ಗ್ಯಾರಂಟಿ ಯೋಜನೆಗೆ 56 ಸಾವಿರ ಕೋಟಿ ಖರ್ಚು ಮಾಡಲಾಗ್ತಿದೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.11: ನಮ್ಮ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ನಾವು ಹೇಳಿದಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು 56 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಅವರು ಪಟ್ಟಣದ ಜಯಮ್ಮಶಿವಲಿಂಗೇಗೌಡ ಸಮುದಾಯ ಭವನದಲ್ಲಿ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಕುರಿತ ಸಾಧನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮುಂದಿನ ವರ್ಷದಿಂದ ಗ್ಯಾರಂಟಿ ಅನುಷ್ಟಾನಕ್ಕಾಗಿ 69 ಸಾವಿರ ಕೋಟಿಯಾಗುತ್ತೆ ಗೃಹಜ್ಯೋತಿ, ಗೃಹಲಕ್ಷ್ಮಿ, ಸಾರಿಗೆ ಇಲಾಖೆ ಸರ್ಕಾರದ ಬೊಕ್ಕಸಕ್ಕೆ ಹೊಗ್ತಿದೆ ಸರ್ಕಾರದ ಮೇಲೆ 69 ಸಾವಿರ ಕೋಟಿ ಹೊರೆಯಾಗಲಿದೆ. ನುಡಿದಂತೆ ನಾವು ನಡೆದು ಕಾರ್ಯ ನಿರ್ವಹಿಸುತ್ತಿದ್ದೇವೆ. ಎಲ್ಲಾ ಇಲಾಖೆಯಲ್ಲಿ ಸೌಲಭ್ಯಗಳನ್ನು ನಿಲ್ಲಿಸಿಲ್ಲ ಬಡ್ಡಿರಹಿತ ಸಾಲವನ್ನು ಕೊಡ್ತಿದ್ದೇವೆ. ಶಕ್ತಿ ಯೋಜನೆಯಲ್ಲಿ ರಾಜ್ಯದ ಉದ್ದಗಲಕ್ಕೂ ಐಡಿ ಕಾರ್ಡ್ ತೋರಿಸಿದ್ರೆ ಸಂಚಾರ ಮಾಡಬಹುದಾಗಿದೆ. ನಾವು ನಿಮಗೆ ಕೊಟ್ಟ ಮಾತಿನಂತೆ ಸರ್ಕಾರ ನಡೆಸುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳಲ್ಲಿ ಬಿಜೆಪಿ, ಜೆಡಿಎಸ್ ಫಲಾನುಭವಿಗಳೂ ಸಹ ಇದ್ದಾರೆ. ಬರಗಾಲ ಎದುರಾಗಿದೆ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಈಗಾಗಲೇ ಬರಗಾಲ ಘೋಷಣೆಯಾಗಿದೆ 223 ತಾಲ್ಲೂಕುಗಳನ್ನು ಗುರ್ತಿಸಿ ಕೇಂದ್ರಕ್ಕೆ ವರದಿ ಕಳಿಸಿದ್ದೇವೆ ಆದರೆ ಬರ ಕುರಿತು ಕೇಂಧ್ರ ಯಾವುದೇ ತೀರ್ಮಾನ ಮಾಡಲಿಲ್ಲ. ಬರಗಾಲದ ಪರಿಹಾರ ತಕ್ಷಣವೇ ಕೇಂದ್ರ ಕೊಡ್ತಿತ್ತು ಆದ್ರೆ ಇದೀಗ ಕೇಂದ್ರ ನಮ್ಮ ಪಾಲಿನ ತೆರಿಗೆಹಣ ಕೊಡುತ್ತಿಲ್ಲ. ಪ್ರತಿವರ್ಷ ಕೇಂದ್ರಕ್ಕೆ 4.3 ಲಕ್ಷ ಕೋಟಿ ನಮ್ಮ ರಾಜ್ಯದಿಂದ ತೆರಿಗೆ ಹಣ ಹೋಗ್ತಿದೆ ಉತ್ತರಪ್ರದೇಶಕ್ಕೆ 2.5 ಲಕ್ಷ ಕೋಟಿ ಕೊಡುತ್ತಾರೆ ನಮಗೆ ಬರಿ 50 ಸಾವಿರ ಕೋಟಿ ಮಾತ್ರ ಕೋಡ್ತಾರೆ. ರಾಜ್ಯದ ಎಲ್ಲಾ ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಪ್ರತಿಭಟನೆಗೆ ಬನ್ನಿ ಅಂತ ಮನವಿ ಮಾಡಿದರೆ ಯಾರೂ ಸಹ ಬರಲಿಲ್ಲ. ಸಾಮಾನ್ಯ ಜನರಿಗೆ ಅನ್ಯಾಯ ಆಗ್ತಿದೆ ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ನೀವು ಮುಂದಿನ ದಿನಗಳಲ್ಲಿ ತಿರ್ಮಾನ ತೆಗೆದುಕೊಳ್ಳಿ. 15 ನೇ ಹಣಕಾಸಿನ ತಿರ್ಮಾನಕ್ಕೆ ಕೇಂದ್ರ ಬದ್ದವಾಗಿಲ್ಲ 11 ಸಾವಿರ ಕೋಟಿ ಕೊಟ್ಟಿಲ್ಲ. ಬರಗಾಲ ನಿರ್ವಹಣೆಗಾಗಿ 18 ಸಾವಿರ ಕೋಟಿ ಕೇಳಿದರೂ ಕೊಟ್ಟಿಲ್ಲ. ಈ ಬಗ್ಗೆ ಒಂದು ಸಭೆ ಕೂಡ ಮಾಡಿಲ್ಲ. ಅನಿವಾರ್ಯವಾಗಿ ರೈತರನ್ನು ಉಳಿಸಲು ಸಿಎಂ, ಡಿಸಿಎಂ ರಾಜ್ಯ ಸರ್ಕಾರದಿಂದ 32 ಲಕ್ಷ ರೈತರಿಗೆ ತಲಾ 2 ಸಾವಿರ ಹಣ ಹಾಕಿದ್ದಿವಿ. ನಾವು ಗೆದ್ದು ಸರ್ಕಾರ ರಚನೆಯಾದ ಮೇಲೆ ಎಲ್ಲಾ ಯೋಜನೆ ಜಾರಿ ಮಾಡಿದ್ದೇವೆ ರಾಷ್ಟ್ರದ ಅನೇಕ ರಾಜ್ಯಗಳು ನಮ್ಮ ಕಾರ್ಯಕ್ರಮಗಳ ಅನುಷ್ಟಾನ ನೋಡಿ ಬೆಚ್ಚಿ ಬಿದ್ದಿವೆ ಎಂದರು.
ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಮಾತನಾಡಿ ಕಾಂಗ್ರೆಸ್ ಸ್ವತಂತ್ರಪೂರ್ವದಿಂದಲೂ ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಅಣೆಕಟ್ಟುಗಳ ನಿರ್ಮಾಣ, ಮೊಬೈಲ್ ತಂತ್ರಜ್ಞಾನ ಬ್ಯಾಂಕ್ ರಾಷ್ಟ್ರೀಕರಣ ಸೇರಿದಂತೆ ನೂರಾರು ಕೊಡುಗೆಗಳನ್ನು ನೀಡಿದೆ ಆದರೆ ಈ ದೇಶಕ್ಕೆ ಪಟೇಲರ ಪ್ರತಿಮೆ ಬಿಟ್ಟರೆ ಮೋದಿಯ ಕೊಡುಗೆ ಏನೂ ಇಲ್ಲ. ಹಾಸನಕ್ಕೂ ಮಂಡ್ಯಕ್ಕೂ ಹೋಲಿಸಿದರೆ ಹಿಂದಿನ ಸರ್ಕಾರ ಹಾಸನ ಅಭಿವೃದ್ದಿ ಮಾಡಿದ್ದಾರೆಯೇ ಹೊರತು ಮಂಡ್ಯವನ್ನ ಅಭಿವೃದ್ದಿ ಮಾಡಿಲ್ಲ ಎಂದು ಶಾಸಕ ಮಂಜು ರವರನ್ನು ಕಾಲೆಳೆದರು.
ಗುಡುಗಿದ ಶಾಸಕ ಹೆಚ್.ಟಿ.ಮಂಜು:-
ಶಾಸಕ ಹೆಚ್.ಟಿ.ಮಂಜು ಮಾತನಾಡಿ ಗ್ಯಾರಂಟಿಯನ್ನ ನಾನು ವಿರೋಧಿಸಲ್ಲ, ಸ್ವಾಗತಿಸುತ್ತೇನೆ ಆದರೆ ಗ್ಯಾರಂಟಿ ಜೊತೆ ಅಭಿವೃದ್ಧಿಯೂ ಮುಖ್ಯ ಕೆ.ಆರ್.ಪೇಟೆಗೆ ಈವರೆಗೆ 2 ಕೋಟಿ ಅಷ್ಟೇ ಅನುದಾನ ಬಂದಿದೆ ಸಚಿವ ಚಲುವರಾಯಸ್ವಾಮಿ ಎದುರೇ ಬೇಸರ ವ್ಯಕ್ತಪಡಿಸಿದ ಜೆಡಿಎಸ್ ಶಾಸಕ ಮಂಜು ಮಾತಿನ ಮಧ್ಯೆ ವೇದಿಕೆಯಿಂದ ಹೊರಟ ಶಾಸಕ ನರೇಂದ್ರಸ್ವಾಮಿಯನ್ನು ಕುಳಿತುಕೊಳ್ಳಣ್ಣ ಒಂದೆರಡು ನಿಮಿಷ ಎಂದರೂ ಶಾಸಕ ನರೇಂದ್ರಸ್ವಾಮಿ ವೆದಿಕೆಯಿಂದ ನಿರ್ಗಮಿಸಿದರು. ಹೆಚ್.ಟಿ.ಮಂಜು ಜೆಡಿಎಸ್ ಏನು ಅಭಿವೃದ್ಧಿ ಮಾಡಿದೆ ಎಂದು ನರೇಂದ್ರಸ್ವಾಮಿ ಪ್ರಶ್ನೆಗೆ 93ರ ವಯಸ್ಸಲ್ಲೂ ಸಂಸತ್ತಿನಲ್ಲಿ ದೇವೇಗೌಡರು ಕರ್ನಾಟಕದ ರೈತರ ಪರ ಧ್ವನಿ ಎತ್ತಿ ಹಲವು ಸಮಸ್ಯೆಗಳಿಗೆ ಪರಿಹಾರ ಕೊಡಿಸಿದ್ದಾರೆ, ಮಂಡ್ಯ ಜಿಲ್ಲೆಗೆ ಮೆಡಿಕಲ್ ಕಾಲೇಜು ಎಂಜಿನಿಯರಿಂಗ್ ಕಾಲೇಜು, ಮಿನಿ ವಿಧಾನಸೌಧ,ಬಸ್ ಡಿಪೆÇ, ಹತ್ತಾರು ವಿದ್ಯುತ್ ಉಪವಿದ್ಯುತ್ ಕೇಂದ್ರಗಳನ್ನು ಕೊಟ್ಟದ್ದು ಜೆಡಿಎಸ್. ಕುಮಾರಣ್ಣನ ಜೆಡಿಎಸ್ ಸರ್ಕಾರ ರೈತರ ಸಾಲಮನ್ನಾ ಮಾಡಿದೆ ಎಂದು ನರೇಂದ್ರಸ್ವಾಮಿಗೆ ತಿರುಗೇಟು ನೀಡಿದರು. ಗ್ಯಾರಂಟಿಗಳ ಜೊತೆ ಕ್ಷೇತ್ರದ ಅಭಿವೃದ್ಧಿಗೂ ಗಮನಹರಿಸಿ. ಸರ್ಕಾರದ ಯೋಜನೆಗಳನ್ನು ಅನುಷ್ಟಾನಗೊಳಿಸಲು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳುತ್ತೀರಾ ಆದರೆ ಅವರಿಗೆ ಗೌರವಧನ ಹೆಚ್ಚಿಸುವಲ್ಲಿ ಹಿಂದೇಟು ಹಾಕುತ್ತಿದೆ ಇದು ಸರಿಯಲ್ಲ ಕೂಡಲೇ ಅವರಿಗೆ ಗೌರವಧನ ಹೆಚ್ಚಿಸಬೇಕು ಎಂದು ಶಾಸಕ ಮಂಜು ತಿಳಿಸಿದರು..
ಕಾರ್ಯಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಕುಮಾರ್, ಜಿಪಂ ಸಿಇಓ ಶೇಕ್ ಆಸಿಫ್ ಶೌಕತ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್ ದೇವರಾಜು, ಉಪವಿಭಾಗಾಧಿಕಾರಿ ನಂದೀಶ್, ತಾಪಂ ಆಡಳಿತಾಧಿಕಾರಿ ರಾಜಮೂರ್ತಿ, ತಹಶೀಲ್ದಾರ್ ನಿಸರ್ಗಪ್ರಿಯ, ತಾಪಂ ಇಓ ಸತೀಶ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿವಿಶ್ವನಾಥ, ನಾಗೇಂದ್ರಕುಮಾರ್ ಸೇರಿದಂತೆ ಹಲವರಿದ್ದರು.