ಗ್ಯಾರಂಟಿ ಜಾರಿಯಿಂದ ವಿರೋಧಿಗಳಲ್ಲಿ ನಡುಕ ಹುಟ್ಟಿದೆ: ಈಶ್ವರ್ ಖಂಡ್ರೆ

ಬೀದರ್:ಜೂ.12: ಕಾಂಗ್ರೆಸ್ ಸರ್ಕಾರ ಘೋಷಿಸಿ ಗ್ಯಾರಂಟಿಗಳ ಬಗ್ಗೆ ವ್ಯಂಗ್ಯವಾಡುತ್ತಿದ್ದವರಿಗೀಗ ಗ್ಯಾರಂಟಿಗಳು ಜಾರಿಗೆ ಬರುತ್ತಲೇ ನಡುಕ ಆರಂಭವಾಗಿದೆ ಎಂದು ಅರಣ್ಯ, ಪರಿಸರ ಖಾತೆ ಸಚಿವ, ಜಿಲ್ಲಾ ಉಸ್ತುವಾರಿ ಮಂತ್ರಿ ಹೇಳಿದರು.
ನಗರದ ಕೇಂದ್ರ ಬಸ್‍ನಿಲ್ದಾಣದಲ್ಲಿ ಆರಂಭಿಸಿದ ಮಹಿಳೆಯರಿಗೆ ಬಸ್‍ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಚುನಾವಣೆಗೂ ಮುನ್ನ ರಾಜ್ಯದ ಜನರಿಗೆ ನೀಡಿದ 5 ಭರವಸೆಗಳಲ್ಲಿ ಪ್ರಥಮವಾಗಿ ಅನುಕೂಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಮಾಡಿಕೊಡುವ ಮೂಲಕ ಶಕ್ತಿ ಯೋಜನೆಗೆ ಇಂದು ಚಾಲನೆ ನೀಡಿದ್ದೇವೆ. ನಾವು ಏನೇ ಮಾಡಿದರೂ ವಿರೋಧಿಗಳು ಟೀಕೆ ಮಾಡುತ್ತಿದ್ದಾರೆ. ಸದ್ಯ ಒಂದು ಗ್ಯಾರಂಟಿ ಜಾರಿಗೆ ಬಂದಿದೆ, ಇನ್ನೂ 4 ಗ್ಯಾರಂಟಿಗಳು ಜಾರಿಗೆ ಬರಲಿವೆ. ರು.2000 ನೇರ ಖಾತೆಗೆ ಜಮೆಯಾಗಲಿದೆ. ಶೇ. 95ರಷ್ಟು ಮನೆ ಗ್ರಾಹಕರಿಗೆ 200) ಯುನಿಟ್ ವಿದ್ಯುತ್ ಉಚಿತದಿಂದ ಲಾಭವಾಗಲಿದೆ. ಅನ್ನ ಭಾಗ್ಯ ಯೋಜನೆಯಿ0ದ ಬಡ ಕುಟುಂಬಕ್ಕೆ ಲಾಭ ಆಗಲಿದೆ ಹೀಗೆ ಎಲ್ಲ 5 ಗ್ಯಾರಂಟಿಗಳು ನೂರಕ್ಕೆ ನೂರು ಆರ0ಭಿಸುತ್ತೇವೆ ಎಂದರು.
ಕೇಂದ್ರ ಸರ್ಕಾರ ಅದಾನಿ, ಅಂಬಾನಿಯ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರೆ ದೀವಾಳಿ ಆಗುವುದಿಲ್ಲ ಆದರೆ ಬಡವರಿಗೆ ಹಣ ನೀಡಿದರೆ ದೀವಾಳಿ ಆಗುತ್ತದೆ. ಎ0ದರೆ ಹೇಗೆ? ಎಂದು ಪ್ರಶ್ನಿಸಿದರು. ರಾಜ್ಯದ ಜನ ಮೊನ್ನೆಯೇ ಬಿಜೆಪಿಯವರಿಗೆ ಒಳ್ಳೆ ಪಾಠ ಕಲಿಸಿದ್ದಾರೆ. ಬರುವ ಲೋಕಸಭೆ ಚುನಾವಣೆಯಲ್ಲಿ ಕೂಡ ಪಾಠ ಕಲಿಸಬೇಕು ಎಂದರು.
ಸರ್ಕಾರ ಈಗ ಟೇಕಾಫ್ ಆಗಿದೆ. ರಾಜ್ಯದ 34 ಸಚಿವರು ಒ0ದು ಮನಸ್ಸಿನಿಂದ ಒಗ್ಗಟ್ಟಾಗಿ ಕೆಲ ಮಾಡುತ್ತ ರಾಜ್ಯವನ್ನು ದೇಶದಲ್ಲಿಯೇ ನಂಬರ್ ಒನ್ ರಾಜ್ಯವನ್ನಾಗಿ ಮಾಡಬೇಕೆಂಬ ಕನಸು ಹೊಂದಿದ್ದಾರೆ. ಇದಕ್ಕೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ. ಹಗರಣ ರಹಿತ ಹಾಗೂ ಭ್ರಷ್ಟಾಚಾರ ರಹಿತ ಸರ್ಕಾರ ನಮ್ಮದಾಗಿರಲಿದೆ ಎಂದರು.
ಸ್ವಾತಂತ್ರ ಪೂರ್ವದಿಂದಲೂ ಕಾಂಗ್ರೆಸ್ ಮಹಿಳೆಯರ ಪರವಾಗಿದೆ ನಂತರವು ಕೂಡ ಮಹಿಳೆಯರ ಅಭಿವೃದ್ಧಿ ಗೆ ಕೆಲಸ ಮಾಡುತ್ತಲೇ ಇದೆ. 12ನೇ ಶತಮಾನದಲ್ಲಿ ಅಕ್ಕ ಮಹಾದೇವಿ, ನಾಗಾಂಬಿಕಾ ಅವರಂತವರು ಮಹಿಳೆಯರ ಸಮಾನತೆಗಾಗಿ ದುಡಿದಿದ್ದಾರೆ. ಕಾ0ಗ್ರೆಸ್ ಪಕ್ಷವು ಕೂಡ ಗ್ರಾ.ಪಂ., ತಾ.ಪಂ ಹಾಗೂ ಜಿಪಂ, ನಗರ ಸಭೆ ಸೇರಿದಂತೆ ಇತರೆ ಸ್ಥಳಿಯ ಸಂಸ್ಥೆಗಳಲ್ಲಿ ನಲ್ಲಿ ಶೇಕಡ 50 ಪ್ರತಿಶತ ಮೀಸಲಾತಿ ನೀಡುವ ಮೂಲಕ ಮಹಿಳೆಯರ ಸಮಾನತೆಗಾಗಿ ಶ್ರಮಿಸುತ್ತಿದೆ. ಸರ್ಕಾರಿ ನೌಕರಿಗಳಲ್ಲಿ ಸಹ ಮಿಸಲಾತಿ ಕಾಂಗ್ರೆಸ್ ನೀಡಿದೆ ಎಂದರು.
ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫಲೇಕರ್ ಸ್ವಾಗತಿಸಿ ಶಕ್ತಿ ಯೋಜನೆಯ ಕುರಿತು ಮಾಹಿತಿ ನೀಡಿದರು,
ಸಮಾರಂಭದಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್, ಎಂಎಲ್‍ಸಿ ಅರವಿಂದಕುಮಾರ ಅರಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಅಮೃತರಾವ್ ಚಿಮಕೋಡೆ, ಶರಣು ಮೋದಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಎಸ್‍ಪಿ ಚನ್ನಬಸವಣ್ಣ, ಜಿ.ಪಂ ಸಿಇಒ ಶಿಲ್ಪಾ ಸೇರಿದಂತೆ ಸುಮಾರು 138 ಗ್ರಾಮಗಳಿಂದ ಮಹಿಳೆಯರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.