ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕೆ ಸಮಿತಿಗಳ ರಚನೆ

ಕೋಲಾರ,ಜ,೧೧- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠನ ಹಾಗೂ ಮೇಲ್ವಿಚರಣೆಗಾಗಿ ರಾಜ್ಯ,ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಗಳನ್ನು ರಚಿಸಲು ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಕೆ.ಪಿ.ಸಿ.ಸಿ. ಸಭೆಯಲ್ಲಿ ಸೂಚಿಸಿದ್ದಾರೆ ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಅವರು ಮಾತನಾಡಿ ಬೆಂಗಳೂರಿನ ಕೆ.ಪಿ.ಸಿ.ಸಿ. ಸಭೆಯಲ್ಲಿ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ಸಮಿತಿಯನ್ನು ರಚಿಸಲಿದೆ. ರಾಜ್ಯ ಮಟ್ಟದಲ್ಲಿ ಅಧ್ಯಕ್ಷರು ಹಾಗೂ ಐದು ಮಂದಿ ಉಪಾಧ್ಯಕ್ಷರು ಇರಲಿದ್ದಾರೆ. ಅಧ್ಯಕ್ಷರಾದವರಿಗೆ ಸಂಪುಟ ದರ್ಜೆ ಸ್ಥಾನಮಾನಗಳನ್ನು ನೀಡಲಾಗುವುದು ಉಪಾಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗುವುದು, ಈ ಸಮಿತಿಯಲ್ಲಿ ೩೧ ಮಂದಿ ಸದಸ್ಯರನ್ನು ನೇಮಿಸಲಾಗುವುದು ಎಂದರು,
ಜಿಲ್ಲಾ ಮಟ್ಟದಲ್ಲಿ ಓರ್ವ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರು ಇರುತ್ತಾರೆ ಅವರುಗಳಿಗೆ ಕಚೇರಿಯ ವ್ಯವಸ್ಥೆಯೊಂದಿಗೆ ಗೌರವ ಧನ ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು. ಸಮಿತಿಯ ಕಾರ್ಯನಿರ್ವಹಣೆಗೆ ಪ್ರತಿ ತಿಂಗಳು ೫೦ ಸಾವಿರ ರೂ ಗಳನ್ನು ನೀಡಲಾಗುವುದು ಎಂದರು.
ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಮಿತಿಗಳನ್ನು ರಚಿಸಲಿದೆ, ಪ್ರತಿ ಜಿಲ್ಲಾ ಸಮಿತಿಯಲ್ಲಿ ಒಟ್ಟು ೨೧ ಮಂದಿ ಸದಸ್ಯರು ಇರುತ್ತಾರೆ.ಅಧ್ಯಕ್ಷರು ಹಾಗೂ ೧೧ ಮಂದಿ ಸದಸ್ಯರಿಗೆ ಇರಲಿದ್ದು ಇವರಿಗೆ ಗೌರವ ಧನ ಹಾಗೂ ಸಭಾ ಭತ್ಯೆಯನ್ನು ನೀಡಲಾಗುವುದು ಈ ಮೊತ್ತವನ್ನು ರಾಜ್ಯ ಖಜಾನೆಯಿಂದ ಭರಿಸಲಾಗುವುದು ಎಂದರು,
ಸರ್ಕಾರಕ್ಕೆ ಇದೇನು ದೊಡ್ಡ ಹೊರೆಯಾಗಲಾರದು ಪರಿಣಾಮಕಾರಿಯಾಗಿ ಗ್ಯಾರೆಂಟಿಗಳ ಅನುಷ್ಠಾನಗೊಳಿಸಲು ಸುಮಾರು ೧೬ ಕೋಟಿ ರೂಗಳನ್ನು ಭರಿಸಲಾಗುತ್ತಿದೆ. ಅಪಪ್ರಚಾರಗಳಿಗೆ ತಕ್ಕನಾದ ಉತ್ತರ ನೀಡಲು ಈ ಸಮಿತಿಗಳನ್ನು ರಚಿಸಲಾಗುತ್ತಿದೆ ಎಂದು ತಿಳಿಸಿದರು,
ಕಾಂಗ್ರೇಸ್ ಪಕ್ಷದ ಹಿರಿಯ ಕಾರ್ಯಕರ್ತರಿಗೆ ಸಮಿತಿಯ ಸದಸ್ಯತ್ವದ ಅವಕಾಶ ಕಲ್ಪಸಿಲು ಕೆ.ಪಿ.ಸಿ.ಸಿ. ಸೂಚಿಸಿದೆ. ವಿವಿಧ ಇಲಾಖೆಗಳ ಸಮಿತಿಗಳನ್ನು ಕೊಡಲೇ ರಚಿಸಲು ಆಯಾ ಇಲಾಖೆಗಳ ಸಚಿವರ ವಿವೇಚನೆಗಳಿಗೆ ಬಿಡಲಾಗಿದೆ. ಹೆಸರುಗಳನ್ನು ಪಡೆಯುವಾಗ ಸಂಬಂಧ ಪಟ್ಟ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಸಲಹೆಗಳನ್ನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನವನ್ನು ಪಡೆಯ ಬೇಕಾಗಿದೆ ಎಂದ ಅವರು, ಪ್ರಶ್ನೆಯೊಂದಕ್ಕೆ ಕೆಲವು ಶಾಸಕರಿಗೆ ಕಳೆದ ಬಾರಿ ವಿಧಾನಸಭಾ ಟಿಕೆಟ್ ಅಕಾಂಕ್ಷಿಗಳಿಗೆ ಅದ್ಯತೆ ನೀಡಲು ಹೈಕಮಾಂಡ್ ಸೂಚಿಸಿದೆ ಈ ಸಮಿತಿಯ ಅಧಿಕಾರವಧಿಯು ಎರಡು ವರ್ಷಗಳೆಂದು ನಿಗಧಿ ಪಡಿಸಿದೆ ಎಂದು ವಿವರಿಸಿದರು,