ಗ್ಯಾರಂಟಿ ಯೋಜನೆಗಳಿಗೆ ಮರುಳಾಗದೇ ದೇಶದ ಉಜ್ವಲ ಭವಿಷ್ಯಕ್ಕಾಗಿ ಮೋದಿ ಬೆಂಬಲಿಸಿ: ನೂರೊಂದುಶೆಟ್ಟಿ ಮನವಿ

ಸಂಜೆವಾಣಿ ವಾರ್ತೆ
ಚಾಮರಾಜನಗರ.ಏ. 13- ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‍ನ ಗ್ಯಾರಂಟಿ ಯೋಜ ನೆಗಳಿಗೆ ಮರುಳಾಗಿ ಮತ ಹಾಕಿದರೆ ದೇಶ ಅಧೋಗತಿಗೆ ಹೋಗಲಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಕಾರ್ಯ ಕಾರಿಣಿ ಸದಸ್ಯ ನೂರೊಂದು ಶೆಟ್ಟಿ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ಅವರು ಭ್ರμÁ್ಟಚಾರಿಗಳನ್ನು ಬಗ್ಗು ಬಡಿಯುತ್ತಿದ್ದಾರೆ. ಕಾಂಗ್ರೆಸ್‍ನವರು ಸ್ವಾರ್ಥಕ್ಕಾಗಿ ದೇಶ ವಿಭಜನೆ ಮನಸ್ಥಿತಿಗೆ ಹೋಗಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿಕೂಟಕ್ಕೆ 400ಕ್ಕು ಹೆಚ್ಚು ಸ್ಥಾನಗಳು ಬರಲಿದ್ದು, ಮತ್ತೇ ಮೂರನೇ ಬಾರಿಗೆ ಮೋದಿ ಅವರು ಪ್ರಧಾನಿಯಾಗಲಿದ್ದಾರೆ ಎಂದು ತಿಳಿಸಿದರು.
ರಾಹುಲ್‍ಗಾಂಧಿ ನಾಯಕತ್ವ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅರಿತಿರುವ ಕಾಂಗ್ರೆಸ್ಸಿಗರು ಅವರ ಹೆಸರನ್ನು ಹೇಳಲು ಭಯ ಬೀಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ವಿಶ್ವಾಸಾರ್ಹ ನಾಯಕತ್ವದ ಕೊರತೆ ಇದೆ. ಜೊತೆಗೆ ಸರ್ಕಾರದ ಸಾಧನೆಯ ಬೆಂಬಲವೂ ಇಲ್ಲದೇ ಕೇವಲ ಕೇಂದ್ರ ಸರ್ಕಾರದ ಅನುದಾನದ ಬಗ್ಗೆ ಜನರನ್ನು ದಾರಿ ತಪ್ಪಿಸುತ್ತಿದೆ. ಕೇವಲ 5 ಗ್ಯಾರಂಟಿಗಳನ್ನು ನೀಡಿ, ರಾಜ್ಯ ಖಜಾನೆಯನ್ನು ಭರ್ತಿ ಮಾಡಿಕೊಳ್ಳಲು ಮತ್ತೊಂದು ಕಡೆಯಿಂದ ಎಲ್ಲದಕ್ಕು ಹೆಚ್ಚಿನ ತೆರಿಗೆಯನ್ನು ವಿಧಿಸಿರುವ ಸಿದ್ದರಾಮಯ್ಯ ಗ್ಯಾರಂಟಿ ಭ್ರಮೆಯಲ್ಲಿದ್ದು, ಎಲ್ಲಾ ಮಹಿಳೆಯರು ನನಗೆ ಮತ ಹಾಕುತ್ತಾರೆ ಎಂಬ ಗರ್ವದ ಮಾತನಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಯ ಫಲಾನುಭವಿಗಳಾದ ಮಹಿಳೆಯರೇ ಬಹಳಷ್ಟು ಕಡೆ ಸಿದ್ದರಾಮಯ್ಯ ಸರ್ಕಾರ ವಿರುದ್ದ ಟೀಕೆ ಮಾಡುತ್ತಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾಗಿ ಬಸ್‍ಗಳು ಇಲ್ಲ. ಗೃಹ ಲಕ್ಷಿ ಯೋಜನೆ ಒಬ್ಬರಿಗೆ ಬಂದರೆ ಇನ್ನು ಹತ್ತು ಜನಕ್ಕೆ ಬಂದಿಲ್ಲ. ಅಕ್ಕಿ ಕೊಡುತ್ತೇವೆ ಎಂದು ದುಡ್ಡು ಕೊಡುತ್ತಾರೆ. ಇವರನ್ನು 10 ಕೆಜಿ ಉಚಿತ ಅಕ್ಕಿ ಕೊಡಿ ಎಂದು ಕೇಳಿದ್ದವರು ಯಾರು. ನಮಗೆ ಉಚಿತ ಬಸ್ ಪ್ರಯಾಣ ಕೊಡಿ ಎಂದವರು ಯಾರು, ನಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಅದ್ಯತೆ ನೀಡಿ, ಉಚಿತವಾಗಿ ಶಿಕ್ಷಣ, ಆರೋಗ್ಯ, ಉದ್ಯೋಗ ನೀಡಲು ಮುಂದಾಗಲಿ ಎಂದು ಬಹುತೇಕ ಮಹಿಳೆಯರು ಹೇಳುತ್ತಿದ್ದಾರೆ. ಇದೆಲ್ಲವು ಗೊತ್ತಿದ್ದರು ಸಹ ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರಮೋದಿ ಅವರು ಕಳೆದ 10 ವರ್ಷದಲ್ಲಿ ಕೈಗೊಂಡಿರುವ ಸಾಧನೆಯ ಆಧಾರದ ಮೇಲೆ ನಾವು ಈ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಕಳೆದ 10 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ಸದೃಢ ಭಾರತಕ್ಕೆ, ಆರ್ಥಿಕ ಪ್ರಗತಿಗೆ ಹಾಗೂ ದೇಶದ ಸವಾರ್ಂಗೀಣ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ನೂರೊಂದುಶೆಟ್ಟಿ ಮನವಿ ಮಾಡಿದರು. ಜಿಲ್ಲಾ ಬಿಜೆಪಿ ವಕ್ತಾರ ಕಾಡಹಳ್ಳಿ ಶಿವರುದ್ರಸ್ವಾಮಿ ಮಾತನಾಡಿ, ಕೆಲ ಕಾಂಗ್ರೆಸ್ ಮುಖಂಡರು ಅಚ್ಚೇ ದಿನ್ ಬಂತಾ, ಮೋದಿ ಅವರು 15 ಲಕ್ಷ ಕೊm್ಟರಾ ಎಂದು ಟೀಕೆ ಮಾಡುತ್ತಿದ್ದಾರೆ. ಆದರೆ, ಮೋದಿ ಅವರು ಕೈಗೊಂಡಿರುವ ಯೋಜನೆಗಳು ಸರ್ವ ವ್ಯಾಪಿ, ಸರ್ವರನ್ನು ಸ್ಪರ್ಶಿಸಿದೆ. ವಿಕಸಿತ ಭಾರತ ಪರಿಕಲ್ಪನೆಯೇ ಕಾಂಗ್ರೆಸ್ಸಿಗರಿಗೆ ಇಲ್ಲ. ಭಾರತ ಸಮಗ್ರ ಅಭಿವೃದ್ದಿ ಮತ್ತು ವಿಶ್ವ ಗುರುವನ್ನಾಗಿಸಲು ಮೋದಿ ಅವರು ಕೈಗೊಂಡಿರುವ ಕಾರ್ಯಕ್ರಮಗಳೂ ವಿಶ್ವ ಮನ್ನಣೆಯನ್ನು ಪಡೆದುಕೊಂಡಿದೆ. ಎಲ್ಲಾ ವರ್ಗದ ಜನರಿಗೂ ತಲುಪುವ ನಿಟ್ಟಿನಲ್ಲಿ ನಲ್ ಜಲ ಪಾನಿ, ಮಹಿಳೆಯರ ಸಬಲೀಕರಣ, ಮುದ್ರಾ ಯೋಜನೆ, ವಿಶ್ವಕರ್ಮ ಯೋಜನೆ ಸೇರಿದಂತೆ 300ಕ್ಕು ಹೆಚ್ಚು ಯೋಜನೆಗಳು ಚಾಲ್ತಿಯಲ್ಲಿವೆ. ಇದನ್ನು ಅರ್ಥ ಮಾಡಿಕೊಂಡಿರುವ ಮತದಾರರು ಮೋದಿ ಹಾಗು ಬಿಜೆಪಿಗೆ ಮತ ಹಾಕುತ್ತಾರೆ ಎಂದರು.
ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಕಾಡಹಳ್ಳಿ ಶಿವರುದ್ರಸ್ವಾಮಿ, ಸಹ ವಕ್ತಾರ ಎನ್.ಮಂಜುನಾಥ್, ಮಾಧ್ಯಮ ಸಹ ಸಂಚಾಲಕ ಅಶ್ವಿನ್ ಇದ್ದರು.