ಗ್ಯಾರೆಂಟಿಗೆ ಎಸ್‍ಸಿ/ಎಸ್‍ಟಿ ಅನುದಾನ ಬಳಕೆ ವಿರೋಧಿಸಿ ಮನವಿ

ತಾಳಿಕೋಟೆ:ಆ.2: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳ ಅಭಿವೃದ್ಧಿಗೆ ಬಳಕೆ ಆಗಬೇಕಿದ್ದ ಈ ಸಾಲಿನ ಅನುದಾನದಲ್ಲಿನ 11 ಸಾವಿರ ಕೋಟಿ ರೂಪಾಯಿ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್‍ವು ಗ್ಯಾರಂಟಿ ಯೊಜನೆಗಳಿಗೆ ಬಳಸುತ್ತಿರುವುದನ್ನು ವಿರೋಧಿಸಿ ತಾಲೂಕಾ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

    ಎಸ್.ಸಿ./ಎಸ್.ಟಿ. ಸಮೂದಾಯಗಳ ಸಮಗ್ರ ಅಭಿವೃದ್ಧಿಗಾಗಿ ಮೀಸಲಿರಬೇಕಾಗಿದ್ದ ಹಣವನ್ನು ರಾಜ್ಯ ಸರ್ಕಾರದ ಗ್ಯಾರಂಟಿ ಯೊಜನೆಗಳಿಗಾಗಿ ಬಳಸುತ್ತಿರುವುದು  ಖಂಡನೀಯವಾಗಿದೆ ಶೋಷಿತ ಸಮುದಾಯಗಳ ಹಕ್ಕು ಕಿತ್ತುಕೊಂಡು, ತಮ್ಮ ಘೋಷಣೆ ಯೋಜನೆಗಳಿಗಾಗಿ ನಮ್ಮ ಹಣಬಳಸದೆ ಈ ಸಮುದಾಯಗಳ ವಿದ್ಯಾರ್ಥಿ ಯುವಜನರ ಹಾಗೂ ನಿರುದ್ಯೋಗ ಯುವಕರ, ಮಹಿಳೆಯರ ಮಕ್ಕಳ, ರೈತ ಕೂಲಿ ಕಾರ್ಮಿಕರ, ಒಟ್ಟಾರೆ ಈ ಎಸ್‍ಸಿ/ಎಸ್‍ಟಿ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕು ಕೂಡಲೇ ಈ ನಿರ್ಧಾರದಿಂದ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಹಿಂದಕ್ಕೆ ಸರಿಯಬೇಕೆಂದು ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ. ಸದರಿ ಮನವಿ ಪತ್ರದ ನಖಲನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಎಸ್.ಸಿ.ಮಹಾದೇವಪ್ಪ, ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಅವರಿಗೆ ಕಳುಹಿಸಲಾಗಿದೆ ಎಂದು ಮನವಿ ಪತ್ರದಲ್ಲಿ ನಮೋದಿಸಲಾಗಿದೆ.
     ಈ ಸಮಯದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕಾ ಅಧ್ಯಕ್ಷ ಗುರುಪ್ರಸಾದ್ ಬಿಜಿ, ಶಿವು ಡಿ.ಎಂ., ದೇವು ಚಟ್ನಳ್ಳಿ, ಸಾಯಬಣ್ಣ ಗುಂಡಕನಾಳ, ಬಸವರಾಜ ಕೊಡಗಾನೂರ, ಮೊದಲಾದವರು ಇದ್ದರು.