ಗೌಸಾಬಾದ ತಾಂಡಾದ ರೈತನ ಕೊಲೆ ಪ್ರಕರಣ: ಉನ್ನತ ತನಿಖೆಗೆ ಯಾಕಾಪೂರ ಆಗ್ರಹ

ಚಿಂಚೋಳಿ,ಏ.1- ತಾಲೂಕಿನ ಗಡಿಭಾಗದ ಗೌಸಾಬಾದ ತಾಂಡಾದ ರೈತ ಮಾಣಿಕ ಹೀರು ಚವ್ಹಾಣ (65) ಎಂಬುವರ ಹತ್ಯೆಯ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಜೆಡಿಎಸ್ ಮುಖಂಡ ಸಂಜೀವನ ಯಾಕಪೂರ್ ಅವರು ಒತ್ತಾಯಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆವಲ ಶಂಕೆಯ ಆದಾರದ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಳ್ಳುವುದು ಸರಿಯಾದ ಕ್ರಮವಲ್ಲ. ಕೊಲೆ ಶಂಕೆಯ ಸತ್ಯತೆ ಹೊರ ತರಲು ಉನ್ನತ ಮಟ್ಟದ ತನಿಖೆಯ ಅಗತ್ಯವಿದೆ ಎಂದರು.
ಗೌಸಾಬಾದ ತಾಂಡದ ರೈತ ಮಾಣಿಕ ಹೀರು ಚವ್ಹಾಣರ ಕೋಲೆ ಪ್ರಕರಣದ ಚಿಂಚೋಳಿ ಠಾಣೆಯಲ್ಲಿ ದಾಖಲಾಗಿದೆ. ತಾಲೂಕಿನ ಕುಸ್ರಂಪಳ್ಳಿ ಗ್ರಾಮದ ಸೀಮೆಯಲ್ಲಿ ಜಮೀನು ಪಕ್ಕದಲ್ಲಿ ಅರಣ್ಯ ಇಲಾಖೆಯ ಸಂಬಂದಪಟ್ಟ ವನ್ಯಜೀವಿಯ ಬೆಂಕಿ ಹತ್ತಿದೆ ಎಂದು ದೂರು ಬಂದಾಗ ಬೆಂಕಿ ನಂದಿಸಲು ಅರಣ್ಯ ಇಲಾಖೆಯ ಗಾರ್ಡ್ ಗಳಾದ ಹಣಮಂತ ದೇವಪ್ಪಾ ನರಸಪ್ಪ ಸಂಬಣ್ಣ ನರಸಪ್ಪಾ. ರಾಜು ಬಕ್ಕಪ್ಪಾ. ಪಂಡರಿ ರಾಮಣ್ಣಾ. ತೆರಳಿದರು ಈ ಸಂದರ್ಭದಲ್ಲಿ ಗೌಸಾಬಾದ ತಾಂಡದ ರೈತ ಮಾಣಿಕ ಹೀರು ಚವ್ಹಾಣ. ಅವರು, ತಮ್ಮ ಹೊಲದಲ್ಲಿ ಮೃತಪಟ್ಟಿದ್ದನ್ನು ಕಂಡು ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಗಾರ್ಡಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ವಿಷಯ ತಿಳಿಸಿದ್ದಾರೆ ಆದರೇ ಅವರ ವಿರುದ್ಧವೇ ಶಂಕಿಸಿ ಮೃತನ ರೈತನ ಮಗ ಚಿಂಚೋಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೇವಲ ಶಂಕೆಯ ಆದಾರದ ಮೇಲೆ ದಾಖಲಿಸಲಾಗಿರುವ ಪ್ರಕರಣವನ್ನು ಕೂಡಲೇ ಹಿಂದೆ ಪಡೆಯಬೇಕು ಅರಣ್ಯ ಇಲಾಖೆಯ ಗಾಡಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಹೋಗಿದ್ದಾಗ ಸಂದರ್ಭದಲ್ಲಿ ಘಟನೆ ನಡೆದಿದೆ ಎಂಬ ಸತ್ಯತೆಯನ್ನು ಪೊಲೀಸರು ಮನಗಾಣಬೇಕು. ಉನ್ನತ ಮಟ್ಟದ ತನಿಖೆ ಮಾಡಿ ನಂತರವೇ ಸತ್ಯಾಸತ್ಯತೆ ಬಗ್ಗೆ ಅರಿತುಕೊಂಡು ಪ್ರಕರಣ ದಾಖಲಿಸಿಕೊಳ್ಳಬೇಕು.
ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಆದರೆ ಅರಣ್ಯ ರಕ್ಷಣೆ ಮಾಡಲು ಹೋದ ಅರಣ್ಯ ಇಲಾಖೆ ಗಾರ್ಡಗಳ ವಿರುದ್ಧ ಶಂಕೆಯ ಮೇಲೆ ಆಪಾದನೆ ಮಾಡುವುದರಿಂದ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಲು ಸಿಬ್ಬಂದಿಗಳಿಗೆ ತೊಂದರೆ ಆಗಬಹುದು ಅದರಿಂದ ಈ ಪ್ರಕರಣವನ್ನು ಕೂಡಲೇ ಉನ್ನತ ಮಟ್ಟದ ತನಿಖೆ ಮಾಡಬೇಕೆಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ. ಜೆಡಿಎಸ್ ಪಕ್ಷದ ತಾಲೂಕ ಅಧ್ಯಕ್ಷರಾದ ರವಿಶಂಕರ್ ರೆಡ್ಡಿ ಮುತ್ತಂಗಿ. ಜೆಡಿಎಸ್ ಪಕ್ಷದ ಮುಖಂಡರಾದ ವಿಷ್ಣುಕಾಂತ ಮೂಲಗಿ. ಸಿದ್ದು ಬುಬುಲಿ. ಹಣಮಂತ ಪೂಜಾರಿ. ಓಮನರಾವ ಕೊರವಿ. ಸಂತೋಷ ಬೊಮ್ಮನಹಳ್ಳಿ. ಇದ್ದರು