ಗೌಸ್ ನಗರ-ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ರಾಯಚೂರು,ಏ.೦೯-
ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರ ಸಮ್ಮುಖದಲ್ಲಿ ಗೌಸ್ ನಗರ ಬಡಾವಣೆಯ ಎಲ್‌ಐಸಿ ವೀರೇಶ ನೇತೃತ್ವದಲ್ಲಿ ನೂರಾರು ಯುವಕರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಸೇರ್ಪಡೆಯಾದ ಕಾರ್ಯಕರ್ತರಿಗೆ ರವಿ ಬೋಸರಾಜು ಅವರು ಅಭೂತಪೂರ್ವವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಕೃಷ್ಣ ಮೂರ್ತಿ, ಹನುಮಂತು, ಕೆ ಹನುಮಂತು, ತಿರುಮಲೇಶ, ಪ್ರಭು ಉರುಕುಂದ, ವೀರಭದ್ತ ನವೀನ್ ಚಂದ್ರ, ವೀರಾಂಜನೆಯ್ಯ, ಶ್ರೀನಿವಾಸ್, ಅಭಿಷೇಕ್, ತಿಮ್ಮಪ್ಪ, ಶ್ರೀನಿವಾಸ್, ಮುದ್ದುರಂಗ ಸೇರಿದಂತೆ ಅನೇಕರು ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಉಪ್ಪೇಟ್ ಗೋವಿಂದ್ ರಡ್ಡಿ, ಶ್ರೀನಿವಾಸ್ ರಡ್ಡಿ, ಕುರಬದೊಡ್ಡಿ ಆಂಜನೇಯ್ಯ, ಅಖಿಲ್ ರಡ್ಡಿ, ಶಾಲಂ ಸೇರಿದಂತೆ ಅನೇಕರಿದ್ದರು.