ಗೌಳಿ ಸಮಾಜಕ್ಕೂ ಮಾನ್ಯತೆ ನೀಡಲು ಸರ್ಕಾರಕ್ಕೆ ಮನವಿ

ಹೊಸಪೇಟೆ ಜೂ 03: ಕರೋನಾ ಮಹಾಮಾರಿಯ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅನೇಕ ಸಮಾಜಗಳಿಗೆ ನೆರವು ನೀಡಿದಂತೆ ಗೌಳಿ ಸಮಾಜಕ್ಕೂ ನೀಡಬೇಕು ಎಂದು ರಾಜ್ಯ ಗೌಳಿ ಸಮಾಜ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತು ಮುಖ್ಯ ಮಂತ್ರಿಗಳಿಗೆ ಹೊಸಪೇಟೆ ಉಪವಿಭಾಗಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ ಗೌಳಿಗರ ಸಂಘದ ಪದಾಧಿಕಾರಿಗಳು ಆರ್ಥಿಕ ಸಂಕಷ್ಟದಲ್ಲಿರುವ ಅನೇಕ ಸಮಾಜಗಳಿಗೆ ನೆರವು ಪ್ರಕಟಿಸಿದ್ದು ಅತ್ಯಂತ ಸ್ವಾಗತಾರ್ಹ ಕ್ರಮವಾಗಿದೆ ಆದರೆ ಗೌಳಿ ಸಮಾಜವೂ ಬಹುತೇಕ ಹೈನುಗಾರಿಕೆಯಿಂದಲೇ ಜೀವನ ನಡೆಸುತ್ತಿದ್ದು, ನಾವು ನಂಬಿರುವ ದನಕರುಗಳು ಸಹ ಲಾಕ್‍ಡೌನ್ ನಿಂದ ಮೇವುದೊರಕದಂತಾಗಿದೆ ತುಂಬಾ ಕಷ್ಟನುಭವಿಸುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮೇವು ಬ್ಯಾಂಕ್ ತೆರೆಯುವ ಮೂಲಕ ನಮ್ಮ ಸಮಾಜ ಸೇರಿದಂತೆ ಹೈನುಗಾರಿಕೆಯಲ್ಲಿ ತೊಡಗಿರುವ ಜನರ ನೆರವಿಗೂ ಬರಬೇಕು, ಕಡಿಮೆ ದರದಲ್ಲಿ ಮೇವು ಸಿಗುವಂತಾಗಬೇಕು, ಹೈನುಗಾರಿಕೆಯಲ್ಲಿ ತೊಡಗಿರುವ ಜನರಿಗೆ ಆರ್ಥಿಕ ನೆರವನ್ನು ನೀಡಬೇಕು ಅಂದಾಗ ಮಾತ್ರ ಹೈನುಗಾರಿಕೆಯನ್ನು ಮುಂದುವರೆಸಲು ಸಾಧ್ಯವಾಗಲಿದೆ ಎಂದು ಮನವಿಯಲ್ಲಿ ಸರ್ಕಾರವನ್ನು ಹಾಗೂ ಇಲಾಖೆಯ ಸಚಿವರನ್ನು ಗೌಳಿ ಸಮಾಜ ಆಗ್ರಹಿಸಿದೆ.
ಉವಿಭಾಗಾಧಿಕಾರಿ ಸಿದ್ಧರಾಮೇಶ್ವರವರ ಮೂಲಕ ಮನವಿ ಸಲ್ಲಿಸುವ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಗೌಳಿ ಕುಮಾರ, ತಾಲೂಕಾಧ್ಯಕ್ಷ ಗೌಳಿ ಯಲ್ಲಪ್ಪ, ಗೌಳಿಗರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರುದ್ರಪ್ಪ ಈಶಪ್ಪ, ಗೌಳಿ ಬಸವರಾಜ ಸೇರಿದಂತೆ ಇತರರು ಪಾಲ್ಗೊಂಡಿದ್ದರು.