ಕಲಬುರಗಿ.ಜೂ.03: ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಾಯಕರ ವಿರುದ್ಧ ಜೇವರ್ಗಿ ಶಾಸಕ ಡಾ.ಅಜಯ ಧರ್ಮಸಿಂಗ್ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ಆಡಳಿತ ನಡೆಸಿ ಬೆಲೆ ಏರಿಕೆ ಮಾಡುವ ಜನರ ಜೀವನ ದುರ್ಬರಗೊಳಿಸಿದ್ದರಿಂದಲೇ ಇಂತಹ ಗ್ಯಾರಂಟಿ ಯೋಜನೆಗಳನ್ನು ತರಬೇಕಾಯಿತು ಎಂದರು.
ವಿಧಾನ ಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ರಾಜಧಾನಿಗೆ ತೆರಳಿದ್ದ ಅವರು ಕಲಬುರಗಿಗೆ ಶನಿವಾರ ಮೊದಲ ಸಲ ಆಗಮಿಸಿದ ಅವರಿಗೆ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ನೀಡಿದ ಸ್ವಾಗತ ಸ್ವೀಕರಿಸಿ ಪತ್ರಕರ್ತರೊಂದಿಗೆ ಮಾತನಾಡಿ, ಇಂತಹ ಕೊಂಕು ಮಾತುಗಳು ಅವರ ಹೊಣೆಗೇಡಿತನವನ್ನು ತೋರಿಸಿ ಕೊಡುತ್ತದೆ ಎಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಣಕಾಸು ಖಾತೆಯಲ್ಲಿ ನಿರ್ವಹಿಸಿ, 14 ಬಜೆಟ್ ಮಂಡನೆ ಮಾಡಿದ್ದಾರೆ. ಇನ್ನೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸಾಕಷ್ಟು ಜಾಣರಿದ್ದಾರೆ. ಎಲ್ಲ ಸಾಧಕ ಬಾಧಕಗಳನ್ನು ಯೋಚನೆ ಮಾಡಿಯೇ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದಾರೆ. ಕೇಂದ್ರ ಸರ್ಕಾರವು ಜಿಎಸ್‍ಟಿ ಹಣ ಮರುಪಾತಿಸುತ್ತಿಲ್ಲದಿದ್ದರೂ ಇಂತಹ ದೊಡ್ಡ ಐದು ಗ್ಯಾರಂಟಿ ಯೋಜನೆಗಳನ್ನು ವಿರೋಧ ಪಕ್ಷದವರು ಸ್ವಾಗತಿಸುವುದು ಬಿಟ್ಟು ಇಲ್ಲದ ಮಾತನಾಡುವುದು ಸರಿಯಲ್ಲ ಎಂದರು.
ಸಿಎಂ, ಡಿಸಿಎಂ, ಎಲ್ಲ ಸಚಿವರು ಸೇರಿಕೊಂಡು ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಅಲೆಕ್ಕಾಚಾರ ಹಾಕಿಯೇ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ.ಚುನಾವಣೆಯಲ್ಲಿ ನಾಡಿನ ಜನತೆಗೆ ಕಾಂಗ್ರೆಸ್ ನೀಡಿದ ಭರವಸೆಯಂತೆಯೇ ಅವನ್ನು ಜಾರಿಗೊಳಿಸಿ, ನುಡಿದಂತೆ ನಡೆದುಕೊಂಡಿz್ದÉೀವೆ. ಜನರ ವಿಶ್ವಾಸಕ್ಕೆ ಕಾಂಗ್ರೆಸ್ ಎಂದು ಧಕ್ಕೆ ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಡೆಸಿ ಎಲ್ಲ ಬೆಲೆಗಳನ್ನು ಏರಿಕೆ ಮಾಡುವ ಮೂಲಕ ಜನರ ಜೀವನ ಸಾಗಿಸುವುದು ಕಷ್ಟವಾಗಿಸಿತು. ಅಡುಗೆ ಸಿಲಿಂಡರ್ ಬೆಲೆ 460 ರೂ,ಗಳಿತ್ತು ಅದನ್ನು 1150 ರೂ.ಗೆ ಏರಿಸಿದರು. ಹೀಗಾಗಿ ಮನೆಯ ಯಜಮಾನಿ ಸಂಸಾರ ನಡೆಸಲು ಪರಾಡುವಂತಿದ್ದನ್ನು ಅರಿತುಕೊಂಡು ನಾವು ಅವರಿಗೆ ಮಾಸಿಕ 2 ಸಾ.ರೂ. ನೀಡಲು ಭಾಗ್ಯ ಲಕ್ಷ್ಮೀ ಯೋಜನೆ ಜಾರಿಗೊಳಿಸಿz್ದÉೀವೆ ಎಂದು ಡಾ.ಅಜಯ ಹೇಳಿದರು.
ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ
ಜೇವರ್ಗಿಯ ಶಾಸಕ ಡಾ.ಅಜಯ ಧರ್ಮಸಿಂಗ್ ಅವರು ಮೊದಲ ಸಲ ಕಲಬುರಗಿಗೆ ಆಗಮಿಸಿದ ನಿಮಿತ್ತವಾಗಿ ನಗರದ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿಕೊಂಡರು. ಪಟಾಕಿ ಸಿಡಿಸಿದರು. ಬೃಹತ್ ಹೂಮಾಲೆ ಹಾಕಿ, ಪುಷ್ಪವೃಷ್ಟಿ ಮಾಡಿ ಬರ ಮಾಡಿಕೊಂಡರು. ಎಲ್ಲಡೆ ಜೈಘೋಷಣೆ ಮೊಳಗಿದ್ದವು. ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವವರೆಗೂ ಅಲ್ಲಲ್ಲಿ ಕಾರ್ ತಡೆದು ಹೂಮಾಲೆ ಹಾಕಿದರು.
ಮುಖಂಡರಾದ ರಾಜು ಭೀಮಳ್ಳಿ, ಬಸವರಾಜ ಬಿರಾದಾರ ಸೊನ್ನ, ರಾಜಶೇಖರ ಸಿರಿ, ನೀಲಕಂಠ ಅವಟಿ, ನೀಲಕಂಠ ಮೂಲಗೆ, ಉದಯಕುಮಾರ ಚಿಂಚೋಳಿ, ಕಲ್ಯಾಣರಾವ ಪಾಟೀಲ್, ಗುರುಲಿಂಗಪ್ಪಗೌಡ ಆಂದೋಲಾ, ವಿಜಯಕುಮಾರ ಪಾಟೀಲ್ ಹಂಗರಗಿ, ಸಕ್ರೆಪ್ಪಗೌಡ ಪಾಟೀಲ್ ಹರನೂರ, ನಾರಾಯಣರಾವ ಕಾಳೆ, ಸಿ..ಎ.ಪಾಟೀಲ್, ಕಾಶಿರಾಯಗೌಡ ಯಲಗೋಡ, ಸಂಜೀವ ಐರಡ್ಡಿ, ರಹಿಮಖಾನ್ ಪಠಾಣ, ಶರಣು ಮೋದಿ, ಶರಣು ಭೂಸನೂರ, ವಿಜಯಕುಮಾರ ಸೊನ್ನ ಮೊದಲಾದವರಿದ್ದರು.
ಈ ಹಿಂದೆ ಬಿಜೆಪಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿ ಮಾಡಲಿಲ್ಲ, ಹೀಗಾಗಿ ನಿರುದ್ಯೋಗಿಳಿಗೆ ಮಾಸಿಕ ನೆರವು ನೀಡಲು ಯುವನಿಧಿ ಹಾಗೂ ಬೆಲೆ ಏರಿಕೆ ಮಾಡುವ ಮೂಲಕ ಮನೆ ನಡೆಸುವುದು ಮಹಿಳೆಯರಿಗೆ ಕಷ್ಟಗೊಳಿಸಿದ್ದರಿಂದ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾ.ರೂ. ನೀಡಲು ಭಾಗ್ಯಲಕ್ಷ್ಮೀ ಯೋಜನೆ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ.
| ಡಾ.ಅಜಯ ಧರ್ಮಸಿಂಗ್ ಶಾಸಕ