ಗ್ಯಾರಂಟಿ ಯೋಜನೆ ಅನುಷ್ಠಾನ ಸಮಾವೇಶ

ಕಲಬುರಗಿ,ಜ.31 ಕಮಲಾಪುರ ತಾಲೂಕ ಹಾಗೂ ಹೋಬಳಿ ಮಟ್ಟದಲ್ಲಿ ಮಹಾಗಾಂವ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು.
ಶಕ್ತಿಯೋಜನೆ,ಗೃಹಲಕ್ಷ್ಮಿ ಯೋಜನೆ,ಗೃಹ ಜ್ಯೋತಿ,ಅನ್ನ ಭಾಗ್ಯ,ಯುವ ನಿಧಿ ಯೋಜನೆಗೆ ಸಂಬಂಧಿಸಿದ ಇಲಾಖೆಗಳ ಎಲ್ಲ ಅಧಿಕಾರಿ ವೃಂದದವರು ಹಾಜರಾದರು. ಮಹಾಗಾಂವ ಹೋಬಳಿಗೆ ಸೇರಿದ ಎಲ್ಲಾ ಗ್ರಾಪಂಗಳ ಸಮಸ್ಯೆ ಇರುವ ಫಲಾನುಭವಿಗಳು ಭಾಗಿಯಾಗಿ. ತಾಂತ್ರಿಕ ಸಮಸ್ಯೆ ಬಗೆಹರಿಸಿಕೊಂಡು ಯೋಜನೆಗಳ ಲಾಭವನ್ನು ಪಡೆದುಕೊಂಡರು. ಈ ಕಾರ್ಯಕ್ರಮದಲ್ಲಿ. ತಾಲೂಕ ದಂಡಾಧಿಕಾರಿ, ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ, ಮತ್ತು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು,ಮಹಾಗಾಂವ ಗ್ರಾಪಂ ಅಧ್ಯಕ್ಷ, ಸದಸ್ಯರು ಮತ್ತು ಊರಿನ ಗಣ್ಯರು ಭಾಗಿಯಾದರು