ಗ್ಯಾರಂಟಿ: ಪ್ರತಿ ಕುಟುಂಬಕ್ಕೆ ಮಾಸಿಕ 8 ರಿಂದ 10 ಸಾವಿರ

ಕಲಬುರಗಿ,ಫೆ.12-ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ಮಾಸಿಕ 8 ರಿಂದ 10 ಸಾವಿರ ಹಣ ಸಿಗುತ್ತಿದೆ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ತಬ್ಬಲಿಯಾಗಿದ್ದ ಜಿಲ್ಲೆಯ ಆಡಳಿತ ಯಂತ್ರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಪ್ರಿಯಾಂಕ್ ಖರ್ಗೆ ಅವರ ಸಮರ್ಥ ಸೂಚನೆಯೊಂದಿಗೆ ಚುರುಕಾಗಿದೆ. ಬೆಳೆ ನಷ್ಟದಿಂದ ಕಂಗಾಲಾಗಿದ್ದ ರೈತರಿಗೆ 1. 45 ಲಕ್ಷ ರೈತರಿಗೆ ಪರಿಹಾರ ಒದಗಿಸಲು 124 ಕೋಟಿ ರು ಬಿಡುಗಡೆ ಮಾಡಲಾಗಿದ್ದು, ರೈತರ ಖಾತೆಗೂ ಹಣ ಜಮೆಯಾಗಿದೆ. ವಾಜಪೇಯಿ ಬಡಾವಣೆಲ್ಲಿ 10 ಕೋಟಿ ರೂ.ಅನುದಾನದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ನಿರ್ಮಾಣವಾಗುತ್ತಿದೆ. 39 ಅಂಗನವಾಡಿಗಳಿಗೆ 18 ಲಕ್ಷ ರು , ವಿಶೇಷ ಸವಲತ್ತು ಒದಗಿಸಲಾಗಿದೆ. ಜಿಲ್ಲೆಯಲ್ಲಿ 7, 610 ಕೋಟಿ ರು ಬಂಡವಾಳ ಹೂಡಿಕೆ 2, 060 ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಲಾಗುತ್ತಿದೆ. ಗ್ರಾಮೀಣ ನೀರು ಪೂರೈಕೆಗೆ ಜಿಲ್ಲೆಯಲ್ಲಿ ಜಲ್ ಜೀವನ್ ಮಿಶನ್ ಅಡಿ 227 ಕೋಟಿ ರು ಅನುದಾನ ನೀಡಲಾಗಿದೆ. ಕೆಕೆಆರ್‍ಡಿಬಿಗೆ 5 ಸಾವಿರ ಕೋಟಿ ರು, ಯಶಸ್ವಿ ಜನ ಸ್ಪಂದನೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಬಿಜೆಪಿ ಅಧಿಕಾರಲ್ಲಿ ಇದ್ದಾಗ ಇದ್ಯಾವುದೂ ಅಗಿರಲಿಲ್ಲ. 20 ಕೋಟಿ ರು ವೆಚ್ಚದ ನಗರ ಸಾರಿಗೆ ಬಸ್‍ನಿಲ್ದಾಣ ಲೋಕರ್ಪಣೆ ಮಾಡಲಾಗಿದೆ. ಟ್ರಾಮಾ ಕೇರ್ ಸೆಂಟರ್ ಆರಂಭವಾಗಿದೆ. ತಾಯಿ ಮಕ್ಕಳ ಆಸ್ಪತ್ರೆ, ಜಯದೇವ ಆಸ್ಪತ್ರೆಗಳು ಶೀಘ್ರ ಲೋಕಾರ್ಪಣೆಗೆ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
ಆರೋಪದಲ್ಲಿ ಹುರುಳಿಲ್ಲ
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಸ್ವಜನ ಪಕ್ಷಪಾತ, ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದಾರೆ ಎಂದು ನನ್ನ ಮೇಲೆ ಆರೋಪ ಮಾಡಿದ್ದಾರೆ. ಇಂತ ಹುರುಳಿಲ್ಲದ ಆರೋಪ ಮಾಡುವÀ ಪೂರ್ವದಲ್ಲಿ ಅವರು ತಮ್ಮ ಇತಿಹಾಸವನ್ನು ಸ್ವಲ್ಪ ಮೆಲಕು ಹಾಕೋದು ಒಳ್ಳೆಯದು ಎಂದು ಅಲ್ಲಮಪ್ರಭು ಕುಟುಕಿದರು.
ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ನನ್ನ ಮಕ್ಕಳು ಹಸ್ತಕ್ಷೇಪ ಮಾಡುತ್ತಿದ್ದಾರೆಂದು ದತ್ತಾತ್ರೇಯ ರೇವೂರ್ ಆರೋಪಿಸಿದ್ದಾರೆ. ಈ ಆರೋಪ ಮಾಡುವ ಮುನ್ನ ಅವರು ತಾವು ತಮ್ಮ ತಂದೆ ಕಾಲದಿಂದಲೂ ಮಾಡುತ್ತ ಬಂದಿರುವ ಆಡಳಿತ ಹಸ್ತಕ್ಷೇಪವನ್ನು ಒಮ್ಮೆ ಅವಲೋಕಿಸಬೇಕಿತ್ತು. ದಿ.ಚಂದ್ರಶೇಖರ ಪಾಟೀಲರು ಶಾಸಕರಾಗಿದ್ದಾಗ ಅವರ ಎಲ್ಲಾ ಆಡಳಿತದಲ್ಲಿ ಅವರ ಪುತ್ರರಾದ ದತ್ತಾತ್ರೇಯ ರೇವೂರ್ ಅವರೇ ಕೈ ಆಡಿಸುತ್ತಿದ್ದರು. ಜನರೂ ಈ ಬಗ್ಗೆ ಆಕ್ಷೇಪಿಸುತ್ತಿದ್ದರು ಎಂದು ಪ್ರತ್ಯಾರೋಪ ಮಾಡಿದರು.
ನಾನಂತೂ ನನ್ನ ಮಕ್ಕಳು ಯಾರನ್ನೂ ಈ ಪರಿಯಾಗಿ, ಜನರಿಗೆ ತೊಂದರೆಯಾಗೋ ರೀತಿಯಲ್ಲಿ ಆಡಳಿತದಲ್ಲಿ ಮೂಗು ತೂರಿಸಲು ಬಿಡೋದಿಲ್ಲ, ಬಿಡಲು ಆಗೋದಿಲ್ಲ. ಶಾಸಕರ ಪುತ್ರಾರಾಗಿ ಕೆಲವು ಸಮಾರಂಭಗಳಲ್ಲಿ ಬಂದು ಹೋಗುವುದು ತಪ್ಪೆ ? ಎಂದು ಪ್ರಶ್ನಿಸಿದ ಅವರು, ಜನತೆ ಹುಶಾರಾಗಿದ್ದಾರೆ. ನಾನೇ ಶಾಸಕ ಎಂಬುದು ಅವರಿಗೆ ಗೊತ್ತಿದ್ದೇ. ನನ್ನನ್ನು ಬಹುಮತದಿಂದ ಗೆಲ್ಲಿಸಿ ತಮ್ಮ ಸೇವೆಗೆ ಅವಕಾಶ ನೀಡಿದ್ದಾರೆಂಬುದು ರೇವೂರ್ ಅವರು ಮೊದಲು ಅರಿಯಲಿ. ನಾವು ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದೇವೆ. ಹೊರತು ಯಾರಿಗೂ ಅಂಜಿ ಕೆಲಸ ಮಾಡೋರಲ್ಲ. ಜನರೇ ನಮಗೆ ದೇವರು. ಅವರ ಹಿತಾಸಕ್ತಿಯೇ ನಮ್ಮ ಗುರಿ ಎಂದು ಹೇಳಿದರು.