ಗ್ಯಾರಂಟಿಯಿಲ್ಲದ ಸರ್ಕಾರದಿಂದ ಜನರಿಗೆ ಏನು ಗ್ಯಾರಂಟಿ?

ಚನ್ನಮ್ಮನ ಕಿತ್ತೂರು,ಮೇ.21: ಗ್ಯಾರಂಟಿಯಿಲ್ಲದ ಸರ್ಕಾರ ಜನರಿಗೆ ಏನು ಗ್ಯಾರಂಟಿ ಕೊಡಬಲ್ಲದು. ಕಳೆದ ಒಂದು ವರ್ಷದಿಂದ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ. ಎಲ್ಲಿಯಾದರೂ ಅಭಿವೃದ್ಧಿಯಾಗಿದ್ದರೆ ತೋರಿಸಿಕೊಡಿ? ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಲ್ಲಿ ನೋಡಿದಲ್ಲಿ ದರೋಡೆಗಳು, ಕೊಲೆ ಪ್ರಕರಣಗಳು, ರಾಜ್ಯದ ಉದ್ದಗಲಕ್ಕೂ ಶಾಂತಿ-ಸುವ್ಯವಸ್ಥೆ ಹಾಳಾಗಿದ್ದು ಜನರ ಜೀವ ರಕ್ಷಣೆಗೆ ಈ ಸರ್ಕಾರದಲ್ಲಿ ಗ್ಯಾರಂಟಿಯೇ ಇಲ್ಲದ್ದಾಗಿದೆ ಎಂದರು.
ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ ಕಿತ್ತೂರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಶತಸಿದ್ದ ಎಂದರು.
ಈ ವೇಳೆ ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ, ಮುಖಂಡರಾದ ಚನ್ನಬಸಪ್ಪ ಮೊಕಾಶಿ, ಸಂದೀಪ ದೇಶಪಾಂಡೆ, ಮಹಾಂತೇಶ ಪಾಶ್ಚಾಪೂರ, ಶ್ರೀಕರ ಕುಲಕರ್ಣಿ, ಬಸವರಾಜ ಮಾತನವರ, ಉಳವಪ್ಪ ಉಳ್ಳಾಗಡ್ಡಿ, ಅಶ್ವಿನಿ ಪೂಜೇರಿ, ಬಸವರಾಜ ಆಸಂಗಿಮಠ, ಮಹಾದೇವ ಹತ್ತಿ, ಸೇರಿದಂತೆ ಇನ್ನಿತರರಿದ್ದರು.