಎಲ್ ಪಡಿತರ ಚೀಟಿಗಾಗಿ ಜನರ ಆಲೆದಾಟ


ಕೋಲಾರ.ಮೇ,೨೬- ರಾಜ್ಯದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಕಾಂಗ್ರೇಸ್ ಪಕ್ಷದ ಸರ್ಕಾರವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದು ಗ್ಯಾರೆಂಟಿ ಯೋಜನೆಗಳಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತ್ವತ್ವದ ಸರ್ಕಾರ ಈಗಾಗಲೇ ಸಚಿವ ಸಂಪುಟದಲ್ಲಿ ತಾತ್ವಿಕ ಒಪ್ಪಿಕೆ ನೀಡಿದ್ದು ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಈ ಯೋಜನೆಗಳನ್ನು ಜಾರಿಗೊಳಿಸಿ ಅದೇಶ ಹೊರಡಿಸುವುದಾಗಿ ಹೇಳಿದೆ.
ಈ ಯೋಜನೆಗಳಿಗೆ ಪ್ರಮುಖವಾದ ಮಾನದಂಡ ಬಿ.ಪಿ.ಎಲ್. ಪಡಿತರ ಚೀಟಿ ಅಗಿರುವುದರಿಂದ ಬಿ.ಪಿ.ಎಲ್ ಪಡಿತರ ಬೇಡಿಕೆ ಹೆಚ್ಚಾಗಿದೆ. ಹೊಸದಾಗಿ ಬಿ.ಪಿ.ಎಲ್. ಪಡಿತರ ಚೀಟಿ ಮಾಡಿಸಲು ಜನರು ಬ್ರೌಸಿಂಗ್ ಸೆಂಟರ್‌ಗಳಿಗೆ ( ಸಾರ್ವಜನಿಕ ಸೇವಾ ಕೇಂದ್ರಗಳು) ಆಲೆದಾಡುತ್ತಿದ್ದಾರೆ.
ಕಾಂಗ್ರೇಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಗೃಹ ಜೋತಿ ಯೋಜನೆಯಡಿ ಪ್ರತಿ ಮನೆಗೆ ೨೦೦ ಯೂನಿಟ್ ಉಚಿತ ವಿದ್ಯುತ್, ಪ್ರತಿ ಮನೆಯ ಒಡತಿಗೆ ಮಾಸಿಕ ೨೦೦ ರೂ, ಅನ್ನ ಭಾಗ್ಯ ಯೋಜನೆಯಡಿ ೧೦ ಕೆ.ಜಿ.ಅಕ್ಕಿ, ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷದವರೆಗೆ ೩,೦೦೦ ರೂಗಳು, ಹಾಗೂ ಡಿಪ್ಲೋಮು ಪಾಸದವರಿಗೆ ೧೫ಒಒ ರೂಗಳನ್ನು ಯುವ ನಿಧಿಯಡಿ ನೀಡಲಾಗುವುದು. ಸರ್ಕಾರಿ ಬಸ್ಸುಗಳಲ್ಲಿ ಕರ್ನಾಟಕದ ಮಹಿಳೆಯರಿಗೆ ಉಚಿತವಾಗಿ ಬಸ್ ಪಾಸ್ ನೀಡಲಾಗುವುದು.
ಇವುಗಳ ಅನುಷ್ಠನಕ್ಕೆ ಸಂಬಂಧಿಸಿದಂತೆ ವಿಸ್ಕೃತ ರೂಪು ರೇಷೆಗಳನ್ನು ಸಿದ್ದಪಡೆಸಲಾಗುವುದು ಎಂದು ಹೇಳಿರುವುದರಿಂದ ಈ ಎಲ್ಲಾ ಯೋಜನೆಗಳಿಗೂ ಫಲಾನುಭವಿಗಳಾಗಲು ಇರುವ ಮಾನದಂಡ ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರ ಬೇಕು ಎಂಬ ಷರತ್ತು ವಿಧಿಸಿರುವುದರಿಂದ ಈ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಬಿಪಿಎಲ್ ಕಾರ್ಡ್ ಹೊಂದಿರದಂತ ಸಾರ್ವಜನಿಕರು ಬಿ.ಪಿ.ಎಲ್. ಪಡಿತರ ಚೀಟಿ ಮಾಡಿಸಲು ಸಾರ್ವಜನಿಕ ಸೇವ ಕೇಂದ್ರಗಳಿಗೆ ಮುಗಿಬಿದ್ದಿದ್ದಾರೆ.