ಗೌರಿ ಬಳಿಕ ಮಹಾಲಕ್ಷ್ಮಿ ರವಿಚಂದ್ರನ್ ಹೊಸ ಚಿತ್ರ

* ಚಿ.ಗೋ ರಮೇಶ್

ಕ್ರೇಜಿಸ್ಟಾರ್ ರವಿಚಂದ್ರನ್  ಅವರ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ ಅದರ ಸಾಲಿಗೆ ಇದೀಗ ಮತ್ತೊಂದು ಸೇರ್ಪಡೆ ” ಮಹಾಲಕ್ಷ್ಮಿ”. “ಗೌರಿ” ಬಳಿಕ‌ ರವಿಚಂದ್ರನ್ ” ಮಹಾಲಕ್ಷ್ಮಿ” ಹಿಂದೆ ಬಿದ್ದಿದ್ದಾರೆ‌.‌ ಮಹಾಲಕ್ಷ್ಮಿ ಭಕ್ತಿ ಪ್ರಧಾನ‌ ಚಿತ್ರವಾಗಿದೆ. ರವಿಚಂದ್ರನ್ ಇದೇ‌ ಮೊದಲ‌ ಬಾರಿಗೆ ಈ ರೀತಿಯ ಜಾನರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರವಿಚಂದ್ರನ್  ಅವರಿಗಾಗಿ ಎನ್. ಎಸ್ ರಾಜ್ ಕುಮಾರ್‌ ನಿರ್ಮಾಣ ಮಾಡುತ್ತಿರುವ ” ಮಹಾ ಲಕ್ಷ್ಮಿ ” ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ವಿಷಯವನ್ನು ನಿರ್ದೇಶಕ ಪುರುಷೋತ್ತಮ ಪ್ರಕಟಿಸಿ ಚಿತ್ರ ಸದ್ಯದಲ್ಲಿಯೇ ಆರಂಭವಾಗಲಿದೆ ಎಂದು ಹೇಳಿದರು.

ಗೌರಿ ಚಿತ್ರದಲ್ಲಿ ನಟಿಸಿದ್ದ ರವಿಚಂದ್ರನ್ ಇದೀಗ ಮಹಾಲಕ್ಣ್ಮಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಕಥೆ, ಏನು,ಯಾವಾಗ ಚಿತ್ರೀರಣ ಎನ್ನುವ ಮಾಹಿತಿಯನ್ನು ನಿರ್ದೇಶಕರು ಬಿಟ್ಟುಕೊಡಲಿಲ್ಲ.

ಮೊನ್ನೆಯಷ್ಟೇ ರವಿಚಂದ್ರನ್ ಅವರ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಈ ನಡುವೆ ಹುಟ್ಟುಹಬ್ಬದ ಉಡುಗೊರೆಯಾಗಿ ಒಂದೊಂದೇ ಚಿತ್ರಗಳು ಅವರ ಖಾತೆಗೆ ಸೇರಿಕೊಂಡಿವೆ.

ರವಿಚಂದ್ರನ್ ಮತ್ತು ಎನ್ ಎಸ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ  ಕ್ರೇಜಿಸ್ಟಾರ್ ,ಕನ್ನಡಿಗ, ಗೌರಿ ಚಿತ್ರಗಳಲ್ಲಿ‌ ಕಾಣಿಸಿಕೊಂಡಿದ್ದರು.. ಇದೀಗ ” ಮಹಾಲಕ್ಷ್ಮಿ” ಚಿತ್ರದಲ್ಲಿ ನಟಿಸಲು ರವಿಚಂದ್ರನ್ ಮುಂದಾಗಿದ್ದಾರೆ.

ಎಲ್ಲೆಲ್ಲಿ‌ ಚಿತ್ರೀಕರಣ ಎನ್ನುವುದನ್ನು ಚಿತ್ರತಂಡ ಸದ್ಯದಲ್ಲಿಯೇ ಮಾಹಿತಿ ನೀಡುವ ಸಾದ್ಯತೆ ಗಳಿವೆ.ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ‌ ಜೂನ್ ತಿಂಗಳಲ್ಲಿ ಮುಹೂರ್ತ ನಡೆಯಲಿದೆ.

ಸಾಲು ಸಾಲು ಚಿತ್ರ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕೈಯಲ್ಲಿ ಇದೀಗ ಸಾಲು ಸಾಲು ಚಿತ್ರಗಳಿವೆ ಅದರ ಸಾಲಿಗೆ ಇದೀಗ ಮತ್ತೊಂದು ಹೊಸ ಸೇರ್ಪಡೆ “ಮಹಾಲಕ್ಷ್ಮಿ” . ಭಕ್ತಿ ಪ್ರಧಾನ ಚಿತ್ರ ಇದಾಗಿದ್ದು ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಸೆಟ್ಟೇರುವ ಸಾಧ್ಯತೆಗಳಿವೆ. ನಾಲ್ಕನೇ ಬಾರಿ ರವಿಚಂದ್ರನ್ ಅವರಿಗೆ ಎನ್ಎಸ್ ರಾಜಕುಮಾರ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ