ಗ್ಯಾರಂಟಿ ಯೋಜನೆಗಳ ಈಡೇರಿಕೆ, ನುಡಿದಂತೆ ನಡೆದ ಸರ್ಕಾರ : ಶಾಸಕಿ ಎಂ.ಪಿ.ಲತಾಮಲ್ಲಿಕಾರ್ಜುನ್

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಜ.27; ಸಂವಿಧಾನ ಜಾರಿಯಿಂದಲೇ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳು ಸಿಕ್ಕಿವೆ, ಆದ್ದರಿಂದ ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.ಪಟ್ಟಣದ ಸ್ಡೇಡಿಯಂನಲ್ಲಿ ತಾಲೂಕು ಆಡಳಿತದವತಿಯಿಂದ 75ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅದ್ಯಕ್ಷತೆವಹಿಸಿ ಮಾತನಾಡಿದರು.ಸಂವಿಧಾನದಿಂದ ದೇಶದ ಪ್ರತಿಯೊಬ್ಬ ಪ್ರಜೆಗೂ ಸಹ ಸಮಾನ ಶಿಕ್ಷಣ, ಶಿಕ್ಷಣ ಹಕ್ಕುಗಳು, ಮೂಲಭೂತ ಹಕ್ಕುಗಳು, ಧಾರ್ಮಿಕ ಹಕ್ಕುಗಳು ದೊರಕಿದ್ದು, ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ ಮತ್ತು ಅವರ ತಂಡವನ್ನು ಇಂದು ಸ್ಮರಿಸಬೇಕಾಗಿದೆ ಸಂವಿಧಾನದಿAದ ಎಲ್ಲದರಲ್ಲೂ ಸ್ವಾತಂತ್ರ‍್ಯ ಸಿಕ್ಕಿದೆ ಎಂದು ಸ್ವೇಚ್ಚಾಚಾರ ಬೇಡ ಎಂದು ಹೇಳಿದರು..ಸರ್ಕಾರ ಕೊಟ್ಟ ಮಾತು ಈಡೇರಿಕೆ; ಐದು ಗ್ಯಾಂಟಿಗಳನ್ನು ಜಾರಿಗೊಳಿಸುವುದರ ಮೂಲಕ ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ ಎಂದು ಹೇಳಿದ ಅವರು ಶಕ್ತಿ ಯೋಜನೆ ಮಹಿಳೆಯರಿಗೆ ಶಕ್ತಿ ನೀಡಿದೆ. ಶಕ್ತಿ ಯೋಜನೆಯಡಿ ತಾಲೂಕಿನಲ್ಲಿ ಕಳೆದ ಡಿ.23 ರವರೆಗೆ 26.67 ಲಕ್ಷ ಮಹಿಳೆಯರು ಟ್ರಾವಲ್ ಮಾಡಿದ್ದು, ರಾಜ್ಯ ಸರ್ಕಾರದಿಂದ 8.69 ಕೋಟಿ ಹಣವನ್ನು ತುಂಬಲಾಗಿದೆ ಎಂದರು.ತಾಲೂಕನಲ್ಲಿ 200 ಯುನಿಟ್ ಒಳಗೆ ಉಚಿತ ವಿದ್ಯುತ್ ವನ್ನು 65 ಸಾವಿರ ಫಲಾನುಭವಿಗಳು ಬಳಸಿಕೊಂಡಿದ್ದಾರೆ, 65 ಸಾವಿರಕ್ಕಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಪಲಾನುಭವಿಗಳು ಇದ್ದಾರೆ ಎಂದು ಅವರು ಆದ್ದರಿಂದ ನಮ್ಮದು ಮಾತಿಗೆ ತಪ್ಪದ ಸರ್ಕಾರವಾಗಿದೆ ಎಂದು ತಿಳಿಸಿದರು.