ಗ್ಯಾರಂಟಿ ಅನುಷ್ಠಾನ ರಾಜಕೀಯ ಇತಿಹಾಸದಲ್ಲೇ ಪ್ರಥಮ: ಎಚ್.ಸಿ.ಎಂ

ತಿ.ನರಸೀಪುರ: ಜೂ.05:- ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಐದು ಗ್ಯಾರಂಟಿ ಭರವಸೆಗಳ ಅನುಷ್ಠಾನ ದೇಶದ ರಾಜಕೀಯ ಇತಿಹಾಸದಲ್ಲೇ ಪ್ರಥಮ.ಇದೊಂದು ಐತಿಹಾಸಿಕ ನಿರ್ಣಯ.ಕಾಂಗ್ರೆಸ್ ಪಕ್ಷ ದೀನ-ದಲಿತರ ಒಳಿತಿಗಾಗಿ ಸವಾಲು ಸ್ವೀಕರಿಸಲು ಸಿದ್ದವಿರುವುದಾಗಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಪಟ್ಟಣದ ಹೊರವಲಯ ಹೆಳವರಹುಂಡಿ ಸಮೀಪದ ಮೈದಾನದವೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರ ಹಿಡಿದ ಕೆಲವೇ ದಿನಗಳಲ್ಲಿ ಗ್ಯಾರಂಟಿ ಭರವಸೆಗಳ ಅನುಷ್ಠಾನ ಮಾಡಿದೆ.ಈ ಯೋಜನೆಗಳ ಅನುಷ್ಠಾನಕ್ಕೆ ಸುಮಾರು 50ಸಾವಿರ ಕೋಟಿ ರೂಗಳ ಹಣದ ಅವಶ್ಯಕತೆ ಇದೆ.ಯೋಜನೆಗೆ ಸಂಪನ್ಮೂಲ ಕ್ರೂಢೀಕರಣ ಮಾಡಿಕೊಂಡು ಮುಂದಿನ ಐದು ವರ್ಷವೂ ಗ್ಯಾರಂಟಿ ಭರವಸೆಗಳನ್ನು ಮುಂದುವರೆಸಲಾಗುವುದು ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಇನ್ನು ತಿಂಗಳು ಆಗಿಲ್ಲ .ಆದರೆ,ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ಸುಖಾಸುಮ್ಮನೆ ಟೀಕೆ ಮಾಡುತ್ತಿವೆ.
ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ನಂಬಿಕೆ ರಾಜ್ಯದ ಜನತೆಯಲ್ಲಿದೆ.ಆದರೆ ,ಗ್ಯಾರಂಟಿ ಯೋಜನೆಗಳು ಜಾರಿಯಾದಲ್ಲಿ ಮುಂಬರುವ ಜಿಲ್ಲಾ ಪಂಚಾಯತ್,ತಾಲೂಕು ಪಂಚಾಯತಿ ಮತ್ತು ಸಂಸತ್ ಚುನಾವಣೆಗಳಲ್ಲಿ ಪ್ರತಿಪಕ್ಷಗಳು ಸೋಲುವ ಭಯದಿಂದ ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ ಎಂದರು.
ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಟ್ಟು ಅಧಿಕಾರ ಕೊಟ್ಟಿದ್ದು, ಕಾರ್ಯಕರ್ತರು ಅರ್ಹ ಜನರಿಗೆ ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ತಲುಪಿಸಿ ಮುಂಬರುವ ಚುನಾವಣೆಗಳಲ್ಲಿ ಪಕ್ಷವನ್ನು ಬೆಂಬಲಿಸುವಂತೆ ಮನವೊಲಿಸಬೇಕು.ಸಂವಿಧಾನವನ್ನು ನಾವು ರಕ್ಷಣೆ ಮಾಡಿದಲ್ಲಿ ನಮ್ಮೆಲ್ಲರನ್ನು ಸಂವಿಧಾನ ರಕ್ಷಣೆ ಮಾಡುತ್ತದೆ ಎಂದರು.
ಈ ಬಾರಿಯ ಚುನಾವಣೆ ಜನತೆಯ ಚುನಾವಣೆ ಆಗಿತ್ತು.ಪ್ರಜಾಪ್ರಭುತ್ವ ಆಶಯಗಳ ಮೇಲೆ ಸವಾರಿ ಮಾಡಿದ ಬಿಜೆಪಿ ಪಕ್ಷಕ್ಕೆ ರಾಜ್ಯದ ಜನತೆ ತಕ್ಕಪಾಠ ಕಲಿಸಿದ್ದಾರೆ.ದಲಿತ,ಹಿಂದುಳಿದ,ಅಲ್ಪ ಸಂಖ್ಯಾತ ಸಮುದಾಯಗಳ ಜೊತೆ ಒಕ್ಕಲಿಗ,ಲಿಂಗಾಯತ ಸಮುದಾಯಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿವೆ.ಹಾಗಾಗಿ ಆ ಎಲ್ಲ ವರ್ಗಗಳ ಅಭಿವೃದ್ಧಿ ಕಾಂಗ್ರೆಸ್ ಪಕ್ಷದ ಹೊಣೆ ಎಂದರು.
ಕ್ಷೇತ್ರದ ಜನತೆ ಮಳೆ-ಗಾಳಿ ಎನ್ನದೆ ನನ್ನನ್ನು ಗೆಲ್ಲಿಸಲು ದುಡಿದಿದ್ದೀರಿ.ನಿಮ್ಮೆಲ್ಲರಿಗೂ ಅನಂತ ಅನಂತ ಧನ್ಯವಾದಗಳು. ಈ ಬಾರಿ ನನ್ನ ಜೊತೆ ಇದ್ದ ಜನ ಬೆಂಬಲ ನನ್ನ ರಾಜಕೀಯ ಇತಿಹಾಸದಲ್ಲಿ ಕಂಡಿಲ್ಲ.ದಲಿತ ಸಂಘಟನೆಗಳು,ವಿದ್ಯಾರ್ಥಿ ಸಂಘಗಳು ಮತ್ತು ಹಲವು ಹಿತೈಷಿಗಳು ನನ್ನ ಪರವಾಗಿ ಕೆಲಸ ಮಾಡಿದ್ದಾರೆ.ಹಾಗಾಗಿ ನಾನು ನಿಮ್ಮೆಲ್ಲರ ಆಶೀರ್ವಾದದಿಂದ ಹೆಚ್ಚು ಮತಗಳ ಅಂತರದಲ್ಲಿ ಜಯಗಳಿಸಿದ್ದೇನೆ ಎಂದರು.ನನ್ನ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ.
ನೀವು ಕೊಟ್ಟಿರುವ ಅಧಿಕಾರವನ್ನು ಬಳಸಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಯ ಜೊತೆಯಲ್ಲಿ ಕಟ್ಟಕಡೆಯ ಪ್ರಜೆಗೂ ನ್ಯಾಯ ಒದಗಿಸುತ್ತೇನೆ ಎಂದರು.
ಮಾಜಿ ಶಾಸಕ ಯತೀದ್ರಸಿದ್ದರಾಮಯ್ಯ ಮಾತನಾಡಿ ,ನಮ್ಮ ತಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ಕೆಲವೇ ದಿನಗಳಲ್ಲಿ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದಾರೆ.ಈ ಹಿಂದೆಯೂ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅನ್ನಭಾಗ್ಯ,ಶಾದಿ ಭಾಗ್ಯಪಶು ಭಾಗ್ಯ ,ಕ್ಷೀರ ಭಾಗ್ಯ ಯೋಜನೆಗಳನ್ನು ಗಳನ್ನು ನೀಡಿ ಬಡವರ ಕಣ್ಮಣಿ ಎಂದು ಹೆಸರಾಗಿದ್ದರು.ಕಾಂಗ್ರೆಸ್ ಸಾಮಾಜಿಕ ಕಳಕಳಿವುಳ್ಳ ಪಕ್ಷ .ಕಾಂಗ್ರೆಸ್ ಗ್ರಾಮೀಣ ಜನತೆ ಪರ ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ.ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಉತ್ತಮ ಆಡಳಿತ ನೀಡಿ ಮತ್ತಷ್ಟು ಜನಪರ ಯೋಜನೆಗಳನ್ನು ಕೈಗೊಳ್ಳಲಿ ಎಂದು ಹಾರೈಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕರಾದ ಡಾ.ಯತಿಂದ್ರಸಿದ್ದರಾಮಯ್ಯ, ಎಸ್.ಕೃಷ್ಣಪ್ಪ, ಜೆ. ಸುನೀತಾ ವೀರಪ್ಪಗೌಡ, ಮಾಜಿ ಜಿಪಂ ಸದಸ್ಯೆ ಸುಧಾ ಮಹಾದೇವಯ್ಯ, ಮೈಮುಲ್ ನಿರ್ದೇಶಕ ಆರ್. ಚಲುವರಾಜು, ಮಾಜಿ ಪಿಕಾರ್ಡ್ ಅಧ್ಯಕ್ಷ ವಜ್ರೇಗೌಡ ,ಅನಿಲ್ ಬೋಸ್ ,ಡಿಸಿಸಿ ವಕ್ತಾರ ಹುಣಸೂರು ಬಸವಣ್ಣ, ಡಾ.ಕೆ.ಮಹದೇವ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಬಸವರಾಜು, ಪುರಸಭಾ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ, ಜಿಲ್ಲಾ ಎಸ್.ಸಿ /ಎಸ್ಟಿ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆ.ಮಲ್ಲು, ತಾ. ಪಂ.ಮಾಜಿ ಅಧ್ಯಕ್ಷ ಹ್ಯಾಕನೂರು ಉಮೇಶ್, ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಮಾಜಿ ತಾ.ಪಂ.ಸದಸ್ಯರಾದ ನರಸಿಂಹಮಾದ ನಾಯಕ, ಕೆಬ್ಬೆಶಿವಸ್ವಾಮಿ, ರಂಗಪ್ಪ,ಕ್ಕುಕೂರು ಗಣೇಶ್, ರಾಮಲಿಂಗಯ್ಯ, ದೊಡ್ಡೇಬಾಗಿಲು ಮಲ್ಲಿಕಾರ್ಜುನ ಸ್ವಾಮಿ, ಕಾಂಗ್ರೆಸ್ ಮುಖಂಡೆ ವೀಣಾ, ಉಕ್ಕಲಗೆರೆ ಬಸವಣ್ಣ, ಗುರುಮೂರ್ತಿ, ಸೋಸಲೆ ಪರಶಿವಮೂರ್ತಿ, ಸೋಸಲೆ ಮಹದೇವಸ್ವಾಮಿ,ಮಾಜಿ ಅಧ್ಯಕ್ಷ ಪದ್ಮಾನಾಭ, ಗುತ್ತಿಗೆದಾರ ಎ.ಎನ್, ಸ್ವಾಮಿ,ಚಿದರಹಳ್ಳಿ ಚಂದ್ರಶೇಖರ್, ಯಾಚೇನಹಳ್ಳಿ ಶೆಂಕರೇಗೌಡ, ಹಿರಿಯೂರು ನವೀನ, ದೊಡ್ಡನಹುಂಡಿ ಮೂರ್ತಿ, ಮಾವಿನಹಳ್ಳಿ ಮಾದೇಶ,ಬೂದಹಳ್ಳಿ ಸಿದ್ದರಾಜು,ಗಡ್ದೆಮೊಳೆ ಸಿದ್ದರಾಜು ,ತಲಕಾಡು ಸುಂದರ ನಾಯಕ, ಕುಕ್ಕೂರು ಮಹೇಶ್, ಸುರೇಶ, ನಟರಾಜು, ಕೇತಹಳ್ಳಿ ಮಂಜು ಇತರರು ಹಾಜರಿದ್ದರು.