
ದಾವಣಗೆರೆ.ಆ.೪; ಕಳೆದ ವರ್ಷ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತಮಹೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದೆವು ಅಂದು ಸೇರಿದ್ದ ಜನಸಾಗರದ ಫಲವೇ ಇಂದು ಅವರು ರಾಜ್ಯದ ಚುಕ್ಕಾಣಿ ಹಿಡಿದಿರುವುದು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.ಎಲ್ ಬಿಕೆ ಟ್ರಸ್ಟ್ ವತಿಯಿಂದನಗರದ ವೀರ ಮದಕರಿ ನಾಯಕ ವೃತ್ತದಲ್ಲಿ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ 76ನೇ ಜನ್ಮದಿನದ ಸಮಾರಂಭದಲ್ಲಿ ಕೇಕ್ ಕತ್ತರಿಸಿ ಮಾತನಾಡಿದ ಅವರು ಕಳೆದ ವರ್ಷ ದಾವಣಗೆರೆಯಲ್ಲಿ ರಾಜ್ಯಹಿಂದೆದು ಕಂಡರಿಯದ ಕಾರ್ಯಕ್ರಮ ನಡೆದಿತ್ತು ಆದ್ದರಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ ಎಂದರು.ಬಿಜೆಪಿ ಮಾಡಿರುವ ಎಲ್ಲ ಅಕ್ರಮಗಳು, ಭಷ್ಟಾಚಾರಗಳು ಬಯಲಿಗೆ ಬರುತ್ತಿವೆ ಎಂದರು.ಜಿಲ್ಲೆಯಲ್ಲಿ ಹಗರಣಗಳೇ ನಡೆದಿವೆ. 2.5 ಕೋಟಿ ರೂ.ಗಳಲ್ಲಿ ಆಗಿದ್ದ ಕುಂದುವಾಡ ಕೆರೆ ಅಭಿವೃದ್ಧಿಗೆ 15 ಕೋಟಿ ರೂ. ವೆಚ್ಚಮಾಡುತ್ತಿದ್ದಾರೆ. ಹಿರೇಕೆರೂರು ಬಳಿ ಸಹಕಾರಿ ಸಕ್ಕರೆ ಕಂಪನಿ ಸ್ಥಾಪನೆಗೆ ವಶಪಡಿಸಿಕೊಂಡಿದ್ದ 200 ಎಕರೆಗೂ ಹೆಚ್ಚು ಭೂಮಿಯನ್ನು ಸಂಸದರು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಇನ್ನು ಭೀಮಸಮುದ್ರದ ಮೂಲಕ ಸಾಗುವ ಅದಿರು ಲಾರಿಗಳಿಂದ ಒಂದು ಲಾರಿಗೆ 250 ರೂ. ಕಮೀಷನ್ ಪಡೆದಿದ್ದಾರೆ. ಈ ಎಲ್ಲ ಹಗರಣಗಳನ್ನು ಕಾಂಗ್ರೆಸ್ ಬಯಲಿಗೆಳೆಯಲಿದೆ.
ಚುನಾವಣೆ ವೇಳೆ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಮಹಿಳೆಯರಿಗೆ ಆದ್ಯತೆ ನೀಡಿರುವ ಆ ಐದು ಗ್ಯಾರಂಟಿಗಳ ಪೈಕಿ ಇದೀಗ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿರುವ ಶಕ್ತಿ, ಮನೆ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ಗೃಹ ಲಕ್ಷಿ÷್ಮ ಹಾಗೂ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗಳು ಜಾರಿಯಾಗಿವೆ. ಉಳಿದ ಎರಡು ಗ್ಯಾರಂಟಿಗಳೂ ಶೀಘ್ರದಲ್ಲೇ ಜಾರಿಯಾಗಲಿವೆ ಎಂದು ಹೇಳಿದ ಶಾಮನೂರು ಶಿವಶಂಕರಪ್ಪ, ಮೂರು ಮಹತ್ವದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಸಿಎಂ ಸಿದ್ದರಾಮಯ್ಯ ಬಿಜೆಪಿಯವರ ಬಾಯಿ ಮುಚ್ಚಿಸಿದ್ದಾರೆ ಎಂದು ಹೇಳಿದರು.ಕಾಂಗ್ರಸ್ ಮುಖಂಡ ಎಂ.ಟಿ. ಸುಭಾಷ್‌ಚಂದ್ರ, ಎಲ್‌ಬಿಕೆ ಟ್ರಸ್ಟ್ ಗೌರವಾಧ್ಯಕ್ಷ ಬಿ. ವೀರಣ್ಣ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷೆ ಲಕ್ಷಿ÷್ಮÃದೇವಿ ಬಿ. ವೀರಣ್ಣ, ಮೇಯರ್ ವಿನಾಯಕ ಪೈಲ್ವಾನ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಎನ್.ಎಂ. ಆಂಜನೇಯ ಗುರೂಜಿ ಇದ್ದರು.