ಗೌರಿಪುರ  ಹೊಸೂರು ಗ್ರಾಮಸ್ಥರಿಂದ  ಮತದಾನ ಬಹಿಷ್ಕಾರ ; ತಹಶೀಲ್ದಾರ್ ಗೆ ಮನವಿ

ಜಗಳೂರು.ಏ.೨೨-: ತಾಲೂಕಿನ ಕ್ಯಾಸೇನಹಳ್ಳಿ  ಗ್ರಾಮ ಪಂಚಾಯತಿ ವ್ಯಾಪ್ತಿಯ ಗೌರಿಪುರ ಹೊಸೂರು ಗ್ರಾಮದ ನಿವಾಸಿಗಳಿಂದ ಮತದಾನ ಬಹಿಷ್ಕಾರ ಮಾಡಲಾಗುವುದೆಂದು ಗೌರಿಪುರ ಹೊಸೂರು ಗ್ರಾಮಸ್ಥರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆನಂತರ ಗ್ರಾಮದ ಯುವ ಮುಖಂಡ ಹಾಗೂ ವಕೀಲ ಮೈಲೇಶ್ ಮಾತನಾಡಿ ನಮ್ಮ ಗ್ರಾಮದಲ್ಲಿ 300ಕ್ಕೂ ಅಧಿಕ ಮತ ಗಳನ್ನು ಹೊಂದಿದ್ದು 100ಕ್ಕೂ ಹೆಚ್ಚು ಮನೆಗಳಿವೆ ಈ ಪ್ರದೇಶದಲ್ಲಿ ಬಡ ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಾಗಿ ಜೀವನ ನಡೆಸುತ್ತಿದ್ದಾರೆ, 2002-03ನೇ ಸಾಲಿನಲ್ಲಿ ಸರ್ಕಾರ ದಿಂದ 75 ಫಲಾನುಭವಿಗಳಿಗೆ ಗುಂಪು ಆಶ್ರಯ ಮನೆ ಯೋಜನೆಯಡಿ ಮನೆ ನೀಡಲಾಗಿತ್ತು ಇದರ ಸುತ್ತ ಇದ್ದ ಖಾಲಿ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿ ದ್ದಾರೆ ಇವರಿಗೆ ಹಕ್ಕು ಪತ್ರ ನೀಡುವಂತೆ ಗ್ರಾಮ ಪಂಚಾಯಿತಿ, ಹಾಗೂ ತಾಲೂಕು ಕಚೇರಿ ಸೇರಿದಂತೆ ಜನ ಪ್ರತಿನಿಧಿಗಳ ಹತ್ತಿರ ಹಲವಾರು ಭಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಅದ್ದರಿಂದ ಈ ಭಾರಿಯ ವಿಧಾನ ಸಭೆ ಚುನಾವಣೆಯಲ್ಲಿ ಮತ ದಾನ ಮಾಡದೇ ಬಹಿಷ್ಕಾರ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಸತ್ಯ ಮೂರ್ತಿ,ತಿಪ್ಪೇಶ್.ಸತೀಶ ಹನುಮಂತ್ ರಾಜ, ನರೇಶ, ನಿರಂಜನ.ಪ್ರಕಾಶ. ಶ್ರೀಧರ ನಾಗರಾಜ. ಹನು ಮಂತಪ್ಪ.ಪಾಪಮ್ಮ. ಪಾಲಮ್ಮ, ಬಸವರಾಜಪ್ಪ, ಅಜ್ಜಯ್ಯ. ಗಂಗಮ್ಮ. ಸೇರಿದಂತೆ ಗೌರಿಪುರ ಹೊಸೂರಿನ ಊರಿನ ಮುಖಂಡರುಗಳು ಇದ್ದರು