ಗ್ಯಾರಂಟಿ ಯೋಜನೆಗೆ ಒತ್ತು ನೀಡಿದ ಬಜೆಟ್

ಕಲಬುರಗಿ,ಜು 8: ಮುಖ್ಯಮಂತ್ರಿ ಹಣಕಾಸು ಸಚಿವ ಸಿದ್ದರಾಮಯ್ಯ ಚುನಾವಣಾ
ಭರವಸೆಯಾದ 5 ಗ್ಯಾರಂಟಿಗಳ ಜಾರಿಗೆ ಹೆಚ್ಚು ಒತ್ತು ನೀಡಿ ಮಂಡಿಸಿದ ಬಜೆಟ್ ಇದಾಗಿದೆ ಎಂದು ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್. ವಿ. ದಿವಾಕರ್ ಹೇಳಿದ್ದಾರೆ.
ಗ್ಯಾರಂಟಿಗೆ ಒತ್ತು ನೀಡಿ, ಇತರ ಆದ್ಯತಾ ವಲಯಗಳನ್ನು ಕೈಬಿಟ್ಟಿರುವ ಕ್ರಮಕ್ಕೆ ನಮ್ಮ ಪಕ್ಷ ಆಕ್ಷೇಪ ವ್ಯಕ್ತಪಡಿಸುತ್ತದೆ. ಎನ್ ಇ ಪಿ ಜಾರಿಗೆ ತಡೆ, ಹಳೆಯ ಶಾಲಾಕಾಲೇಜು ಕಟ್ಟಡಗಳ ಮರು ನಿರ್ಮಾಣ, ಬಡ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಗಳ ಮರುಜಾರಿ, ಸ್ವಿಗ್ಗಿ, ಜೊಮ್ಯಾಟೊ ಅಂತಹ ಗಿಗ್ ನೌಕರರಿಗೆ ವಿಮಾಯೋಜನೆ, ಆದಿವಾಸಿಗಳಿಗೆ ನೀಡುವ ವಿಶೇಷ ಪೌಷ್ಟಿಕ ಆಹಾರ ಸಾಮಗ್ರಿಗಳ ವಿತರಣೆಯನ್ನುವರ್ಷದಲ್ಲಿ 6 ರಿಂದ 12 ತಿಂಗಳುಗಳಿಗೆ ವಿಸ್ತರಣೆ ಮುಂತಾದ ಕ್ರಮ ಸ್ವಾಗತಾರ್ಹ.ಆದರೆ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಹಿಂದಿನ ಬಜೆಟಿನಲ್ಲಿ ಘೋಷಿಸಿದ್ದ ಗೌರವಧನಏರಿಕೆಯನ್ನು ಕೈಬಿಟ್ಟು ಅವರನ್ನು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿ ಪರಿಗಣಿಸಿರುವುದು, ಗಿಗ್ ನೌಕರರನ್ನು
ಒಳಗೊಳ್ಳುವ ಕಾಯಿದೆ ರೂಪಿಸಿ ಅವರ ಬದುಕಿಗೆ ಭದ್ರತೆ ನೀಡಬೇಕೆಂಬ ಬೇಡಿಕೆಯನ್ನು ಪರಿಗಣಿಸದಿರುವುದು, ಉದ್ಯೋಗಸೃಷ್ಟಿ ಮತ್ತು ಬೆಲೆ ಏರಿಕೆ ನಿಯಂತ್ರಣಕ್ಕೆ ನಿರ್ದಿಷ್ಟ ಕ್ರಮಗಳಿಲ್ಲದಿರುವುದು,ಬರದ ಪರಿಹಾರಕ್ಕೆ ಮತ್ತುನಿರ್ವಹಣೆಗೆ ಆದ್ಯತೆ ನೀಡದಿರುವುದು, ರೈತರಿಗೆ ಬೆಂಬಲ ಬೆಲೆಗೆ ಸೂಕ್ತ ಕ್ರಮ ಇಲ್ಲದಿರುವುದುಇಂತಹ ಹಲವು ಅಂಶಗಳು ಈ ಬಜೆಟನ್ನು ಜನವಿರೋಧಿಯನ್ನಾಗಿಸಿವೆ ಎಂದಿದ್ದಾರೆ.