ಗೌರಿ ಗಣೇಶ ಹಬ್ಬ ಹಿನ್ನಲೆ ಗಜಪಡೆಗೆ ವಿಶೇಷ ಪೂಜೆ

ಸಂಜೆವಾಣಿ ನ್ಯೂಸ್
ಮೈಸೂರು: ಸೆ.19:- ಗೌರಿ ಗಣೇಶ ಹಬ್ಬ ಹಿನ್ನಲೆ ಅರಮನೆಯಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಅರಮನೆ ಅಂಗಳದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಪೂಜೆ ನೆರವೇರಿಸಲಾಯಿತು.
ದಸರಾ ಆನೆಗಳಿಗೆ ಹೂವಿನ ಹಾರ ಹಾಕಿ, ಕಬ್ಬು, ಸಿಹಿ ತಿನಿಸು ನೀಡಿ ಪೂಜೆ ಸಲ್ಲಿಸಲಾಯಿತು.ಅರಮನೆ ಅರ್ಚಕ ಪ್ರಹ್ಲಾದ್ ನೇತೃತ್ವದಲ್ಲಿ ಪೂಜೆ ನೆರವೇರಿತು. ಕ್ಯಾಪ್ಟನ್ ಅಭಿಮನ್ಯು, ಮಾಜಿ ಕ್ಯಾಪ್ಟನ್ ಅರ್ಜುನ, ಭೀಮ, ವಿಜಯ, ವರಲಕ್ಷ್ಮೀ, ಕಂಜನ್, ಗೋಪಿ, ಧನಂಜಯ, ಮಹೇಂದ್ರ ಆನೆಗಳಿಗೆ ಪೂಜೆ ನೆರವೇರಿಸಲಾಯಿತು. ಜಿಲ್ಲಾಡಳಿತ, ಅರಮನೆ ಮಂಡಳಿಯಿಂದ ಪೂಜೆ ನಡೆಯಿತು.