ಗ್ಯಾರಂಟಿ ಯೋಜನೆ ಅನುಷ್ಠಾಣಕ್ಕೆ ಜೂ.1ವರೆಗೆ ಸಿಂಹ ಗಡುವು

ಮೈಸೂರು: ಮೇ.26:- ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಲ್ಲಿ ಎಲ್ಲಿಯೂ ಷರತ್ತು ಉಲ್ಲೇಖಿಸಿಲ್ಲ. ಗ್ಯಾರಂಟಿಗಳ ಜಾರಿಗಾಗಿ ಜೂನ್ 1ರವರೆಗೆ ಕಾಯುತ್ತೇವೆ. ಅಂದಿನಿಂದಲೇ ಮೂರು ಷರತ್ತುಗಳನ್ನು ಯಾವುದೇ ಷರತ್ತುಗಳಿಲ್ಲದೆ ಜಾರಿಗೊಳಿಸಬೇಕು. ಷರತ್ತು ವಿಧಿಸಿದರೆ ಜೂ.1ರಿಂದ ದೊಡ್ಡ ಮಟ್ಟದ ಹೋರಾಟ ಮಾಡುವುದಾಗಿ ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಕಾರ್ಡ್ ವಿಚಾರದಲ್ಲಿ ಬೇರೆ ರಾಜ್ಯಗಳ ಚುನಾವಣೆಯಲ್ಲಿಯೂ ಕಾಂಗ್ರೆಸ್ ಇದೇ ರೀತಿ ಮಾಡಿದ್ದು, ಇದನ್ನು ಬಿಜೆಪಿ ಎಚ್ಚೆತ್ತುಕೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಇನ್ನು ಈ ಫಲಿತಾಂಶ ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರಲ್ಲ. ದೇಶಕ್ಕೆ ಎಂತಹ ನಾಯಕ ಬೇಕು ಅನ್ನೋದು ಕನ್ನಡಿಗರಿಗೆ ಗೊತ್ತು. ಆದಾಯದ ಆಧಾರದ ಮೇಲೆ ಖರ್ಚು ಮಾಡಬೇಕು ಎಂಬ ನಿಯಮವನ್ನು ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ವಿಧಾನಸಭೆಯಲ್ಲಿ ಜಾರಿಗೆ ತಂದಿದ್ದಾರೆ. ವಿತ್ತಿಯ ಹೊಣೆಗಾರಿಕೆ ಬಿಲ್ ಕರ್ನಾಟಕದಲ್ಲಿ ಪಾಸ್ ಆಗಿದೆ. ಇದಾಗಿಯೂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯದ ಅರ್ಥವ್ಯವಸ್ಥೆಯ ಅರಿವಿದ್ದರೂ ಉಚಿತ ಘೋಷಣೆ ಮಾಡಿದ್ದಾರೆ. ಇಂತಹ ಉಚಿತಗಳ ಮೂಲಕ ಮುಂದಿನ ತಲೆಮಾರನ್ನು ಅಪಾಯಕ್ಕೆ ತಳ್ಳಬೇಡಿ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಿಂದ ಗ್ಯಾರಂಟಿ ಕಾರ್ಡ್ ಅಲ್ಲಿ ಯಾವುದೇ ಷರತ್ತು ಅನ್ವಯಿಸುವ ಬಗ್ಗೆ ಎಲ್ಲೂ ಹಾಕಿಲ್ಲ. ಹೀಗಾಗಿ ಜೂನ್ 1ರಿಂದಲೇ ಎಲ್ಲಾ ಮನೆಯ ಯಜಮಾನಿಗೆ 2 ಸಾವಿರ ಕೊಡಬೇಕು. ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಯಣಕ್ಕೆ ಅವಕಾಶ ಕೊಡಬೇಕು. ಯಾರೊಬ್ಬರೂ ಟಿಕೇಟ್ ಕೇಳದಂತೆ ತಾಕೀತು ಮಾಡಿದರು. ಮಾತ್ರವಲ್ಲದೆ, ಜೂನ್ 1 ರಿಂದ 200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಕಟ್ಟಬೇಡಿ. 200 ಯೂನಿಟ್ ಮೇಲೆ ಎಷ್ಟು ಯೂನಿಟ್ ಬಳಸುತ್ತಿರಾ ಅಂತಹವರು ಹೆಚ್ಚುವರಿ ಮಾತ್ರ ಹಣ ಕಟ್ಟಿ. ಈ ಮೂರು ನಿಯಮಗಳ ಬಗ್ಗೆ ನಿಯಮ ಹಾಕಿದರೆ ಜೂನ್ 1ರಿಂದ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.
ಮತದಾರರು ಈ ಬಾರಿ ಕಾಂಗ್ರೆಸ್‍ಗೆ ಮತ ಹಾಕಿಲ್ಲ. ಐದು ಗ್ಯಾರಂಟಿ ಉಚಿತಗಳನ್ನು ನೋಡಿ ಮತ ಹಾಕಿದ್ದಾರೆ. ನಾವು ಸೋತಿದ್ದೇವೆ, ಹೊರತು ಸತ್ತಿಲ್ಲ. ನಿಮಗೆ ಜನ ಬೆಂಬಲ ಸಿಕ್ಕಿದೆ ಕೊಟ್ಟ ಭರವಸೆ ಈಡೇರಿಸುವಂತೆ ತಾಕೀತು ಮಾಡಿದರು. ಹಾಗೆಯೇ ನಾವು ಸಹ ವಿರೋಧ ಪಕ್ಷವಾಗಿ ಜನರ ಪ್ರತಿನಿಧಿಗಳಾಗಿದ್ದು, ಜನರ ಆಶೋತ್ತರಗಳ ಪರವಾಗಿ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಇದುವರೆವಿಗೂ ಎಲ್ಲೆಲ್ಲಿ ಇಂತಹ ಉಚಿತಗಳನ್ನು ಘೋಷಿಸಿ ಎನೂ ಮಾಡಿದೆ ಎಂಬುದು ಗೊತ್ತಿದೆ. ರಾಜಸ್ಥಾನದಲ್ಲಿ ಇದೇ ರೀತಿ ಹೇಳಿ ಇವತ್ತಿನವರೆಗೆ ಮಾಡಿಲ್ಲ ಎಂದರು.
ಅಧಿಕಾರವಾಗಲಿ ಅಥವಾ ಮುಖ್ಯಮಂತ್ರಿಯ ಸ್ಥಾನವಾಗಲಿ ಯಾರ ಸ್ವತ್ತಲ್ಲ. ಆದರೆ, ಪೆÇಲೀಸ್, ಶಿಕ್ಷಣ ವ್ಯವಸ್ಥೆ ಅನ್ನೋದು ಶಾಶ್ವತ ಇರುತ್ತದೆ. ವಿಧಾನಸೌಧದದಲ್ಲಿ ಕೂತು ಪೆÇಲೀಸ್ ಇಲಾಖೆಗೆ ಧಮ್ಕಿ ಹಾಕುತ್ತಿರುವುದು ಸರಿಯಲ್ಲ. ಎಂದೋ ಚುನಾವಣೆಯಲ್ಲಿ ನಡೆದ ಘಟನೆಗೆ ಇಂದು ಒತ್ತಡ ಹೇರಿ ಎಫ್‍ಐಆರ್ ದಾಖಲಿಸುವುದು ಸರಿಯಲ್ಲ. ಅಶ್ವಥ್ ನಾರಾಯಣ ಅವರು ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವುದನ್ನು ನಾನು ಸರಿ ಎನ್ನುವುದಿಲ್ಲ. ರಾಜಕೀಯವಾಗಿ ಕೆಲವೊಮ್ಮೆ ಇತಂಹ ಮಾತುಗಳು ಬರುತ್ತವೆ. ಅದಕ್ಕೆ ಈಗ ದೂರು ದಾಖಲಿಸುವುದು ಸರಿಯಲ್ಲ ಎಂದು ಹೇಳಿದರು.
ಕಾಂಗ್ರೆಸ್ ನೀಡಿರುವ 5 ಗ್ಯಾರಂಟಿಗಳಲ್ಲಿ ಮೂರು ಗ್ಯಾರಂಟಿಯನ್ನು ಜೂನ್ 1ಕ್ಕೆ ಈಡೇರಿಸಲೇಬೇಕೆಂಬುದು ನನ್ನ ಒತ್ತಾಯವಾಗಿದೆ. ಇನ್ನೂ ಹಳೆ ಮೈಸೂರಿನ ಹಲವು ಜಿಲ್ಲೆಗಳಲ್ಲಿನ ಸೋಲಿಗೆ ನಾನಾ ಕಾರಣಗಳಿವೆ. ರಾಜ್ಯ ರಾಜಕಾರಣದಲ್ಲಿ ಬಹಳ ಹಿಂದಿನಿಂದಲೂ ಒಮ್ಮೆ ಕಾಂಗ್ರೆಸ್, ಒಮ್ಮೆ ಬಿಜೆಪಿ ಬರುತ್ತಿದ್ದು, ಇದಕ್ಕೆ ಕುಗ್ಗುವ ಅಗತ್ಯವಿಲ್ಲ. ಆದರೆ, ರಾಜ್ಯದ ಕೆಲವೆಡೆ ಬಿಜೆಪಿ ಪರವಾಗಿ ದುಡಿದ ಅನೇಕ ಕಾರ್ಯಕರ್ತರು ಕಂಗಾಲಾಗಿದ್ದಾರೆ. ಅವರ ಪರವಾಗಿ ಬಿಜೆಪಿ ನಿಲ್ಲಲಿದೆ. ನಾಯಕರಿಗೆ ಸೋಲಿನಿಂದ ಯಾವುದೇ ಸಮಸ್ಯೆ ಆಗಲ್ಲ ಆದರೆ, ಕಾರ್ಯಕರ್ತರಿಗೆ ಅದು ದೊಡ್ಡ ಹೊಡೆತ ಬೀಳಲಿದೆ. ಹೀಗಾಗಿ ಅಂತಹ ಕಾರ್ಯಕರ್ತರ ಪರವಾಗಿ ನಾವಿದ್ದೇನೆ ಎಂದು ತಿಳಿಸಿದರು.
ನಮ್ಮ ನಾಯಕರಾದ ಸೋಮಣ್ಣ ಅವರು ಅಭಿವೃದ್ಧಿ ವಿಚಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಅಂತಹವರ ಸೋಲು ನಿಜಕ್ಕೂ ಬೇಸರದ ಸಂಗತಿ. ಇದರಲ್ಲಿ ಮುಖಂಡರು, ಪ್ರಮುಖರೆಲ್ಲರ ತಪ್ಪು ಇರಬಹುದು ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದರು.
ತನಿಖೆ ನಡೆಸಿ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಡಿರುವ ಬಿಟ್‍ಕಾಯಿನ್ ಹಾಗೂ ಶೇ.40ರಷ್ಟು ಕಮಿಷನ್ ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸುವಂತೆ ಕೈ ಮುಗಿದು ಕೇಳುತ್ತೇನೆ. ಆ ಮೂಲಕ ರಾಜ್ಯ ರಾಜಕಾರಣವನ್ನು ಶುದ್ಧಗೊಳಿಸಿ ಇಲ್ಲವಾದರೆ, ಮೂರು ಪಕ್ಷಗಳಲ್ಲಿಯೂ ಇಂತಹ ರಾಜಕೀಯ ಆರೋಪಗಳಲ್ಲಿ ಹುರುಳಿರುವುದಿಲ್ಲ ಎಂಬುದು ಸಾರ್ವಜನಿಕರಿಗೆ ಬಹಿರಂಗ ಆಗಲಿದೆ. ಅಭಿವೃದ್ಧಿ ಎಂಬುದು ಆ ಪಕ್ಷದ ಪ್ರಾತಿನಿಧ್ಯ ಆಗಿದೆ. ನೂತನ ಸಂಸತ್ ಭವನ ಮೋದಿಯವರ ಕನಸಾಗಿದೆ. ಇದೇ ಕಾರಣಕ್ಕೆ ಅವರ ಅವಧಿಯಲ್ಲೇ ಗುದ್ಧಲಿಪೂಜೆ ಆಗಿದ್ದು, ಉದ್ಘಾಟನೆ ಸಹ ಅವರಿಂದಲೇ ಆಗಲಿದೆ. ಅನಂತರ ರಾಷ್ಟ್ರಪತಿ ಮರ್ಮು ಅವರು ಅಧಿವೇಶನದಲ್ಲಿರಲಿದ್ದಾರೆ. ಇದರಲ್ಲಿ ಯಾವುದೇ ಶಿಷ್ಠಾಚಾರ ಉಲ್ಲಂಘನೆ ಆಗಲ್ಲ ಎಂದರು.