ಗ್ಯಾರಂಟಿಯಿಂದ ಬರಗಾಲದ ತೊಂದರೆ ಕಾಣಿಸುತ್ತಿಲ್ಲಾ:ಶಾಸಕ ನಾಡಗೌಡ

ತಾಳಿಕೋಟೆ:ಮಾ.13: ಕಾಂಗ್ರೇಸ್ ಸರ್ಕಾರವು ಅಧಿಕಾರಕ್ಕೆ ಬರುವ ಮುಂಚೆ ನೀಡಿದ್ದ 5 ಗ್ಯಾರೆಂಟಿ ಯೋಜನೆಗಳನ್ನು ಸಾಕಾರಗೊಳಿಸಿದೆ ರಾಜ್ಯದಲ್ಲಿ ಸಂಪೂರ್ಣ ಬರಗಾಲ ಆವರಿಸಿದ್ದರೂ ಕೂಡಾ ಎಲ್ಲರ ಮುಖದಲ್ಲಿಯೂ ಈ ಗ್ಯಾರೆಂಟಿ ಯೋಜನೆಗಳಿಂದ ಮಂದಹಾಸ ಮೂಡುವಂತೆ ಮಾಡಿದೆ ಎಂದು ಕರ್ನಾಟಕ ಸರ್ಕಾರದ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಹೇಳಿದರು.
ಸೋಮವಾರರಂದು ಪಟ್ಟಣದ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ಬ್ಲಾಕ್ ಕಾಂಗ್ರೇಸ್ ಕಮಿಟಿ ವತಿಯಿಂದ ಹಮ್ಮಿಕೊಳ್ಳಲಾದ ಗ್ಯಾರೆಂಟಿ ಯೋಜನೆಯ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಗ್ಯಾರೆಂಟಿ ಯೋಜನೆಗಳ ಜಾರಿ ಸಮಯದಲ್ಲಿ ಯಾವುದೇ ಜಾತಿಯನ್ನು ಓಡಿಲ್ಲಾ, ಯಾವುದೇ ಪಕ್ಷವನ್ನು ನೋಡಿಲ್ಲಾ ಶ್ರೀಮಂತರು ಬಡವರು ಎಂಬ ವ್ಯತ್ಯಾಸವನ್ನು ಕೂಡಾ ಮಾಡಿಲ್ಲಾ ನುಡಿದಂತೆ ನಡೆಯುವಂತಹ ಕೆಲಸ ಕಾಂಗ್ರೇಸ್ ಸರ್ಕಾರ ಮಾಡಿದೆ ಗ್ಯಾರೆಂಟಿ ಯೋಜನೆಗಳಿಂದ ರಾಜ್ಯವು ದೀವಾಳಿಯಾಗುತ್ತಿದೆ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ ಅಧಿಕಾರ ಕಳೆದುಕೊಂಡಿರುವ ಅವರು ನಮ್ಮ ಸರ್ಕಾರದ ಯೋಜನೆಗಳನ್ನು ಕಂಡು ಹೊಟ್ಟೆ ಊರಿಯಿಂದ ಮಾತನಾಡುತ್ತಿದ್ದಾರೆ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ ಅಭಿವೃದ್ದಿ ಕಾರ್ಯಗಳನ್ನು ಆರಂಬಿಸಲಾಗಿದೆ ಬಿಜೆಪಿಯವರ ಸುಳ್ಳು ಆರೋಪವನ್ನು ನಂಬದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಯಾಗಿರುವ ರಾಜು ಆಲಗೂರ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿಯವರಿಗೆ ತಕ್ಕ ಉತ್ತರವನ್ನು ನೀಡಬೇಕೆಂದರು.
ಇನ್ನೋರ್ವ ಕಾಂಗ್ರೇಸ್ ಪಕ್ಷದ ಜಿಲ್ಲಾ ಅಧ್ಯಕ್ಷ ವಿಜಯಪುರ ಕಾಂಗ್ರೇಸ್ ಪಕ್ಷದ ಘೋಷಿತ ಲೋಕಸಭಾ ಅಭ್ಯರ್ಥಿ ರಾಜು ಆಲಗೂರ ಅವರು ಮಾತನಾಡಿ ಕಾಂಗ್ರೇಸ್ ಪಕ್ಷವು ಚುನಾವಣೆ ಸಂದರ್ಬದಲ್ಲಿ ನೀಡಿದ 5 ಗ್ಯಾರೆಂಟಿ ಯೋಜನೆಯ ಆಶ್ವಾಸನೆಯಂತೆ ಯೋಜನೆಗಳನ್ನು ಜಾರಿಗೆ ತಂದಿದೆ ನುಡಿದಂತೆ ನಡೆಯುವ ಸರ್ಕಾರ ಕಾಂಗ್ರೇಸ್ ಸರ್ಕಾರವಾಗಿದೆ ಬಿಜೆಪಿ ಸರ್ಕಾರ ಕೊಟ್ಟ ಆಶ್ವಾಸನೆಗಳನ್ನು ಇಡೇರಿಸುವಲ್ಲಿ ವಿಫಲವಾಗಿದ್ದು ಇದನ್ನು ಜನರ ಕಣ್ಣಿಗೆ ಮರೆ ಮಾಚಲು ಧರ್ಮಗಳ ನಡುವೆ ಜಗಳ ಹಚ್ಚುವ ಕೆಲಸಕ್ಕೆ ಮುಂದಾಗಿದೆ ಇಂತಹ ಬಿಜೆಪಿ ಪಕ್ಷವನ್ನು ದೂರಿಡುವದರ ಜೊತೆಗೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ತಮಗೆ ಆಶಿರ್ವದಿಸಬೇಕೆಂದರು.
ಕಾಂಗ್ರೇಸ್ ಪಕ್ಷದ ಮುಖಂಡರುಗಳಾದ ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ಡಾ.ಪ್ರಭುಗೌಡ ಲಿಂಗದಳ್ಳಿ, ಶಿವಶಂಕರಗೌಡ ಹಿರೇಗೌಡರ, ವಿಧ್ಯಾರಾಣಿ ತುಂಗಳ, ರಾಜು ರಾಯ್ಗೊಂಡ ಅವರು ಕಾಂಗ್ರೇಸ್ ಪಕ್ಷವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದರ ಕುರಿತು ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಗೆ ಬೆಂಬಲಿಸುವ ಕುರಿತು ಮಾತನಾಡಿದರು.
ಈ ಸಮಯದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡ ಸೈಯದಶಕೀಲಅಹ್ಮದ ಖಾಜಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೈಹಿಬೂಬ ಚೋರಗಸ್ತಿ, ಗುರಣ್ಣ ತಾರನಾಳ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ, ಪ್ರಭುಗೌಡ ಮದರಕಲ್ಲ, ಸುರೇಶಧನಿ ನಾಡಗೌಡ(ಬಿಂಜಲಭಾವಿ), ಕಾಶೀಮಪಟೆಲ ಮೂಕೀಹಾಳ, ಸಿದ್ದನಗೌಡ ಪಾಟೀಲ(ನಾವದಗಿ), ಶರಣುಧನಿ ದೇಶಮುಖ, ಇಬ್ರಾಹಿಂ ಮನ್ಸೂರ, ಸಂಗನಗೌಡ ಅಸ್ಕಿ, ಪುರಸಭಾ ಸದಸ್ಯರಾದ ಅಕ್ಕಮಹಾದೇವಿ ಕಟ್ಟಿಮನಿ, ಪುರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ನೀಲಮ್ಮ ಪಾಟೀಲ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಪರಶುರಾಮ ತಂಗಡಗಿ, ರಫೀಕ್ ಬೇಪಾರಿ, ಶ್ರೀಮತಿ ಅಶ್ವಿನಿ ಪಾಟೀಲ, ಮುಸ್ತಫಾ ಚೌದ್ರಿ, ಡಿ.ವ್ಹಿ.ಪಾಟೀಲ, ಮೋದಿನಸಾ ನಗಾರ್ಚಿ, ಶೋಭಾ ಶಳ್ಳಗಿ, ಚಿನ್ನುಧನಿ ನಾಡಗೌಡ, ರಮೀಜಾ ನಧಾಪ, ಮೊದಲಾದವರು ಉಪಸ್ಥಿತರಿದ್ದರು.

ವಾಯ್.ಎಸ್.ವಿಜಯಕರ ಸ್ವಾಗತಿಸಿದರು. ಅಬ್ದುಲಗನಿ ಮಕಾಂದಾರ ನಿರೂಪಿಸಿದರು.

ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರವು ನುಡಿದಂತೆ ನಡೆಯುತ್ತಿದೆ ರಾಜ್ಯದ ಜನರ ಹಿತಕ್ಕಾಗಿ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಬಿಜೆಪಿಯವರ ಕುತಂತ್ರ ಬುದ್ದಿ ಎಂದೂ ನಡೆಯುವದಿಲ್ಲಾ ಜನರಿಂದ ವಿಸ್ವಾಸ ಕಳೆದುಕೊಂಡಿರುವ ಬಿಜೆಪಿಯವರು ಹತಾಶರಾಗಿ ರಾಜ್ಯವು ಗ್ಯಾರೆಂಟಿಯಿಂದ ದೀವಾಳಿಯಾಗುತ್ತಿದೆ ಎನ್ನುತ್ತಿದ್ದಾರೆ.
                                    ಸಿ.ಎಸ್.ನಾಡಗೌಡ(ಅಪ್ಪಾಜಿ)
                                    ಶಾಸಕರು ಮುದ್ದೇಬಿಹಾಳ ಕ್ಷೇತ್ರ